Breaking News

ಖಡಕ್ ಗಲ್ಲಿಯ ರಾಜನಿಗೆ 7 ದಶಕಗಳಿಂದ ಒಂದೇ ಆಕಾರ.. ಒಬ್ಬನೇ ಮೂರ್ತಿಕಾರ..!

ಬೆಳಗಾವಿ-ಗಡಿ ಭಾಗದ ಬೆಳಗಾವಿ ನಗರದಲ್ಲಿ ಸಾರ್ವಜನಿಕ ಗಣೇಶ ಉತ್ಸವವನ್ನು ಅತ್ಯಂತ ಅದ್ಧೂರಿಯಾಗಿ ವೈಶಿಷ್ಟಪೂರ್ಣವಾಗಿ ಆಚರಣೆ ಮಾಡಲಾಗುತ್ತದೆ ಮಹಾರಾಷ್ಟ್ರದ ಪೂನೆ ಹೊರತು ಪಡಿಸಿದರೆ ಬೆಳಗಾವಿಯಲ್ಲಿ ವೈಭವದಿಂದ ಹಬ್ಬವನ್ನು ಆಚರಿಸಲಾಗುತ್ತದೆ
ಸಾರ್ವಜನಿಕ ಗಣೇಶ ಉತ್ಸವದ ರೂವಾರಿ ಲೋಕಮಾನ್ಯ ಬಾಲಗಂಗಾಧರ ತಿಲಕ ಅವರು ಪ್ರತಿಷ್ಟಾಪಿಸಿದ ಗಣೇಶ ಮಂಡಳಿಯೂ ಬೆಳಗಾವಿ ನಗರದಲ್ಲಿದೆ ನಗರದಲ್ಲಿ 300 ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಊತ್ಸವ ಮಂಡಳಗಳು ಇವೆ ಇದರಲ್ಲಿ ಖಡಕ್ ಗಲ್ಲಿಯ ಗಣೇಶ ಅನೇಕ ವೈಶಿಷ್ಟಗಳನ್ನು ಹೊಂದಿದೆ
1949 ರಲ್ಲಿ ಗೋಪಾಲರಾವ ದೇವಗೇಕರ, ನಾರಾಯಣ ಜಾದವ, ನಾರಾಯಣ ಕಂಗ್ರಾಳಕರ,ಯಲ್ಲಪ್ಪ ಜಾದವ ವಾಮನ್ ಜಾಧವ ಸೇರಿದಂತೆ ಹಲವಾರು ಜನ ಹಿರಿಯರು ಸಂಸ್ಥಾಪಿಸಿದ ಖಡಕ್ ಗಲ್ಲಿಯ ರಾಜನಿಗೆ ಈ ವರ್ಷ 67 ವರ್ಷಗಳು ಪೂರ್ಣಗೊಂಡಿವೆ
ಖಡಕ್ ಗಲ್ಲಿಯ ಸಾರ್ವಜನಿಕ ಗಣೇಶ ಮಂಡಳಿಯ ವೈಶಿಷ್ಟವೆನೆಂದರೆ,67 ವರ್ಷಗಳಿಂದ ಮೂರ್ತಿಯ ಸ್ವರೂಪದಲ್ಲಿ ಬದಲಾವಣೆ ಆಗಿಲ್ಲಿ ಮೂರ್ತಿಕಾರನೂ ಬದಲಾಗಿಲ್ಲ ಬೆಳಗಾವಿ ಅನಿಗೋಳ ಪ್ರದೇಶದ ಹಿರಿಯ ಮೂರ್ತಿಕಾರ 90 ವರ್ಷ ವಯಸ್ಸಿನ ಜೆಜೆ ಪಾಟೀಲ ಅವರು ಖಡಕ್ ಗಲ್ಲಿಯ ಮೂರ್ತಿಯನ್ನು ಸಿದ್ಧಪಡಿಸುತ್ತಿದ್ದಾರೆ
ಕಳೆದ 67 ವರ್ಷಗಳಿಂದ ನಾವು ಹಿರಿಯರ ಮಾರ್ಗದರ್ಶನದಂತೆ ಮೂರ್ತಿಯ ಸ್ವರೂಪವನ್ನು ಬದಲಾವಣೆ ಮಾಡಿಲ್ಲ ಮೂರ್ತಿಕಾರನೂ ಬದಲಾಗಲಿಲ್ಲ ಅಂತಾರೆ ಖಡಕ್ ಗಲ್ಲಿಯ ಯುವಕರು.
ಖಡಕ್ ಗಲ್ಲಿಯ ರಾಜನ ಮಹಾತ್ಮೆಗೆ ಸಾವಿರಾರು ಜನರು ಭಕ್ತರಾಗಿದ್ದಾರೆ ಪ್ರತಿ ವರ್ಷ ಹರಕೆ ಹೊರ್ತಾರೆ ಬೆಳ್ಳಿಯ ಆಭರಣಗಳನ್ನು ಕಾಣಿಕೆ ಕೊಡ್ತಾರೆ

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *