ಬೆಳಗಾವಿ- ಅಬ್ಬಬ್ಬಾ…ಎಲ್ಲಿ ನೋಡಿದಲ್ಲಿ ಭಗವಾ ಧ್ವಜ ಗಳು ಕೈಯಲ್ಲಿ ಭಗವಾ ಹಿಡಿದುಕೊಂಡು ಮನೆಗಳಿಂದ ದೂರ ದೂರದ ಊರು ಕೇರಿಗಳಿಂದ ಬೆಳಗಾವಿಗೆ ಭಗವಾ ಭಕ್ತಿಯ ಸುನಾಮಿ ಯೇ ಅಪ್ಪಳಿಸಿದೆ
ಬೆಳಗಾವಿ ನಗರದ ವಿವಿಧ ಮರಾಠಾ ಸಮಾಜದ ಸಂಘಟನೆಗಳು ಹಾಗು ಸಂಘ ಸಂಸ್ಥೆಗಳು ಮರಾಠಾ ಸಮಾಜಕ್ಕೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ವಿಶೇಷ ಮೀಸಲಾತಿ ನೀಡಬೇಕು ಅಟ್ರಾಸಿಟಿ ಕಾಯ್ದೆಯನ್ನು ವಾಪಸ್ ಪಡೆಯುವದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆದ ಮರಾಠಾ ಮೋರ್ಚಾದಲ್ಲಿ ಲಕ್ಷ.ಲಕ್ಷ.ಸಖ್ಯೆಯಲ್ಲಿ ಮರಾಠಾ ಬಂಧುಗಳು ಭಾಗವಹಿಸಿದ್ದರು
ಶಿವಾಜಿ ಉದ್ಯಾನ ವನದಿಂದ ಆರಂಭವಾದ ಮೌನ ಮೋರ್ಚಾದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಹಿಳೆಯರು ಯುವಕರು ಯುವತಿಯರು ಭಾಗವಹಿಸಿದ್ದರು
ನಂತರ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಮರಾಠಾ ಸಮಾಜದ ಐದು ಜನ ಯುವತಿಯರು ಕರ್ನಾಟಕ ಸರ್ಕಾರ ಗಡಿ ಭಾಗದ ಮರಾಠಿ ಭಾಷಿಹರಿಗೆ ಅನ್ಯಾಯ ಮಾಡುತ್ತಿದೆ ಗಡಿಭಾಗದ ಮರಾಠಿ ಭಾಷಿಕರು ಮಹಾರಾಷ್ಟಕ್ಕೆ ಹೋಗಲು ತಡಪಡಿಸುತ್ತಿದ್ದಾರೆ ಕೇಂದ್ರ ಸರಕಾರ ಕೂಡಲೇ ಗಡಿ ವಿವಾದ ಬಗೆಹರಿಸದಿದ್ದರೆ ಮೌನ ಮುರಿಯಬೇಕಾಗುತ್ತದೆ ಜರ್ನಾಟಕ ಸರ್ಕಾರ ಮರಾಠಿ ಭಾಷಿಕರಿಗೆ ಅನ್ಯಾಯ ಮಾಡಿದರೆ ಸಿಡದ್ಹೇಳ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು
ಭಾಷಾವಾರು ಪ್ರಾಂತ ರಚನೆಯಾದಾಗ ದೇಶದ ಎಲ್ಲ ಭಾಷಿಕರಿಗೆ ನ್ಯಾಯ ಸಿಕ್ಕಿದೆ ಆದರೆ ಬೆಳಗಾವಿ ಯ ಮರಾಠಿ ಭಾಷಿಕರು ಕಳೆದ ೬೦ ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ಮಾಡಿದರೂ ಕರ್ನಾಟಕ ಸರಕಾರ ಮರಾಠಿ ಭಾಷಿಕರ ಮೇಲೆ ದಬ್ಬಾಳಿಕೆ ನಡೆಸಿದೆ ಎಂದು ಯುವತಿಯರು ಪುಂಡಾಟಿಕೆ ಪ್ರದರ್ಶಿಸಿದರು
ಜೊತೆಗೆ ಅಟ್ರಾಸಿಟಿ ಕಾಯ್ದೆ ತಿದ್ದುಪಡಿ ಮಾಡಬೇಕು ಎನ್ನುವ ಒತ್ರಾಯ ಕೇಳಿ ಬಂದಿತು ಕರ್ನಾಟಕ ಸರ್ಕಾರ ತಮಗೆ ಬಾರದ ಕನ್ನಡ ಭಾಷೆಯನ್ನು ಬೆಳಗಾವಿಯ ಮರಾಠಿ ಭಾಷಿಕರ ಮೇಲೆ ಹೇರಲಾಗುತ್ತದೆ ನೂರು ಅಂಕಗಳ ಕನ್ನಡ ಪರೀಕ್ಷೆ ನಡೆಸಿ ಪ್ರತಿಭಾವಂತರಿಗೆ ಅಡಗಿಸುವ ಕೆಲಸವನ್ನು ಕರ್ನಾಟಕ ಸರಕಾರ ಮಾಡುತ್ತಿದೆ ಎಂದು ಭಾಷಣಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು