ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ನಡೆದ ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮಬಲದ ಹೋರಾಟ ನಡೆದಿರುವದು ಸ್ಪಷ್ಟ ವಾಗಿದೆ
ಹುಕ್ಕೇರಿ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಲಭಿಸಿದ್ದು ಸಂಕೇಶ್ವರ ಪುರಸಭೆ ಅತಂತ್ರ ವಾಗಿದ್ದು ಕತ್ತಿ ಸಹೋದರರ ಭದ್ರ ಕೋಟೆಗೆ ಲಗ್ಗೆ ಹಾಕಿದೆ ಸಂಕೇಶ್ವರದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬ ನಿರ್ಣಾಯಕ ನಾಗಿದ್ದು ಪಕ್ಷೇತರ ಅಭ್ಯರ್ಥಿಯನ್ನು ಒಲಿಸಿ ಕೊಳ್ಳಲು ಕಸರತ್ತು ಆರಂಭವಾಗಿದೆ
ಸಂಸದ ಪ್ರಕಾಶ ಹುಕ್ಕೇರಿ ಹಾಗು ಅವರ ಪುತ್ರ ಗಣೇಶ ಹುಕ್ಕೇರಿ ಅವರ ಸ್ವ ಕ್ಷೇತ್ರದ ಚಿಕ್ಕೋಡಿ ಅಣ್ಣಾಸಾಹೇಬ ಜಿಲ್ಲೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಬಹುಮತ ಸಾಧಿಸಿದ್ದು ಮತ್ತು ಸದಲಗಾದಲ್ಲಿ ಕಮಲ ಅರಳಿದ್ದು ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗಿದೆ
ಕುಡಚಿಯಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿದ್ದು ಇಲ್ಲಿ ಬಿಜೆಪಿ ಶಾಸಕ ಪಿ ರಾಜೀವ ಅವರಿಗೆ ಹಿನ್ನಡೆಯಾಗಿದೆ ರಾಯಬಾಗದಲ್ಲಿ ವಿವೇಕರಾವ ಪಾಟೀಲ ಮೇಲುಗೈ ಸಾಧಿಸಿದ್ದು ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅವರಿಗೆ ಮುಖಭಂಗವಾಗಿದೆ
ಬೈಲಹೊಂಗಲ ಪುರಸಭೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲವು ಸಾಧಿಸಿದೆ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ವಿಶ್ವನಾಥ ಪಾಟೀಲರಿಗೆ ಬೈಲಹೊಂಗಲದಲ್ಲಿಯೇ ಮತ್ತೆ ಹಿನ್ನಡೆಯಾಗಿದೆ
ಸಂಕೇಶ್ವರ ,ನಿಪ್ಪಾಣಿಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು ಕೊಣ್ಣೂರ ಮತ್ತು ಗೋಕಾಕಿನಲ್ಲಿ ಕಾಂಗ್ರೆಸ್ ಮತ್ತೆ ತನ್ನ ಪ್ರಾಬಲ್ಯವನ್ನು ತೋರಿಸಿದ್ದು ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ತಮ್ಮ ವರ್ಚಸ್ಸು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ
ಖಾನಾಪೂರದಲ್ಲಿ ಚುನಾಯಿತರಾಗಿರುವ ಎಲ್ಲ ಸದಸ್ಯರು ಪಕ್ಷೇತರರಾಗಿದ್ದು ಚುನಾಯಿತ ಸದಸ್ಯರು ಯಾವ ಪಕ್ಷದೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಬೈಲಹೊಂಗಲ,ರಾಯಬಾಗ,ಕುಡಚಿ,ಹುಕ್ಕೇರಿ,ಗೋಕಾಕ ಕೊಣ್ಣೂರ ಸ್ಥಳೀಯ ಸಂಸ್ಥೆಗಳಲ್ಲಿ ಸ್ಪಷ್ಟ ಬಹುಮತ ಸಾಧಿಸಿದ್ದು ಬಿಜೆಪಿ ಚಿಕ್ಕೋಡಿ,ಸದಲಗಾ,ಸವದತ್ತಿ,ರಾಮದುರ್ಗದಲ್ಲಿ ಮೂಡಲಗಿಯಲ್ಲಿ ಸ್ಪಷ್ಟ ಬಹುಮತ ಸಾಧಿಸಿದ್ದು ಖಾನಾಪೂರ,ನಿಪ್ಪಾಣಿ ಮತ್ತು ಸಂಕೇಶ್ವರದ ಚಿತ್ರಣ ಸ್ಪಷ್ಟವಾದಬಳಿಕ ಪಕ್ಷಗಳ ಪ್ರಾಬಲ್ಯ ಗೊತ್ತಾಗಲಿದೆ.