ಬೆಳಗಾವಿ- ಶುಕ್ರವಾರ ಹಿಂದೂ ಧರ್ಮದ ಪವಿತ್ರ ದಿನ ಈದಿನ ಶಿವನಾಮ ಸ್ಮರಣೆ ಮಾಡುವ ಶಿವ ಭಜನೆ ಮಾಡುವ ದಿನ ಶಿವರಾತ್ರಿ..ಶುಕ್ರವಾರ ಇಡೀ ಬೆಳಗಾವಿ ನಗರ ಶಿವಮಯವಾಗಲಿದೆ
ಬೆಳಗಾವಿಯ ಐತಿಹಾಸಿಕ ಶಿವ ಮಂದಿರದಲ್ಲಿ ಶಿವ ಭಜನೆ ಸೇರಿದಂತೆ ವಿಶೇಷ ಪೂಜೆ ನಡೆಯಲಿದ್ದು ಶಿವ ದರ್ಶನ ಮಾಡಿ ಭಕ್ತರು ಪುಣೀತರಾಗಲಿದ್ದಾರೆ
ನಗರದ ಕಪಿಲೇಶ್ವರ ಮಂದಿರ,ಮಿಲಿಟರಿ ಮಹಾದೇವ ಮಂದಿರ,ಸೇರಿದಂತೆ ನಗರದ ಎಲ್ಲ ಶಿವಾಲಯಗಳಲ್ಲಿ ವಿಶೇಷ ಪೂಜೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ
ಶುಕ್ರವಾರ ಶಿವರಾತ್ರಿ ಯ ದಿನ ಭಕ್ತರು ಶಿವನ ಹೆಸರಿನಲ್ಲಿ ವೃತ (ಉಪವಾಸ) ಆಚರಣೆ ಮಾಡುತ್ತಾರೆ ಶಿವನಾಮ ಸ್ಮರಣೆಯಲ್ಲಿ ಶಿವನ ಆರಾಧನೆ ಯಲ್ಲಿ ದಿನ ಕಳೆಯುತ್ತಾರೆ
ವೈಜನಾಥ ಮಂದಿರಕ್ಕೆ ಭಕ್ತ ಸಾಗರ
ಬೆಳಗಾವಿಯ ಗಡಿಯ ತುದಿಯಲ್ಲಿ ಶಿನ್ನೋಳಿ ಗ್ರಾಮದ ಪರಿಸರದಲ್ಲಿ ಬೆಟ್ಟದ ಮೇಲೊಂದು ಐತಿಹಾಸಿಕ ವೈಜನಾಥ ದೇವಾಲಯವಿದೆ ಈ ಮಂದಿರಕ್ಕೆ ದೇವರ ದರ್ಶನ ಪಡೆಯಲು ನೆರೆಯ ಮಹಾರಾಷ್ಟ್ರ ಹಾಗು ಕರ್ನಾಟಕದ ಮೂಲೆ ಮೂಲೆಗಳಿಂದ ಭಕ್ತ ಸಾಗರವೇ ಇಲ್ಲಿ ಬರುತ್ತದೆ ಬೆಳಗಾವಿ ನಗರ ಹಾಗು ಜಿಲ್ಲೆಯಿಂದಲೂ ಸಾವಿರಾರು ಜನ ಭಕ್ತರು ಕುಟುಂಬ ಸಮೇತ ವೈಜನಾಥ ಮಂದಿರಕ್ಕೆ ಹೋಗುತ್ತಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ