ಬೆಳಗಾವಿ- ಬೆಳಗಾವಿಯ ಬಾನಂಗಳಕ್ಕೆ ಗಾಳಿಪಟಗಳು ಟೇಕಪ್ ಆಗಿವೆ ಬಣ್ಣ ಬಣ್ಣದ ಪತಂಗಗಳು ಗಗನದ ರಂಗೇರಿಸಿವೆ ಚಲುವಿನ ಚಿತ್ತಾರ ನೋಡಲು ಸಾವಗಾಂವ ರಸ್ತೆಯ ಅಂಗಡಿ ಕಾಲೇಜಿನ ಪರಿಸರದಲ್ಲಿ ಜನಸಾಗರವೇ ಹರಿದು ಬಂದಿದೆ
ಶನಿವಾರ ಬೆಳಿಗ್ಗೆ ಪತಂಗ ಉತ್ಸವದ ರೂವಾರಿ ಅಭಯ ಪಾಟೀಲರ ಸಮ್ಮುಖದಲ್ಲಿ ಶಿವಾನಂದ ಸಂಗೊಳ್ಳಿ ಪ್ರಸಾದ ಗುಡಿ ಸೇರಿದಂತೆ ಗಣ್ಯಾತಿ ಗಣ್ಯರು ಪತಂಗ ಉತ್ಸವಕ್ಕೆ ಚಾಲನೆ ನೀಡಿದರು
ದೇಶ ವಿದೇಶಗಳ ಕೈಟ್ ಫ್ಲಾಯರ್ಸಗಳು ಬೆಳಗಾವಿಯ ಬಾನಂಗಳಕ್ಕೆ ಲಗ್ಗೆ ಇಟ್ಟಿದ್ದಾರೆ ಬಣ್ಣ ಬಣ್ಣದ ಗಾಳಿಪಟಗಳು ಎಲ್ಲರನ್ನು ಆಕರ್ಷಿಸುತ್ತಿವೆ
ಹದಿನೇಳು ದೇಶಗಳ ೨೧ ಜನ ಕೈಟ್ ಫ್ಲಾಯರ್ಸಗಳು,ಐದು ರಾಜ್ಯಗಳ ೨೫ ಜನ ಕೈಟ್ ಫ್ಲಾಯರ್ಸಗಳು ಬೆಳಗಾವಿಗೆ ಆಗಮಿಸಿದ್ದು ಬಣ್ಣ ಬಣ್ಣದ ಹಕ್ಕಿಗಳನ್ನು ಬಾನಂಗಳಕ್ಕೆ ಹಾರಿಬಿಟ್ಟಿದ್ದಾರೆ
ಪತಂಗ ಉತ್ಸವದ ವೈಭವ,ಮಹಿಳಾ ಉತ್ಸವದ ಮೆರಗು ನೋಡಲು ಜನ ತಂಡೋಪ ತಂಡವಾಗಿ ಬರುತ್ತಿದ್ದಾರೆ ಮೂರು ದಿನಗಳ ಕಾಲ ನಡೆಯಲಿರುವ ಚಿತ್ತಾರ ನೋಡಲು ಲಕ್ಷಾಂತರ ಜನ ಸೇರಲಿದ್ದಾರೆಗಾಳಿಪಟ ಉತ್ಸವವನ್ನು ಕಳೆದ ಏಳು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದಿರುವ ಮಾಜಿ ಶಾಸಕ ಅಭಯ ಪಾಟೀಲ ಬೆಳಗಾವಿ ನಗರದ ಹೆಸರನ್ನು ಜಾಗತಿಕ ಭೂಪಟದಲ್ಲಿ ಮಿಂಚಿಸಿದ್ದಾರೆ