Breaking News

ಬೆಳಗಾವಿ ಲಾಕ್,ಡೌನ್ ,ಬೆಳಗಾವಿ ಪೋಲೀಸರಿಂದ ಕಾರ್ಯಾಚರಣೆ ಆರಂಭ…..

ಬೆಳಗಾವಿ-ಬೆಳಗಾವಿ ಪೋಲೀಸರು ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಸರ್ಕಾರದ ಲಾಕ್ ಡೌನ್ ಆದೇಶವನ್ನು ಅನುಷ್ಠಾನಗೊಳಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ.

ಪಕ್ಕದ ಮಹಾರಾಷ್ಟ್ರ ದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ,ರಾಜ್ಯ ಸರ್ಕಾರ ಹಲವಾರು ನಗರಗಳು ಸೇರಿದಂತೆ ಬೆಳಗಾವಿ ನಗರವನ್ನು ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ್ದು ಇಂದು ಬೆಳ್ಳಂ ಬೆಳಿಗ್ಗೆ ಬೆಳಗಾವಿ ಪೋಲೀಸರು ಲಾಕ್ ಡೌನ್ ಕಾರ್ಯಾಚರಣೆ ಆರಂಭಿಸಿದ್ದಾರೆ.

ಬೆಳಗಾವಿಯ ಖಡೇಬಝಾರ್ ನಿಂದ ಕಾರ್ಯಾಚರಣೆ ಆರಂಂಭಿಸಿರುವ ಪೋಲೀಸರು ಕಿರಾಣ,ಡೈರಿ,ಔಷಧಿ,ಹಣ್ಣು,ತರಕಾರಿ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಮಳಿಗೆಗಳನ್ನು ಪೋಲೀಸರು ಬಂದ್ ಮಾಡಿಸುತ್ತಿದ್ದಾರೆ.

ನಗರದ ಹೊಟೇಲ್ ಗಳಲ್ಲಿ ಸರ್ವಿಸ್ ಇರುವುದಿಲ್ಲ, ಕೇವಲ ಪಾರ್ಸಲ್ ತೆಗೆದುಕೊಂಡು ಹೋಗಲು ಅವಕಾಶವಿದೆ,ನಗರದ ಎಲ್ಲ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳನ್ನು,ವೈನ್ ಶಾಪ್ ಗಳನ್ನು ,ಗಾರ್ಮೆಂಟ್,ಸೇರಿಂತೆ ಇತರ ಎಲ್ಲ ಅಂಗಡಿಗಳನ್ನು ,ಬಂದ್ ಮಾಡಿಸುವ ಕಾರ್ಯಾಚರಣೆ ಆರಂಭವಾಗಿದೆ.

ನಿನ್ನೆಯ ದಿನ ಸರ್ಕಾರ,ಬೆಳಗಾವಿ ನಗರವನ್ನು ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿತ್ತು ಆದರೆ ಇಂದು ಬೆಳಿಗ್ಗೆ ಬೆಳಗಾವಿ ನಗರದಲ್ಲಿ ಎಲ್ಲ ಅಂಗಡಿಗಳು ತೆರೆದ ಕಾರಣ ಪೋಲೀಸರು ಸರ್ಕಾರದ ಆದೇಶ ಪಾಲನೆ ಮಾಡಿ ಎಲ್ಲ ಅನಗತ್ಯ ಅಂಗಡಿಗಳನ್ನು ಬಂದ್ ಮಾಡಿಸಿ ಜನರ ಜೀವನೋಪಾಯಕ್ಕಾಗಿ ಅತೀ ಅವಶ್ಯವಿರುವ ಅಂಗಡಿಗಳು ಮಾತ್ರ ತೆರೆದಿರುತ್ತವೆ.

ಅಂಗಡಿ ಮುಂಗಟ್ಟು ಬಂದ್ ಮಾಡುವಂತೆ ಪೊಲೀಸರ ಮನವಿ ಮಾಡುತ್ತಿದ್ದಾರೆ. ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಅಂಗಡಿ ಮುಂಗಟ್ಟು ಬಂದ್ ಮಾಡಿ ಇದು ಕರ್ಫ್ಯೂ ಅಲ್ಲ, ಕೊರೊನಾ ವಿರುದ್ಧ ಹೋರಾಡಲು ಸಹಕರಿಸಿ ಮಾರ್ಚ್ 31ರವರೆಗೆ ಅಂಗಡಿ ಮುಂಗಟ್ಟು ಬಂದ್ ಮಾಡುವಂತೆ ಪೋಲೀಸರು ಅಂಗಡಿಕಾರರಲ್ಲಿ ಮನವಿ ಮಾಡಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಬೆಳಗಾವಿಯ ಗಣಪತಿ ಗಲ್ಲಿ, ಕೋತವಾಲ ಗಲ್ಲಿ, ಖಡೇಬಜಾರ್ ಸೇರಿ ವಿವಿಧೆಡೆ ಪೊಲೀಸ್ ವಾಹನದಲ್ಲಿ ಮೈಕ್ ಮೂಲಕ ಅನೌನ್ಸ್ ಮಾಡಿ ಮನವಿ ಮಾಡಿಕೊಂಡರು.

ಲಾಕ್ ಡೌನ್ ಇದ್ದರು ಜಿಲ್ಲೆಯ ಜನರ ನಿರ್ಲಕ್ಷ್ಯ.
ಎಂದಿನಂತೆ ಮಾರುಕಟ್ಟೆಯತ್ತ ಮುಖ ಮಾಡುತ್ತಿದ್ದಾರೆ ಸಾರ್ವಜನಿಕರು. ಮಹಾಮಾರಿ ಕೊರೊನಾ ಸೋಂಕು ಹರಡುವ ಬೀತಿ ಇದ್ದರು ಜನರ ಓಡಾಟ ನಿಂತಿಲ್ಲ
*ಯುಗಾದಿ ಹಬ್ಬದ ಖರೀದಿಯಲ್ಲಿ ಜನರು ಬ್ಯುಸಿಯಾಗಿದ್ದಾರೆ. ಗುಂಪು ಗುಂಪಾಗಿ ಹೂ, ಹಣ್ಣು, ತೆಂಗಿನಕಾಯಿ, ಬಿಲ್ವಪತ್ರೆ, ತುಳಸಿ ಖರೀದಿ ಮಾಡುತ್ತಿದ್ದಾರೆ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *