ಬೆಳಗಾವಿ- ಬೆಳಗಾವಿ ನಗರದಲ್ಲಿ ಆರು ಇಂದಿರಾ ಕ್ಯಾಂಟೀನ್ ಗಳು ಮಂಜೂರಾಗಿದ್ದು ಮಾದರಿ ಇಂದಿರಾ ಕ್ಯಾಂಟೀನ್ ಕಟ್ಟಡ ಫಟಾ ಫಟ್ ಅಂತಾ ನಗರದ ನಾಥ ಫೈ ಸರ್ಕಲ್ ನಲ್ಲಿ ರೆಡಿಯಾಗುತ್ತಿದೆ
ವಿಶೇಷ ಕ್ರೇನ್ ಗಳನ್ನು ಬಳಿಸಿ ಕಾಂಕ್ರೀಟ್ ಬಿಡಿ ಭಾಗಗಳಿಗೆ ಬೋಲ್ಟ್ ಬಿಗಿದು ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ಸಿದ್ಧಪಡಿಸಲಾಗುತ್ತಿದೆ
ಬೆಳಗಾವಿಯ ನಾಥ ಪೈ ಸರ್ಕಲ್ ನಲ್ಲಿ ಜೋಡಿಸಲಾಗುತ್ತಿರುವ ಇಂದಿರಾ ಕ್ಯಾಂಟೀನ್ ಕಟ್ಟಡ ಬುಧವಾರ ಸಂಜೆಯೊಳಗೆ ರೆಡಿಯಾಗಲಿದ್ದು ಬಸವೇಶ್ವರ ಸರ್ಕಲ್ ( ಗೋವಾವೇಸ್) ನಲ್ಲಿ ಇಂದಿರಾ ಕ್ಯಾಂಟೀನ್ ಕಾಮಗಾರಿ ಆರಂಭವಾಗಿದೆ
ಈ ಕುರಿತು ಮಾಹಿತಿ ನೀಡಿದ ಪಾಲಿಕೆ ಆಯುಕ್ತ ಶಶಿಧರ ಕುರೇರ ಬೆಳಗಾವಿಯಲ್ಲಿ ಆರು ಇಂದಿರಾ ಕ್ಯಾಂಟೀನ್ ಕಟ್ಟಡಗಳನ್ನು ನಿರ್ಮಿಸಲು ಜಾಗೆ ಗುರುತಿಸಿ ನಾಥ ಪೈ ಸರ್ಕಲ್ ನಲ್ಲಿ ಮಾಡೆಲ್ ಸ್ಟ್ರಕ್ಚರ್ ನಿರ್ಮಿಸಲಾಗುತ್ತಿದೆ ಫೆಬ್ರುವರಿ ಮೊದಲ ಅಥವಾ ಎರಡನೇಯ ವಾರದಲ್ಲಿ ಮುಖ್ಯಮಂತ್ರಿಗಳು ಬೆಳಗಾವಿಗೆ ಬರಲಿದ್ದು ಧರ್ಮನಾಥ ಸರ್ಕಲ್ ಬಳಿ ನಿರ್ಮಿಸಲಾಗಿರುವ ಇಂಡೋರ್ ಸ್ಟೇಡಿಯಮ್ ಸರ್ದಾರ್ ಮೈದಾನದ ಪ್ರೇಕ್ಷಕರ ಗ್ಯಾಲರಿ ಹಾಗು ಸ್ವೀಮಿಂಗ್ ಫೂಲ್ ಗಳನ್ನು ಸಿಎಂ ಅವರೇ ಉದ್ಘಾಟಿಸುವ ಸಾಧ್ಯತೆ ಇದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದು ಇದೇ ದಿನ ಇಂದಿರಾ ಕ್ಯಾಂಟೀನ್ ಇಡ್ಲಿ ನಗರ ನಿವಾಸಿಗಳ ಕೈಗೆಟುಕಲಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ