ಬೆಳಗಾವಿ- ಅಗಸ್ಟ ೨೨ ರಂದು ಗಡಿನಾಡ ಗುಡಿ ಬೆಳಗಾವಿಯಲ್ಲಿ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕವಾಗಿ ಸಂವಿಧಾನಿಕ ಸ್ಥಾನ ಮಾನ ನೀಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ
ಬೆಳಗಾವಿಯ ನಾಗನೂರ ಮಠದ ಸಿದ್ಧರಾಮ ಮಹಾಸ್ವಾಮಿಗಳು ಮತ್ತು ಕಾರಂಜಿಮಠದ ಗುರುಸಿದ್ಧ ಮಹಾಸ್ಬಾಮಿಗಳ ಸಾನಿದ್ಯದಲ್ಲಿ ನಡೆಯಲಿರುವ ಈ ರ್ಯಾಲಿಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಬಹುದು ಎಂದು ಅಂದಾಜಿಸಲಾಗಿದೆ
ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದಿಂದ ಆರಂಭವಾಗುವ ಈ ರ್ಯಾಲಿ ಕೊಲಗಲಾಪೂರ ಸರ್ಕಲ್ ಮೂಲಕ ಸಂಚರಿಸಿ ನಂತರ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಳ್ಳಲಿದೆ
ಈ ರ್ಯಾಲಿಯ ಕುರಿತು ಜನಜಾಗೃತಿ ಮೂಡಿಸಲು ಇಂದು
ಲಿಂಗಾಯತ ಸ್ವತಂತ್ರಧರ್ಮ ಹೋರಾಟ ಸಮಿತಿ ವತಿಯಿಂದ ಬೈಕ್ ರ್ಯಾಲಿಯನ್ನು ಏರ್ಪಡಿಸಲಾಗಿತ್ತು
ರ್ಯಾಲಿಗೆ ನಾಗನೂರು ಮಠದ ಸಿದ್ದರಾಮ ಮಹಾಸ್ವಾಮಿಗಳು ಚಾಲನೆ ನೀಡಿದರು
ಬೆಳಗಾವಿ ನಾಗನೂರು ಮಠದಿಂದ ಆರಂಭಗೊಂಡ ಬೈಕ್ ರ್ಯಾಲಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ
ಇದೇ ತಿಂಗಳು ೨೨ ರಂದು ನಡೆಯಲಿರುವ ಲಿಂಗಾಯ ಬೃಹತ್ ಸಮಾವೇಶ ಕುರಿತು ಜಾಗೃತಿ ಮೂಡಿಸಿತು
ಲಿಂಗಾಯತ ಸ್ವತಂತ್ರ ಧರ್ಮ ಸ್ಥಾನಮಾನ ನೀಡಬೇಕು ಎಂದು ಆಗ್ರಹ.ಪಡಿಸುವದರ ಜೊತೆಗೆ ೨೨ ರಂದು ನಡೆಯಲಿರುವ ರ್ಯಾಲಿಯಲ್ಲಿ ಭಕ್ತರು ಲಕ್ಷ..ಲಕ್ಷ ಸಂಖ್ಯೆಯಲ್ಲಿ ಸೇರಬೇಕೆಂಬ ಸಂದೇಶವನ್ನು ಈರ್ಯಾಲಿ ನೀಡಿತು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ