Breaking News

ನಾನು ಒಮ್ಮೆ ಹಿಡಿದ ಟ್ರ್ಯಾಕ್ ನ್ನು ಯಾರು ಬಂದರೂ ಬಿಡುವದಿಲ್ಲ- ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ- ಬೆಳಗಾವಿ ಎಪಿಎಂಸಿ ವ್ಯಾಪಾರಿಗಳ ಸಂಘಟನೆ ವತಿಯಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸತ್ಕರಿಸಲಾಯಿತು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ,ನನ್ನ ಅಧಿಕಾರದ ಅವಧಿ ಇನ್ನೂ ಮೂರು ವರ್ಷವಿದೆ,ಈ ಅವಧಿಯಲ್ಲಿ ನಾನು ಯಾವ ರೀತಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಎನ್ನುವದನ್ನು ನೀವೇ ನೋಡಿ,ನಾನು ಹಿಡಿದ ಟ್ರ್ಯಾಕ್ ಯಾರು ಬಂದರೂ ಬಿಡುವದಿಲ್ಲ,ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಈಗಿನ ಎಪಿಎಂಸಿ ಸಚಿವರು ಈ ಮೊದಲು ಕಾಂಗ್ರೆಸ್ ಪಕ್ಷದಲ್ಲೇ ಇದ್ದವರು,ಅವರು ನನಗೆ ಗೊತ್ತು,ಬೆಳಗಾವಿ ಎಪಿಎಂಸಿಯ ಅಭಿವೃದ್ಧಿಗಾಗಿ,ಎಪಿಎಂಸಿ ಸಚಿವರನ್ನೇ ಬೆಳಗಾವಿಗೆ ಕರೆದುಕೊಂಡು ಬರುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ ಭರವಸೆ ನೀಡಿದರು.

ಯುವರಾಜ ಕದಂ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರು,ಈ ಹಿಂದೆ ಎರಡು ಬಾರಿ ಉಚಗಾಂವ ವಿಧಾನಸಭಾ ಕ್ಷೇತ್ರದಿಂದ ಸೋತವರು,ಅವರಿಗೆ ಯಾವುದಾದರೂ ಸ್ಥಾನ ಮಾನ ಕೊಡಿಸಲು ಹಲವಾರು ದಿನಗಳಿಂದ ಪ್ರಯತ್ನ ಮಾಡುತ್ತಿದ್ದೆ,ಸತೀಶ್ ಜಾರಕಿಹೊಳಿ ಅವರ ಜೊತೆ ಮಾತನಾಡಿ ಯುವರಾಜ ಕದಂ ಅವರನ್ನು ಎಪಿಎಂಸಿ ಅದ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ,ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಯುವರಾಜ ಕದಂ,ಸೇರಿದಂತೆ ಎಪಿಎಂಸಿ ಮಾರುಕಟ್ಟೆ ಸಮೀತಿಯ ಸದಸ್ಯರು ಉಪಸ್ಥಿತರಿದ್ದರು.

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *