ಬೆಳಗಾವಿ- ನಗರದಲ್ಲಿರುವ ಐನಾಕ್ಸ ಚಿತ್ರಮಂದಿರದ ಕ್ಯಾಂಟೀನ್ ದಲ್ಲಿ ಆಹಾರ ಪದಾರ್ಥ ಮತ್ತು ನೀರಿನ ಬಾಟಲ್ ಗಳಿಗೆ ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿ ಜಯರಾಮ ಅವರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಉಪ ವಿಭಾಗಾಧಿಕಾರಿಗಳು ಚಿತ್ರಮಂದಿರದ ಮೇಲೆ ಹಠಾತ್ ದಾಳಿ ಮಾಡಿ ಚಿತ್ರಮಂದಿರವನ್ನು ಸೀಜ್ ಮಾಡಿದ್ದಾರೆ
ಬೆಳಗಾವಿ ಎಸಿ ಕವಿತಾ ಯೋಗಪ್ಪನವರ, ತಹಸೀಲ್ದಾರ ಗಿರೀಶ ಸ್ವಾಧಿ ನೇತೃತ್ವದ ತಂಡದಿಂದ ದಾಳಿ ನಡೆಸಿ ಸೀಜ್. ಮಾಡಿದೆ ಐನಾಕ್ಸ ಮಾಲನಲ್ಲಿ ದುಬಾರಿ ಬೆಲೆಯಲ್ಲಿ ನೀರು ಮಾರಾಟ ಹಿನ್ನಲೆ ದಾಳಿ ಮಾಡಲಾಗಿದೆ
ದಾಳಿ ವೇಳೆಗೆ ೨೦ರುಪಾಯಿ ಮೌಲ್ಯದ ಕಿನ್ಲೇ ನೀರಿನ ಬಾಟಲಗೆ ೫೦ ಹಣ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ ಇಲ್ಲಿ ನಡೆಯುತ್ತಿರುವ ಸುಲಿಗೆ ಕುರಿತು ಡಿಸಿ ಎನ.ಜಯರಾಮ ಅವರಿಗೆ ಸಾರ್ವಜನಿಕ ದೂರು ನೀಡಿದ್ದರು.. ಈ ಹಿನ್ನಲೆಯಲ್ಲಿ ಅಧಿಕಾರಿಗಳ ತಂಡ ಗ್ರಾಹಕರ ಸೊಗಿನಲ್ಲಿ ದಿಢೀರ ದಾಳಿ, ಪರೀಶಿಲನೆ. ಮಾಡಿದೆ
ಚಿತ್ರಮಂದಿರದ ಸಿಬ್ಬಂದಿಗೆ ಅಧಿಕಾರಿಗಳಿಂದ ತರಾಟೆ.. ಎಂ.ಆರ.ಪಿ ದರದಲ್ಲಿ ಮಾರಾಟ ಮಾಡದ ಹಿನ್ನಲೆ ತರಾಟೆಗೆ.ತೆಗೆದುಕೊಂಡಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ