ಬೆಳಗಾವಿ- ಬೆಳಗಾವಿಯ ವಡಗಾವಿಯ ಇದಗಾ ಬಳಿ ಇರುವ ಕಲ್ಯಾಣ ಮಂಟಪದಲ್ಲಿ ಮದುವೆಯ ರಿಸಿಪ್ಷನ್ ನಡೆಯುತ್ತಿದ್ದು ಊಟ ಬಡಿಸುವಾಗ ಮಟನ್ ಪೀಸ್ ಹಾಕದ ಕಾರಣ ವಧು ವರರ ಎರಡು ಕಡೆಯ ಯುವಕರು ಪರಸ್ಪರ ಹೊಡೆದಾಡಿದ ಘಟನೆ ನಡೆದಿದೆ
ಖಂಜರ್ ಗಲ್ಲಿಯ ವಧುವಿನ ಜೊತೆ ವಡಗಾಂವಿಯ ವರನ ಮದುವೆ ಆಗಿತ್ತು ಕೋತ್ವಾಲ ಗಲ್ಲಿಯ ಕಲ್ಯಾಣ ಮಂಟಪದಲ್ಲಿ ನಿಖಾ ಆಗಿತ್ತು ಸೋಮವಾರ ವಲೀಮಾ ವಡಗಾವಿಯ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವಾಗ ಮಟನ್ ಪೀಸ್ ಸಿಗದ ಕಾರಣ ಮದುವೆ ಕಾರ್ಯಕ್ರಮದಲ್ಲಿ ಕಿತ್ತಾಡಿ ಹೊಡೆದಾಡಿದ್ದಾರೆ
ಘಟನೆ ನಡೆಯುತ್ತಿದ್ದಂತೇಯೇ ಶಹಾಪೂರ ಠಾಣೆಯ ಪೋಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ