ಬೆಳಗಾವಿ- ಇಪ್ಪತ್ತು ವರ್ಷದ ಹಿಂದೆ ನನ್ನ ಹಿರಿಯ ಮಗ ಜಬೀವುಲ್ಲಾ ಹುಟ್ಟಿದ ಖುಷಿಯಲ್ಲಿ ಸಮಂಧಿಕರಿಗೆ,ಗೆಳೆಯರಿಗೆ ನಂದಿನಿ ಪೇಡಾ ಹಂಚಿದ್ದೆ,ಆವಾಗಿನಿಂದ ಇವತ್ತಿನವರೆಗೂ ನಂದಿನಿ ಪೇಡಾ ಅಂದ್ರೆ ನನಗೆ ತುಂಬಾ ಇಷ್ಟವಾದ ಸ್ವೀಟು ಇದಾಗಿತ್ತು…
ಎರಡು ದಿನದ ಹಿಂದೆ ನಂದಿನಿ ಮಿಲ್ಕ್ ಪಾರ್ಲರ್ ಗೆ ನಂದಿನಿ ಪೇಡಾ ತರಲು ಹೋಗಿದ್ದೆ,ಆಗ ಅಂಗಡಿಯಲ್ಲಿದ್ದ ಹುಡುಗ,ಸರ್ ಕುಂದಾ ಇವತ್ತೇ ಬಂದಿದೆ,ಫ್ರೆಶ್ ಇದೆ ಕೊಡಲಾ ಅಂತಾ ಕೇಳಿದಾಗ,ಸ್ವಲ್ಪ ಯೋಚಿಸಿ ಪೇಡೆ ಕೊಟ್ಟಿದಿಯಲ್ಲಪ್ಪ ಮತ್ತೇ ಕುಂದಾ ಯಾಕೆ ? ಅಂದಾಗ ಇಲ್ಲಾ ಸರ್ ಪ್ರೇಶ್ ಇದೆ ಅಂತಾ ಹೇಳಿದಾಗ ಕೊಡಪ್ಪ ಅಂತಾ,ನಂದಿನಿ ಕುಂದಾ ಡಬ್ಬಿಯನ್ನೂ ಮನೆಗೆ ತಂದೆ…
ಮದ್ಯಾಹ್ನದಿಂದ ಸಂಜೆಯವರೆಗೂ ನನ್ನ ನಾಲ್ಕು ಜನ ಮಕ್ಕಳು ನಾಲ್ಕು ಬಾಕ್ಸ್ ಪೇಡೆ,ತಿಂದು ಮುಗಿಸಿದ್ದರು.ರಾತ್ರಿ ಊಟ ಆದ ಮೇಲೆ ಪೇಡೆ ಎಲ್ಲಿ ಅಂತಾ ಕೇಳಿದೆ,ಪೇಡೆ ಖಲ್ಲಾಸ್ ಬೇಕಾದ್ರ ಕುಂದಾ ಐತಿ ಅಂತಾ ನನ್ನವಳು ಕುಂದಾ ಡಬ್ಬಿ ತಂದಿಟ್ಟಳು,ಮೂರ್ನಾಲ್ಕು ಸ್ಪೂನ್ ನಂದಿನಿ ಕುಂದಾ ತಿಂದು ನೋಡಿದಾಗ,ತುಂಬಾ ಟೇಸ್ಟೀ ಇತ್ತು ,ನಿಜವಾಗಿಯೂ ನಂದಿನಿ ಕುಂದಾ ಫುಲ್ ಟೇಸ್ಟಿಯಾಗಿತ್ತು,ಭಾರೀ ಚನ್ನಾಗಿದೆ ಎಂದಾಗ ನನ್ನ ಕಿರಿಯ ಮಗ ರಾಹೀಲ್ ಕೂಡಾ ಟೇಸ್ಟ್ ನೋಡಿದ,ನಂದಿನಿ ಕುಂದಾ ಬಾಳ ಟೇಸ್ಟೀ ಇದೆ ಅಲ್ಲ ,ಈ ರೀತಿಯ ಕುಂದಾ ಬೆಳಗಾವಿಯ ಸ್ವೀಟ್ ಸ್ಟಾಲ್ ಗಳಲ್ಲೂ ಸಿಗೋದಿಲ್ಲ.ಬೆಳಗಾವಿ ಫೇಮಸ್ ಕುಂದಾ ಖರೀಧಿಸಲು ಬೆಳಗಾವಿಗೆ ಬರಬೇಕಂತ ಏನೂ ಇಲ್ಲ,ಬೆಂಗಳೂರಿನಲ್ಲಿರುವ ನನ್ನ ಗೆಳೆಯ ಪದೇ,ಪದೇ ಫೋನ್ ಮಾಡಿ ಕುಂದಾ ಕಳಿಸು ಅಂತಾ ಪೀಡಿಸುತ್ತಿದ್ದ,ತಕ್ಷಣ ಗೆಳೆಯನಿಗೆ ಫೋನ್ ಮಾಡಿ ,ಏನ್ ಮಾರಯ್ಯ ನಂದಿನಿ ಕುಂದಾ ಭಾರೀ ಬೆಸ್ಟ್ ಇದೆ ಇನ್ಮುಂದೆ ನೀನು ನನಗೆ ಫೋನ್ ಮಾಡಿ ಕಾಡಿಸಬೇಡ,ಕುಂದಾ ನೆನಪಾದ್ರೆ ನಂದಿನಿ ಕುಂದಾ ತಿನ್ನು ಅಂತಾ ಹೇಳಿ ಫೋನ್ ಕಟ್ ಮಾಡಿದೆ.