ಬೆಳಗಾವಿ-ರಾಜ್ಯದಲ್ಲಿರುವ ಎಲ್ಲ ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರು ಕೂಡಲೇ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿಗಳು ಆದೇಶ ನೀಡಿದ ಬೆನ್ನಲ್ಲಿಯೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಆಪ್ತ ಸಹಾಯಕರು,ರಾಜ್ಯದ ಹಲವಾರು ನಿಗಮ ಮಂಡಳಿಗಳ ಅಧ್ಯಕ್ಷ ಉಪಾಧ್ಯಕ್ಷರ ನಾಮನಿರ್ದೇಶನವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂವರು ನಾಯಕರು ನಿಗಮ ಮಂಡಳಿಗಳ ಅಧ್ಯಕ್ಷರಾಗಿದ್ದರು.ಮೂವರಲ್ಲಿ ಒಬ್ಬರ ನಾಮನಿರ್ದೇಶನ ರದ್ದಾಗಿದ್ದು ಶಾಸಕ ಮಹೇಶ್ ಕುಮಟೊಳ್ಳಿ ಅವರೊಬ್ಬರೇ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.
ಕಾಡಾ ನಿಗಮದ ಅಧ್ಯಕ್ಷ ಬೈಲಹೊಂಗಲದ ಮಾಜಿ ಶಾಸಕ ಡಾ. ವಿ.ಆಯ್ ಪಾಟೀಲ, ಅವರ ಸ್ಥಾನ ರದ್ದಾಗಿಲ್ಲ. ಅಲ್ಪ ಸಂಖ್ಯಾತರ ನಿಗಮದ ಅಧ್ಯಕ್ಷ ಮುಖ್ತಾರ್ ಪಠಾಣ ಇಬ್ಬರ ನಾಮನಿರ್ದೇಶನ ರದ್ದಾಗಿದೆ. ಅಥಣಿ ಶಾಸಕ,ಮಹೇಶ್ ಕುಮಟೊಳ್ಳಿ ಒಳಚರಂಡಿ,ಮತ್ತು ನೀರು ಸರಬರಾಜು ಮಂಡಳಿಯ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.
ರಾಜ್ಯ ಮಟ್ಟದ ನಿಗಮ ಮಂಡಳಿಗಳ ಅಧ್ಯಕ್ಷ ನಾಮನಿರ್ದೇಶನ ಮಾತ್ರ ರದ್ದಾಗಿದ್ದು, ಬೆಳಗಾವಿ ಬುಡಾ ಅಧ್ಯಕ್ಷ ಸಂಜಯ ಬೆಳಗಾಂವಕರ ಅವರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿದ ಆದೇಶ ಅನ್ವಯ ಆಗುವದಿಲ್ಲ.
ಶಾಸಕರು ಅಧ್ಯಕ್ಷರಾಗಿರುವ ನಿಗಮ ಮಂಡಳಿಗಳ ಅಧ್ಯಲ್ಷರ ನಾಮನಿರ್ದೇಶನ ರದ್ದಾಗಿಲ್ಲ, ಮಾಜಿ ಶಾಸಕರು ಅಧ್ಯಕ್ಷರಾಗಿರುವ ನಿಗಮಮಂಡಳಿಗಳ ನಾಮನಿರ್ದೇಶನ ರದ್ದು ಮಾಡಬಾರದು ಎನ್ನುವ ಒತ್ತಡ ಹೆಚ್ಚಾಗಿದ್ದು ಇದು ವರ್ಕೌಟ್ ಆದಲ್ಲಿ ಕಾಡಾ ಅಧ್ಯಕ್ಷ ವಿ ಆಯ್ ಪಾಟೀಲರು ಮುಂದುವರೆಯಲಿದ್ದಾರೆ.
ಯಾವ,ಯಾವ ನಿಗಮ ಮಂಡಳಿಗಳ ಅಧ್ಯಕ್ಷರ ನಾಮನಿರ್ದೇಶನ ರದ್ದು ಮಾಡಲಾಗಿದೆ ಎಂದು ಈಗಾಲೇ ಸರ್ಕಾರ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಕಾಡಾ ಅಧ್ಯಕ್ಷ ವಿ.ಆಯ್ ಪಾಟೀಲರ ಹೆಸರು ಇಲ್ಲ. ಹೀಗಾಗಿ ಸದ್ಯಕ್ಕೆ ವಿ.ಆಯ್ ಪಾಟೀಲರು ಕಾಡಾ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.