ಬೆಳಗಾವಿ- ನಗರದ ಗಣಪತಿ ಗಲ್ಲಿಗೆ ಹೊಂದಿಕೊಂಡಿರುವ ಅತೀ ಇಕ್ಕಟ್ಟಾದ ಪಾಂಗುಳ್ ಗಲ್ಲಿಯ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಿದೆ
ಮಹಾನಗರ ಪಾಲಿಕೆಯ ಅಧಿಕಾರಿಗಳು ಒಂದು ತಿಂಗಳ ಹಿಂದೆಯೇ ರಸ್ರೆ ಅಗಲೀಕರಣದ ಸಮೀಕ್ಷೆ ಮಾಡಿ ಮಾರ್ಕಿಂಗ್ ಮಾಡಿದ್ದರು ಇಂದು ಮಹಾನಗರ ಪಾಲಿಕೆ ಅಧಿಕಾರಿಗಳು ರಸ್ತೆ ಅಗಲೀಕರಣದ ಕಾಮಗಾರಿ ಆರಂಭ ಮಾಡುವದಾಗಿ ಅಲ್ಲಿಯ ನಿವಾಸಿಗಳಿಗೆ ಭಾನುವಾರ ತಿಳಿಸಿದ ಹಿನ್ನಲೆಯಲ್ಲಿ ನಿನ್ನೆ ರಾತ್ರಿಯಿಂದಲೇ ಕಟ್ಟಡ ತೆರವು ಕಾಮಗಾರಿ ನಡೆದಿದೆ
ಪಾಲಿಕೆ ಅಧಿಕಾರಿಗಳ ಸೂಚನೆ ಮೇರೆಗೆ ಪಾಂಗುಳ್ ಗಲ್ಲಿಯ ನಿವಾಸಿಗಳು ಸ್ವಯಂ ಪ್ರೇರಿತರಾಗಿ ನಿನ್ನೆ ರಾತ್ರಿಯಿಂದಲೇ ತಮ್ಮ ತಮ್ಮ ಕಟ್ಟಡಗಳನ್ನು ತೆರವು ಮಾಡಿಕೊಳ್ಳುತ್ತಿದ್ದಾರೆ
ಪಾಂಗುಳ ಗಲ್ಲಿಯ ರಸ್ತೆ ಕೇವಲ ಹದಿನೈದು ಫೂಟ್ ಅಗಲವಿದ್ದು ಈಗ ಈ ರಸ್ತೆ 30 ಫೂಟ್ ಅಗಲವಾಗಲಿದೆ ಪಾಲಿಕೆಯ ಆಯುಕ್ತ ಶಶಿಧರ ಕುರೇರ ಅವರು ಪಾಂಗುಳ್ ಗಲ್ಲಿಯ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಿದ್ದು ನಗರದ ಇತರ ಇಕ್ಕಟ್ಟಾದ ರಸ್ತೆಗಳನ್ನು ಅಗಲೀಕರಣ ಮಾಡಬೇಕೆನ್ನುವದು ಸ್ಥಳೀಯರ ಒತ್ತಾಯವಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ