Breaking News

ಕನ್ನಡದ ಹಬ್ಬಕ್ಕೆ ಕ್ರಾಂತಿಯ ನೆಲ ಬೆಳಗಾವಿ ಸಜ್ಜು


ಬೆಳಗಾವಿ- ಕನ್ನಡದ ಕ್ರಾಂತಿಯ ನೆಲ ಗಡಿನಾಡ ಗುಡಿಯಲ್ಲಿ ಕನ್ನಡದ ಝೇಂಕಾರ ಕೇಳಿಬರುತ್ತಿದೆ ಕನ್ನಡದ ಹಬ್ಬ ಆಚರಿಸಲು ಕನ್ನಡದ ನೆಲ ಸಜ್ಜಾಗಿದೆ
ಎಲ್ಲಿ ನೋಡಿದಲ್ಲಿ ಕನ್ನಡದ ಬಾವುಟಗಳ ಹಾರಾಟ.ಸ್ವಾಗತ ಕೋರುವ ಬ್ಯಾನರ್ ಕಟೌಟ್ ಗಳು ಬೆಳಗಾವಿ ನಗರವನ್ನು ಸಂಪೂರ್ಣವಾಗಿ ಕನ್ನಡಮಯ ಗೊಳಿಸಿದೆ
ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿ,ಪ್ರಾಧೇಶಿಕ ಆಯುಕ್ತರ ಕಚೇರಿ.ಸೇರಿದಂತೆ ನಗರದ ಪ್ರಮುಖ ಕಚೇರಿಗಳಿಗೆ ದೀಪಾಲಂಕಾರ ಮಾಡಲಾಗಿದೆ ಜೊತೆಗೆ ನಗರದ ಹೊಟೆಲ್ ಗಳಿಗೂ ದೀಪಾಲಂಕಾರ ಮಾಡಲಾಗಿದ್ದು ಈಡೀ ಬೆಳಗಾವಿ ನಗರ ಝಗಮಗಿಸುತ್ತಿದೆ

ಚನ್ನಮ್ಮ ವೃತ್ತಕ್ಕೆ ವಿಶೇಷ ಕಳೆ

ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರು ಈ ಬಾರಿ ಕರ್ನಾಟಕ ರಾಜ್ಯೋತ್ಸವದ ಬಗ್ಗೆ ವಿಶೇಷ ಮುತವರ್ಜಿ ವಹಿಸಿದ ಕಾರಣ ಪಾಲಿಕೆ ವತಿಯಿಂದ ಚನ್ನಮ್ಮ ವೃತ್ತದಲ್ಲಿ ಹಳದಿ ಕೆಂಪು ಬಣ್ಣದ ದೀಪಾಲಂಕಾರ ಮಾಡಲಾಗಿದೆ ಜೊತೆಗೆ ಹಳದಿ ಕೆಂಪು ಬಣ್ಣದಿಂದ ಅಲಂಕಾರಿಕ ವಸ್ತ್ರಗಳನ್ನು ಉಪಯೋಗಿಸಿ ಅತ್ಯಾಕರ್ಷಕ ವೇದಿಕೆ ನಿರ್ಮಿಸಲಾಗಿದೆ ಪಾಲಿಕೆ ಆಯುಕ್ತರ ವಿಶೇಷ ಕಾಳಜಿಯಿಂದಾಗಿ ಈ ಬಾರಿ ಮಹಾನಗರ ಪಾಲಿಕೆ ಯಿಂದಲೇ ರಾಜ್ಯೋತ್ಸವಕ್ಕೆ ಬರುವ ಲಕ್ಷಾಂತರ ಅಭಿಮಾನಿಗಳಿಗೆ ಈ ಬಾರಿ ಊಟದ ವ್ಯೆವಸ್ಥೆ ಮಾಡಲಾಗಿದೆ
ಪ್ರಾದೇಶಿಕ ಆಯುಕ್ತರ ಕಚೇರಿ,ಜಿಲ್ಲಾಧಿಕಾರಿಗಳ ಕಚೇರಿ,ತೋಟಗಾರಿಕೆ ಕಚೇರಿ,ನೀರಾವರಿ ನಿಗಮದ ಮುಖ್ಯ ಅಭಿಯಂತರ ಕಚೇರಿ ವಿದ್ಯುತ್ ದೀಪಗಳ ಅಲಂಕಾರದಿಂದ ಎಲ್ಲರ ಗಮನ ಸೆಳೆಯುತ್ತಿವೆ
ನಗರದ ಗಣಪತಿ ಬೀದಿ ಮತ್ತಿತರ ಕಡೆಗಳಲ್ಲಿ ಕನ್ನಡ ಧ್ವಜ,ಕೊರಳು ವಸ್ತ್ರ ಮಾರಾಟ ಭರದಿಂದ ನಡೆದಿದೆ.
ಬುಧವಾರ ಮು.10 ಗಂಟೆಗೆ ಸಿಪಿಎಡ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ನೆರವೇರಲಿದ್ದು ತಾಯಿ ಭುವನೇಶ್ವರಿಯ ಪ್ರತಿಮೆಗೆ ಪೂಜೆ ನೆರವೇರಿಸುವ ಮೂಲಕ ರಾಜ್ಯೋತ್ಸವ ಮೆರವಣಿಗೆಯ ಉದ್ಘಾಟನೆ ನೆರವೇರಲಿದೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *