ಅಪ್ಪ,ಅಮ್ಮ ಬೇಡ.. ಅವರ ಆಸ್ತಿ ಬೇಕು…!
ಬೆಳಗಾವಿ-ಮುಪ್ಪಿನಾವಸ್ಥೆಯಲ್ಲಿರುವ ತಂದೆ ತಾಯಿಯ ಸೇವೆ ಮಾಡದೇ ತಂದೆ ತಾಯಿಗೆ ಅಡುಗೆ ಮಾಡಿ ಊಟ ಹಾಕದೇ ತಂದೆ ಹೆಸರಿನಲ್ಲಿರುವ ಎಲ್ಲ ಆಸ್ತಿಯನ್ನು ತನ್ನ ಹೆಸರಿಗೆ ಮಾಡುವಂತೆ ಮಗನೊಬ್ಬ ತಮಗೆ ಕಿರುಕಳ ನೀಡುತ್ತಿದ್ದಾನೆ ನಮಗೆ ನ್ಯಾಯ ಕೊಡಿ ಎಂದು ಹೆತ್ತವರು ಜಿಲ್ಲಾಧಿಕಾರಿಗಳ ಮೊರೆ ಹೋದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ
ಬೆಳಗಾವಿಯ ಶಹಾಪೂರನಲ್ಲಿರುವ ಪವಾರ ಕುಟುಂಬ ತಮಗೆ ನ್ಯಾಯ ಕೊಡಿಸುವಂತೆ ಬೆಳಗಾವಿ ಉಪವಿಭಾಗಾಧಕಾರಿಗಳ ಮೊರೆ ಹೋಗಿ ಮಗನ ವಿರುದ್ಧ ಪ್ರಕರಣ ದಾಖಲಿಸಿದರೂ ಉಪ ವಿಭಾಗಾಧಿಕಾರಿಗಳು ಇದು ಕಾನೂನು ವ್ಯಾಪ್ತಿಗೆ ಬರುವದಿಲ್ಲ ಎಂದು ಹಿರಿಯ ನಾಗರಿಕರಿಗೆ ಅನ್ಯಾಯ ಮಾಡಿದ್ದು ಜಿಲ್ಲಾಧಕಾರಿಗಳು ಈ ಪ್ರಕರಣವನ್ನು ಊನ್ನತ ಮಟ್ಟದ ತನಿಖೆಗೆ ಒಪ್ಪಿಸುವಂತೆ ಜೇಷ್ಠ ನಾಗರಿಕರ ಸೊಸಾಯಿಟಿ ಒತ್ತಾಯಿಸಿದೆ
ಜಿಲಾಧಕಾರಿಗಳಿಗೆ ಮನವಿ ಅರ್ಪಿಸಿದ ಬಳಿಕ ಮಾದ್ಯಮಗಳ ಜತೆ ಮಾತನಾಡಿದ ಪವಾರ ಕುಟುಂಬ ಶಹಾಪೂರನಲ್ಲಿ ನಮ್ಮ ಆಸ್ಥಿ ಇದೆ ನಮ್ಮ ಮಗ ಮತ್ತು ಸೊಸೆ ನಮ್ಮ ಸೇವೆಯನ್ನು ಮಾಡದೇ ನಮಗೇ ಸೇರಿದ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ನಮಗೆ ಕಿರುಕಳ ಕೊಡುತ್ತಿದ್ದಾನೆ ಮೊಮ್ಮಕ್ಕಳನ್ನು ಮುದ್ದುಮಾಡಲು ಬಿಡುತ್ತಿಲ್ಲ ಕಳೆದ ವಂದು ವರ್ಷದಿಂದ ನಾವೇ ಅಡುಗೆ ಮಾಡಿಕೊಳ್ಳುತ್ತಿದ್ದೇವೆ ಮಗನಿಂದ ನಮಗೆ ತೊಂದರೆ ಆಗಿದೆ ಹಿರಿಯ ನಾಗರಿಕರ ಆಸ್ಥಿಯನ್ನು ಸಂರಕನೆ ಮಾಡಬೆಕೆಂದು ಕಾನೂನು ಇದ್ದರೂ ನಮಗೆ ನ್ಯಾಯ ದೊರೆಯುತ್ತಿಲ್ಲ ಎಂದು ಪವಾರ ಕುಟುಂಬ ಮಾದ್ಯಮಗಳ ಎದುರು ಕಣ್ಣಿರು ಹಾಕಿತು
ಮುಪ್ಪಿನಾವಸ್ಥೆಯಲ್ಲಿ ತಮ್ಮ ಮಕ್ಕಳು ನಮಗೆ ಆಸರೆಯಾಗಬಹುದೆಂದು ನಂಬಿದ ಪಾಲಕರು ಮಕ್ಕಳಿಂದಲೇ ತೊಂದರೆ ಅನುಭವಿಸುತ್ತರಿವದು ದೊಡ್ಡ ದುರಂತ
ಇದೇ ರೀತಿಯ ಮೂರು ಪ್ರಕರಣಗಳಲ್ಲಿ ಹಿರಿಯ ನಾಗರಿಕರಿಗೆ ನ್ಯಾಯ ಸಿಗುತ್ತಿಲ್ಲ ಬೆಳಗಾವಿ ಉಪ ವಿಭಾಗಾಧಕಾರಿಗಳಿಗೆ ಕಾನೂನಿನ ಅರಿವೂ ಇಲ್ಲದಿದ್ದರೆ ಅವರು ನ್ಯಾಯಾಧಿಕರಣ ವ್ಯಾಪ್ತಿಯಿಂದ ನಿರ್ಗಮಿಸಲಿ ಎಂದು ಜೇಷ್ಠ ನಾಗರಿಕರ ಸಂಘ ಒತ್ತಾಯಿಸಿದೆ
Check Also
ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …