ಬೆಳಗಾವಿ- ಗಡಿನಾಡ ಗುಡಿಯಲ್ಲಿ ಸ್ವಾಭಿಮಾನಿ ಕನ್ನಡಿಗರ ಸಿಂಹ ಘರ್ಜನೆಯಿಂದಾಗಿ ಬೆಳಗಾವಿ ನಗರದ ಕಣ ಕಣದಲ್ಲಿ ಕನ್ನಡದ ಸ್ವಾಭಿಮಾನದ ಕಿಡಿ ಸಿಡಿಯಿತು ಕನ್ನಡದ ಬಾವುಟ ಬಾನೆತ್ತರದಲ್ಲಿ ಹಾರಾಡಿ ಬೆಳಗಾವಿ ಎಂದೆಂದಿಗೂ ಕನ್ನಡದ ನೆಲ ಎನ್ನುವ ಸಂದೇಶ ಸಾರಿತು
ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ರಾಜ್ಯೋತ್ಸವಕ್ಕೆ ಚಾಲನೆ ನೀಡುತ್ತದ್ದಂತೆಯೇ ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಕನ್ನಡದ ಅಭಿಮಾನದ ಹೊಳೆಯೇ ಹರಿದು ಬಂದಿತು ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರಿದ ಅಭಿಮಾನಿಗಳು ಕನ್ನಡಮ್ಮನ ತೇರು ಎಳೆದು ಕನ್ನಡ ತಾಯಿಯ ಕೃಪೆಗೆ ಪಾತ್ರರಾದರು
ನಗರದ ನಾಲ್ಕು ದಿಕ್ಕುಗಳಿಂದ ಕೈಯಲ್ಲಿ ಕನ್ನಡದ ಬಾವುಟ ಹಿಡಿದು ಕನ್ನಡ ತಾಯಿಗೆ ಜೈಕಾರ ಹಾಕಿ ವಾದ್ಯ ಮೇಳಗಳ ತಾಳಕ್ಕೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿ ನಾಡ ವಿರೋಧಿಗಳು ಗಡ ಗಡ ಎನ್ನುವ ರೀತಿಯಲ್ಲಿ ಕನ್ನಡದ ಹಬ್ಬವನ್ನು ಆಚರಿಸಿ ಕನ್ನಡದ ಕಲಿಗಳು ಹೊಸ ಇತಿಹಾಸ ಬರೆದರು
ಬೆಳಗಾವಿಯ ಕರ್ನಾಟಕ ರಾಜ್ಯೋತ್ಸವದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ದಾಖಲೆ ಸಂಖ್ಯೆಯಲ್ಲಿ ಕನ್ನಡಿಗರು ಸೇರಿದ್ದರು ಬೆಳಗಾವಿ ನಗರದಲ್ಲಿ ಎಲ್ಲಿ ನೋಡಿದಲ್ಲಿ ಕನ್ನಡದ ಬಾವುಟಗಳು ಹಾರಾಡಿದವು ಮಕ್ಕಳು ಯುವಕರು ಯುವತಿಯರು ಮಹಿಳೆಯರು ಹಿರಿಯರು ಕನ್ನಡದ ಸಂಬ್ರಮದಲ್ಲಿ ಪಾಲ್ಗೊಂಡು ಇಡೀ ನಗರದಲ್ಲಿ ಕನ್ನಡಮಯ ವಾತಶವರಣ ನಿರ್ಮಿಸಿದ್ದರು
ಕನ್ನಡದ ಮೆರವಣಿಗೆಯಲ್ಲಿ ನಾಡಿನ ಕಲೆ ಇತಿಹಾಸ ಸಾರುವ ಸಂಸ್ಕೃತಿಯ ಗತವೈಭವ ಬಿಂಬಿಸುವ ರೂಪಕಗಳು ಕಲಾ ತಂಡಗಳು ವಾದ್ಯಮೇಳಗಳು ಮೆರವಣಿಗೆಯ ಮೆರಗು ಹೆಚ್ಚಿಸಿದವು
ಕನ್ನಡದ ಯುವ ಪಡೆಗಳು ಹಚ್ಚಿದ ಡಾಲ್ಬಿಯ ಧ್ವನಿ ನೆರಯ ರಾಜ್ಯವನ್ನು ನಡುಗಿದುವಷ್ಟು ಶಕ್ತಿಶಾಲಿಯಾಗಿತ್ತು ಕನ್ನಡದ ಮೆರವಣಿಗೆಗೆ ಈ ಬಾರಿ ಪೋಲಿಸರು ಯಾವುದೇ ಕಿರಿ ಕಿರಿ ಮಾಡದೇ ಇರುವದರಿಂದ ಕನ್ನಡದ ಮೆರವಣಿಗೆ ರಾತ್ರಿ ಒಂಬತ್ತು ಘಂಟೆಯಾದರೂ ಮುಗಿದಿರಲಿಲ್ಲ
ಬೆಳಗಾವಿಯ ಕಣ ಕಣವೂ ಕನ್ನಡ ಕನ್ನಡ ಎನ್ನುವ ಮಂತ್ರ ಜಪಿಸುವ ರೀತಿಯಲ್ಲಿ ಅದ್ಧೂರಿಯ ಹಬ್ಬ ಕನ್ನಡಿಗರ ಅಭಿಮಾನಕ್ಕೆ ಸಾಕ್ಷಿಯಾಯಿತು