ಬೆಳಗಾವಿ-ಮಾರ್ಚ ಐದರಂದು ಮೇಯರ್ ಸರೀತಾ ಪಾಟೀಲರ ಅಧಿಕಾರದ ಅವಧಿ ಮುಗಿಯಲಿದ್ದು ಮೇಯರ್ ಹಾಗು ಡೆಪ್ಯುಟಿ ಮೇಯರ್ ಖುರ್ಚಿಗಾಗಿ ಈಗಿನಿಂದಲೇ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಹಾಗು ಮರಾಠಿ ಗುಂಪಿನ ನಡುವೆ ಹಗ್ಗ ಜಗ್ಗಾಟ ಶುರುವಾಗಿದೆ
ಮೇಯರ್ ಸ್ಥಾನವನ್ನು ಪ್ರ ವರ್ಗ 1 ಉಪ ಮಹಾಪೌರ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಒಟ್ಟು ೫೮ ಜನ ಸದಸ್ಯರಿದ್ದು ಇದರಲ್ಲಿ ಓರ್ವ ಸದಸ್ಯನಿಗೆ ಮತದಾನದ ಹಕ್ಕಿಲ್ಲ ೫೭ ಸದಸ್ಯರಲ್ಲಿ ಎಂಈಎಸ್ ಗುಂಪಿನಲ್ಲಿ ೩೨ ಜನ ಸದಸ್ಯರಿದ್ದು,ಕನ್ನಡ ಗುಂಪಿನಲ್ಲಿ ೨೫ ಜನ ಸದಸ್ಯರಿದ್ದಾರೆ ಆದರೆ ಎಂ ಈ ಎಸ್ ಗುಂಪಿನಲ್ಲಿ ಒಡಕು ಕಾಣಿಸಿಕೊಂಡಿದ್ದು ಇದರ ಲಾಭ ಕನ್ನಡ ಗುಂಪಿಗೆ ಆಗಬಹುದು ಎಂದು ಕೆಲವರು ನಿರೀಕ್ಷೆ ಮಾಡಿದ್ದಾರೆ
ಎಂಈಎಸ್ ಗುಂಪಿನಲ್ಲಿ ವಿನಾಯಕ ಗುಂಜಟಕರ,ನಾಗೇಶ ಮಂಡೋಳ್ಕರ ಅವರು ಹತ್ತು ಜನ ನಗರ ಸೇವಕರ ಗುಂಪು ಕಟ್ಟಿಕೊಂಡು ಎಂಈಎಸ ನಾಯಕರ ನಿದ್ದೆಗೆಡಿಸಿದ್ದಾರೆ ಈ ಗುಂಪು ಕನ್ನಡ ಗುಂಪಿನ ಜೊತೆ ಕೈಜೋಡಿಸಿದರೆ ಮಾತ್ರ ಬೆಳಗಾವಿ ಪಾಲಿಕೆಯಲ್ಲಿ ಕನ್ನಡದ ಬಾವುಟ ಹಾರಾಡಲಿದೆ
ಎಂಈಎಸ ಗುಂಪಿನಲ್ಲಿ ಮೇಯರ್ ಸ್ಥಾನಕ್ಕಾಗಿ,ಸಂಜೋತಾ ಬಾಂಧೇಕರ,ಮಧುಶ್ರೀ ಪೂಜಾರಿ,ಹಾಗು ಮೀನಾಕ್ಷಿ ಚಿಗರೆ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ ಉಪ ಮೇಯರ್ ಸ್ಥಾನಕ್ಕಾಗಿ ನಾಗೇಶ ಮಂಡೋಳ್ಕರ್ ಹಾಗು ಮೋಹನ ಬೆಳಗುಂದಕರ ಅವರು ಕಸರತ್ತು ನಡೆಸಿದ್ದಾರೆ
ಇತ್ತ ಕನ್ನಡ ಗುಂಪಿನಲ್ಲಿ ಜಯಶ್ರೀ ಮಾಳಗಿ ಮತ್ತು ಪುಷ್ಪಾ ಪರ್ವತರಾವ ಅವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ ಆದರೆ ಜಯಶ್ರೀ ಮಾಳಗಿ ಅವರು ಜಿಲ್ಲಾ ಮಂತ್ರಿಗಳನ್ನು ಭೇಟಿಯಾಗಿ ಮೇಯರ್ ಸ್ಥಾನ ಕನ್ನಡಿಗರಿಗೆ ದಕ್ಕಿಸಲು ಸರ್ಕಾರ ಮನಸ್ಸು ಮಾಡಲಿ ಎಂದು ಅಂಗಲಾಚಿಸಿದ್ದಾರೆ ಜಯಶ್ರೀ ಮಾಳಗಿ ಜಿಲ್ಲೆಯ ನಾಯಕರನ್ನು ಭೇಟಿಯಾಗಿ ಏನಾದ್ರು ಮಾಡಿ ನನ್ನನ್ನು ಈ ಬಾರಿ ಮೇಯರ್ ಮಾಡಿ ಎಂದು ಮನವಿ ಮಾಡಿಕೊಳ್ಳುವದೇ ಜಯಶ್ರೀ ಅವರ ದಿನಚರಿಯಾಗಿದೆ
ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಅವರು ಮನಸ್ಸು ಮಾಡಿದರೆ ಎಂಈಎಸ್ ಒಡಕಿನ ಲಾಭ ಪಡೆಯಬಹುದಾಗಿದೆ ಆದರೆ ಇದು ಸುಲಭದ ಮಾತಲ್ಲ ಎಂದು ಕನ್ನಡ ಗುಂಪಿನ ಹಿರಿಯ ನಗರ ಸೇವಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ