ಬೆಳಗಾವಿ – ಮಹಾರಾಷ್ಟ್ರದ ಸಾವಂತವಾಡಿ ಪ್ರದೇಶದಲ್ಲಿರುವ ಮಾಲವನ್ ಬೀಚ್ ಗೆ ತೆರಳಿದ್ದ ಬೆಳಗಾವಿಯ ಮರಾಠಾ ಮಂಡಳ ಇಂಜನೀಯರಿಂಗ್ ಕಾಲೇಜಿನ ಎಂಟು ಜನ ವಿಧ್ಯಾರ್ಥಿಗಳು ಸಮುದ್ರದಲ್ಲಿ ಈಜಲು ಹೋಗಿ ನೀರು ಪಾಲಾದ ಹೃದಯ ವಿದ್ರಾವಕ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ
ಕಾಕತಿ ಬಳಿ ಇರುವ ಮರಾಠಾ ಮಂಡಳ ಕಾಲೇಜಿನ ಒಟ್ಡು ನಲವತ್ತು ಜನ ವಿದ್ಯಾರ್ಥಿಗಳು ಸ್ಟಡಿ ಟೂರ್ ಎಂದು ಮನೆಯಲ್ಲಿ ಸುಳ್ಳು ನೆಪ ಹೇಳಿ ಪೂನಾ ಗೆ ಹೋಗುವ ದಾಗಿ ಮನೆಯಲ್ಲಿ ಸುಳ್ಳು ಹೇಳಿ ಕಳೆದ ಬುಧವಾರ ಮನೆ ಬಿಟ್ಟಿರುವ ವಿದ್ಯಾರ್ಥಿಗಳು ಶನಿವಾರ ಮಧ್ಯಾಹ್ನ ಮಾಲವನ್ ಬೀಚ್ ನಲ್ಲಿರುವ ವಾರಿ ಸಮುದ್ರ ದಂಡೆಯಲ್ಲಿ ಈಜುತ್ತಿರುವಾಗ ರಬಸದ ಅಲೆಗಳಿಂದ ಕಲ್ಲು ಬಂಡೆಗಳಿಗೆ ಅಪ್ಪಳಿಸಿ ಒಟ್ಟು ಎಂಟು ಜನ ವಿದ್ಯಾರ್ಥಿಗಳು ಮೃತ ಪಟ್ಟಿದ್ದಾರೆ
ಒಟ್ಟು ಹನ್ನೊಂದು ಜನ ವಿಧ್ಯಾರ್ಥಿಗಳು ನೀರಿನಲ್ಲಿ ಮುಳಗಿದ್ದರು ಇದರಲ್ಲಿ ಮೂವರನ್ನು ರಕ್ಷಿಸಲಾಗಿತ್ತು ಆದರೆ ರಕ್ಷಣೆಯಾದ ಮೂವರ ಪರಿಸ್ಥಿತಿ ಚಿಂತಾಹನಕವಾಗಿದೆ ಎಂದು ತಿಳಿದು ಬಂದಿದೆ
ಮೃತರ ವಿದ್ಯಾರ್ಥಿಗಳು:
ಮೃತಾಂಚಿ ನಾವೆ, ಮುಜಮಿನ್ ಅನಿಕೇತ, ಕಿರಣ ಖಾಂಡೆಕರ್, ಆರತಿ ಚವ್ಹಾಣ, ಅವಧುತ್, ನತೀನ್ ಮುತ್ನಾಳಕರ್, ಕರುನಾ ಬೆರ್ಡೆ, ಮಾಯಾ ಕೊಲ್ಹೆ, ಮಹೇಶ್. ಎಂದು ಗುರುತಿಸಲಾಗಿದೆ
ಗಂಭೀರ ಸ್ಥಿತಿಯಲ್ಲಿರು ವಿದ್ಯಾರ್ಥಿಗಳು:
ಸಂಕೇತ್ ಗಾಡವಿ, ಅನಿತಾ ಹಾನಲಿ, ಆಕಾಂಕ್ಷ ಗಾಡಗೆ.ಅವರು ಸಾವಂತವಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ