ಬೆಳಗಾವಿ- ಮಾರ್ಚ 1 ರಂದು ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಉಪ ಮೇಯರ್ ಚುನಾವಣೆ ನಡೆಯಲಿದ್ದು ಮೇಯರ್ ಖುರ್ಚಿಗಾಗಿ ಈಗಿನಿಂದಲೇ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ
ಪಾಲಿಕೆಯಲ್ಲಿ ಎಂಈಎಸ್ ಗುಂಪು ನಗರ ಸೇವಕ ಗುಂಜಟಕರ ಹೊಡೆತಕ್ಕೆ ಛಿದ್ರವಾಗಿದ್ದು ೩೨ ಜನ ಸದಸ್ಯರನ್ನು ಹೊಂದಿದ್ದ ಎಂಈಸ್ ಗುಂಪಿನಿಂದ ಗುಂಜಟಕರ ಮತ್ತು ಹತ್ತು ಜನ ನಗರ ಸೇವಕರು ಹೊರಗೆ ಬಂದಿರುವದರಿಂದ ಎಂಈಎಸ್ ಈಗ ಕಂಗಾಲ್ ಆಗಿದೆ
ಮೇಯರ್ ಚುನಾವಣೆಯ ಬಗ್ಗೆ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ತೆಲೆಕೆಡಿಸಿಕೊಳ್ಳುತ್ತಿರಲಿಲ್ಲ ಆದರೆ ಈ ಬಾರಿ ಸಚಿವ ರಮೇಶ ಜಾರಕಿಹೊಳಿ ಅವರು ಕನ್ನಡದ ಮೇಯರ್ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ
ಗೋಕಾಕಿನ ಸಣ್ಣ ಸಾಹುಕಾರ ಲಖನ್ ಈಗಾಗಲೇ ಕನ್ನಡ ಗುಂಪಿನ ನಗರ ಸೇವಕರ ಸಭೆ ಕರೆದು ಎಲ್ಲರೂ ಒಗ್ಗಟ್ಟಾಗಿ ಇರುವಂತೆ ಹೇಳಿದ್ದಾರೆ ನಾಳೆ ಶನಿವಾರ ಅಥವಾ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಕನ್ನಡ ನಗರ ಸೇವಕರ ಸಭೆ ಕರೆದು ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ
ಎಈಎಸ್ ನಿಂದ ತಟಸ್ಥವಾಗಿರುವ ಹತ್ತು ಜನ ನಗರ ಸೇವಕರನ್ನು ಕನ್ನಡ ಗುಂಪಿನ ಕಡೆ ಸೆಳೆಯುವ ಕಸರತ್ತು ಜೋರಾಗಿಯೇ ನಡೆದಿದೆ ಈ ಹತ್ತು ಜನ ನಗರ ಸೇವಕರ ನಿರ್ಧಾರ ನಿರ್ಣಾಯಕ ಪಾತ್ರ ವಹಿಸಲಿದೆ
ಬಲಾಬಲ
ಪಾಲಿಕೆಯಲ್ಲಿ ಒಟ್ಡು ಸದಸ್ಯರ ಸಂಖ್ಯೆ ೫೮ ಎಂಈಎಸ್ ೩೨ ಇದರಲ್ಲಿ ಹತ್ತು ಜನ ನಗರ ಸೇವಕರು ಎಂಈಎಸ್ ನಾಯಕರ ಏಕಪಕ್ಷೀಯ ನಿರ್ಧಾರದಿಂದ ತಟಸ್ಥವಾಗಿದ್ದಾರೆ ಕನ್ನಡ ಗುಂಪು ೨೬ ಜನ ಸದಸ್ಯರನ್ನು ಹೊಂದಿದಭಾಷಿಕಠಠಠಮತ ಸಾಧಿಸಲು ೩೦ ಜನ ಸದಸ್ಯರ ಸಂಖ್ಯಾಬಲ ಬೇಕು
ಕನ್ನಡ ಮೇಯರ್ ಸಾದ್ಯವೇ..?
ಭಾವನಾತ್ಮಕವಾಗಿ ನಾವೆಲ್ಲರು ಕನ್ನಡ ನಗರ ಸೇವಕರೊಬ್ಬರು ಮೇಯರ್ ಆಗಬೇಕೆಂದು ಬಯಸುತ್ತೇವೆ ಆದರೆ ವಾಸ್ತವಿಕವಾಗಿ ಪರಿಸ್ಥಿತಿ ಬೇರೆಯೇ ಇರುತ್ತದೆ ಈಗ ಪಾಲಿಕೆಯಲ್ಲಿ ಕನ್ನಡ ಗುಂಪು ೨೬ ಜನ ಸದಸ್ಯರ ಸಂಖ್ಯಾ ಬಲ ಹೊಂದಿದೆ ಎಂಈಎಸ್ ನಿಂದ ತಟಸ್ಥವಾಗಿರುವ ಹತ್ತು ಜನ ನಗರ ಸೇವಕರು ಬೇಷರತ್ತಾಗಿ ಬೆಂಬಲ ಸೂಚಿಸಿದರೆ ಮಾತ್ರ ಕನ್ನಡಿಗರೊಬ್ಬರು ಮೇಯರ್ ಆಗಲು ಸಾಧ್ಯವಿದೆ ಈ ಹತ್ತು ಜನ ಮರಾಠಿ ಭಾಷಿಕನನ್ನೇ ಮೇಯರ್ ಮಾಡಿ ಎಂದು ಪಟ್ಟು ಹಿಡಿದಲ್ಲಿ ಕನ್ನಡ ಮೇಯರ್ ಆಗುವದು ಕಷ್ಟಸಾದ್ಯ
ಎಂಈಎಸ್ ಗುಂಪಿನಲ್ಲಿ ಒಡಕಾಗಿರುವದರಿಂದ ಎಂಈಎಸ್ ಈಗ ಸದ್ಯಕ್ಕೆ ಕಂಗಾಲ್ ಆಗಿದೆ