ಬೆಳಗಾವಿ-ಗಡಿಭಾಗದ ಬೆಳಗಾವಿಯಲ್ಲಿ ಕೊರೋನಾ ಮಹಾಮಾರಿಯ ಮೃತ್ಯು ತಾಂಡವ ಮುಂದುವರೆದಿದ್ದು ಈ ಮಹಾಮಾರಿಗೆ ಲಗಾಮು ಹಾಕಲು ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ,ಬೆಳಗಾವಿ ನಗರ ಮತ್ತು ಇಡೀ ಜಿಲ್ಲೆಯಲ್ಲಿ ಖಡಕ್ ಕರ್ಪ್ಯು ಜಾರಿ ಮಾಡಲು ಪೋಲೀಸರು ಸಜ್ಜಾಗಿದ್ದಾರೆ.
ಇಂದು ಶನಿವಾರ ರಾತ್ರಿ 8 ಗಂಟೆಗೆ ಪೋಲೀಸರು ಫೀಲ್ಡ್ ಗೆ ಇಳಿಯಲಿದ್ದಾರೆ.ನಾಳೆ ಸಂಡೇ ಇಡೀ ದಿನ ಅವಶ್ಯಕವಾಗಿ ಯಾರಾದ್ರೂ ಮನೆಯ ಗೇಟು ತೆಗೆದು ಹೊರಗೆ ಸುತ್ತಾಡಿದ್ರೆ ಪೋಲೀಸರ ಏಟು ಬಿಳೋದು ಗ್ಯಾರಂಟಿ.ಹಾಲು,ತರಕಾರಿ ಔಷಧಿ ದಿನಸಿ ವಸ್ತುಗಳ ಅಂಗಡಿಗಳಿಗೆ ಮಾತ್ರ ಅವಕಾಶವಿದ್ದು ಉಳಿದ ಎಲ್ಲ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಲಿವೆ.
ಅಟೋ ಸಿಬಿಟಿ ಬಸ್ ಟ್ಯಾಕ್ಸಿ,ಬಸ್ ಸಂಚಾರ ಎಲ್ಲವೂ ಬಂದ್ ಜೊತೆಗೆ ಮದ್ಯದ ಅಂಗಡಿಗಳಂತೂ ಸಂಪೂರ್ಣವಾಗಿ ಲಾಕ್ ಡೌನ್ ಆಗಲಿವೆ.ಬೆಳಗಾವಿಯ ಎಪಿಎಂಸಿ ಮಾರುಕಟ್ಟೆ ಕೂಡಾ ಬಂದ್ ಆಗಲಿದೆ. ಬೆಳಗಾವಿ ನಗರದ ವಿವಿಧ ಪ್ರದೇಶಗಳಲ್ಲಿ ಬಿಗಿ ಪೋಲೀಸ್ ಬಂದೋಬಸ್ತಿ ಮಾಡಲಾಗಿದ್ದು,ಅನವಶ್ಯಕವಾಗಿ ಓಡಾಡುವ ಬೈಕ್ ಗಳನ್ನು ವಶಕ್ಕೆ ಪಡೆಯಲು ಪೋಲೀಸರ ವಿಶೇಷ ತಂಡಗಳನ್ನು ರಚಿಸಿ,ಬೆಳಗಾವಿ ನಗರದ ಎಲ್ಲ ದಿಕ್ಕುಗಳ ಪ್ರಮುಖ ಪ್ರದೇಶಗಳಲ್ಲಿ ನಿಯೋಜಿಸಲಾಗಿದ್ದು ಅನವಶ್ಯಕವಾಗಿ ಓಡಾಡುವ ಬೈಕ್ ಗಳನ್ನು,ಕಾರುಗಳ ಮೇಲೆ ಪೋಲೀಸರ ವಿಶೇಷ ತಂಡಗಳು ನಿಗಾ ವಹಿಸಲಿವೆ.
ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ಖಡಕ್ ಲಾಕ್ ಡೌನ್ ಅನುಷ್ಠಾನಗೊಳಿಸಲು ಪೋಲೀಸರು ಎಲ್ಲ ರೀತಿಯ ವ್ಯೆವಸ್ಥೆ ಮಾಡಿಕೊಂಡಿದ್ದು ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗಿನವರೆಗೆ ಮನೆಯಲ್ಲಿ ಇರೋದು ಸುರಕ್ಷಿತ ಹೊರಗೆ ಬಂದ್ರೆ ಪೋಲೀಸರ ಲಾಠಿ ರುಚಿ ನೋಡೋದು ಖಚಿತ
ಟೇಕ್ ಕೇರ್ ,
ಸ್ಟೇ ಹೋಮ್……