Breaking News

ಕನ್ನಡದ ಮೇಯರ್ ಆಗೋದನ್ನು ತಪ್ಪಿಸಲು ಸಾಧ್ಯವೇ ಇಲ್ಲ…!!!

ಬೆಳಗಾವಿ- ಬೆಳಗಾವಿ ಮೇಯರ್ ಹಾಗು ಉಪ ಮೇಯರ್ ಅವಧಿ ಮಾರ್ಚ ತಿಂಗಳ ಅವಧಿಗೆ ಮುಗಿಯಲಿದ್ದು ಸರ್ಕಾರ ಮೇಯರ್ ಹಾಗು ಉಪ ಮೇಯರ್ ಸ್ಥಾನ ಗಳಿಗೆ ಮೀಸಲಾತಿ ಪ್ರಕಟಿಸಿದೆ

ಗಡಿನಾಡು ಕನ್ನಡಿಗರ ಪಾಲಿಗೆ ಈ ದಿನ ಹಬ್ಬದ ದಿನ ಯಾಕೆಂದರೆ ಈ ಬಾರಿ ಕನ್ನಡದ ಮೇಯರ್ ಆಗೋದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಮೇಯರ್ ಸ್ಥಾನ ಎಸ್ ಟಿ ವರ್ಗಕ್ಕೆ ಮೀಸಲಿಡಲಾಗಿದ್ದು ಈ ವರ್ಗಕ್ಕೆ ಸೇರಿದ ನಗರ ಸೇವಕರು ಎಂಈಎಸ್ ಗುಂಪಿನಲ್ಲಿ ಇಲ್ಲವೇ ಇಲ್ಲ ಹೀಗಾಗಿ ಕನ್ನಡ ಗುಂಪಿನಲ್ಲಿರುವ ಇಬ್ಬರಿಗೆ ಮೇಯರ್ ಸ್ಥಾನ ಯಾವ ಕಸರತ್ತು ಇಲ್ಲದೇ ತಾನಾಗಿಯೇ ಒಲಿಯಲಿದೆ

ಕನ್ನಡ ಗುಂಪಿನಲ್ಲಿ ಬಸಪ್ಪ ಚಿಕ್ಕಲದಿನ್ನಿ,ಹಾಗು ಸಂಜೋತಾ ಗಂಡಗುದರಿ ಎಸ್ ಟಿ ವರ್ಗಕ್ಕೆ ಸೇರಿದ ನಗರ ಸೇವಕರಾಗಿದ್ದು ಇಬ್ಬರಲ್ಲಿ ಒಬ್ಬರು ಬೆಳಗಾವಿ ಮೇಯರ್ ಆಗುವದರಲ್ಲಿ ಸಂದೇಹವೇ ಇಲ್ಲ

ಕನ್ನಡ ಸಂಘಟನೆಗಳು ಕನ್ನಡದ ಮೇಯರ್ ಮಾಡಿ ಎಂದು ಹೋರಾಟವೂ ಮಾಡಬೇಕಾಗಿಲ್ಲ ಜೊತೆಗೆ ಜಿಲ್ಲಾ ಮಂತ್ರಿ ಬಹುಮತ ಸಾಭೀತು ಮಾಡಲು ತಾಲೀಮು ಮಾಡುವ ಅಗತ್ಯ ವಿಲ್ಲ ಸರ್ಕಾರ ಪ್ರಟಿಸಿರುವ ಕೆಟಗರಿ ಕನ್ನಡಿಗರ ಪಾಲಿಗೆ ವರದಾನ ಆಗಿದೆ

ಉಪ ಮೇಯರ್ ಸ್ಥಾನ ಹಿಂದುಳಿದ ಅ ವರ್ಗ ಮಹಿಳೆಗೆ ಮೀಸಲಿಡಲಾಗಿದ್ದು ಎಂ ಈಎಸ್ ಈ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ

ಎಂಈಎಸ್ ಗುಂಪಿನಲ್ಲಿ ಎಸ್ ಟಿ ವರ್ಗಕ್ಕೆ ಸೇರಿದ ನಗರ ಸೇವಕರು ಯಾರೂ ಇಲ್ಲವಲ್ಲ ಅಂತ ಎಂಈಎಸ್ ನಾಯಕರು ಕಂಗಾಲಾಗಿದ್ದಾರೆ

Check Also

ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಯುವಕನ ಆತ್ಮಹತ್ಯೆ

ಬೆಳಗಾವಿ-70 ಸಾವಿರ ಬೆಲೆಯ,ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇಷ್ಟೊಂದು ದುಬಾರಿ ಐಪೋನ್ …

Leave a Reply

Your email address will not be published. Required fields are marked *