Breaking News

ಮೇಯರ್ ನೆತ್ತಿಯ ಮೇಲೆ ಅಮಾನತಿನ ತೂಗುಗತ್ತಿ..!

ಬೆಳಗಾವಿ- ಗಡಿಯಲ್ಲಿ ನಾಡವಿರೋಧಿ ಎಂಈಎಸ್ ಪುಂಡಾಟಿಕೆ ವಿಪರೀತವಾಗಿದೆ ಮೇಯರ್ ಆದ ಮರು ದಿನ ಮಹಾರಾಷ್ಟ್ರ ಮುಖ್ಯಮಂತ್ರಿ ದವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಗಡಿವಿವಾದದ ಕುರಿತು ಸಮಾಲೋಚನೆ ಮಾಡಿ ಪುಂಡಾಟಿಕೆ ಪ್ರದರ್ಶಿಸಿದ್ದ ಮೇಯರ್ ಸರೀತಾ ಪಾಟೀಲ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಸವಾಲು ಹಾಕಿದ್ದು ಇವರ ನೆತ್ತಿಯ ಮೇಲೆ ಅಮಾನತಿನ ತೂಗುಗತ್ತಿ ನೇತಾಡುತ್ತಿದೆ

ರಾಜ್ಯೋತ್ಸವದ ದಿನ ಎಂಈಎಸ್ ಆಯೋಜಿಸಿದ್ಧ ಕರಾಳ ದಿನಾಚರಣೆಯಲ್ಲಿ ಶಾಸಕ ಸಂಬಾಜಿ ಪಾಟೀಲ,ಅರವಿಂದ ಪಾಟೀಲ.ಮೇಯರ್ ಸರೀತಾ ಪಾಟೀಲ ಉಪ ಮೇಯರ್ ಸೇರಿದಂತೆ ಹಲವಾರುಜನ ನಗರಸೇವಕರು ಪಾಲ್ಗೊಂಡು ಪುಂಡಾಟಿಕೆ ಪರ್ದರ್ಶಿಸಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ

ಜಿಲ್ಲಾಧಿಕಾರಿ ಎನ್ ಜಯರಾಮ ಅವರು ಕರಾಳ ದಿನಾಚರಣೆಯ ಸಮಗ್ರ ವರದಿಯನ್ನು ಸರ್ಕಾರಕ್ಕೆ ರವಾನಿಸಿದ್ದು ಸರಕಾರ ಕರಾಳ ದಿನಾಚರಣೆಯಲ್ಲಿ ಭಾಗವಹಿಸಿದ ನಾಡವಿರೋಧಿಗಳನ್ನು ಅಮಾನತು ಮಾಡಿ ಅವರಿಗೆ ಲಗಾಮು ಹಾಕುವ ಪ್ರಕ್ರಿಯೆ ಆರಂಭಿಸಿದೆ ಎಂದು ವಿಧಾನಸಭೆಯ ಮೂಲಗಳು ತಿಳಿಸಿವೆ

ಬೆಳಗಾವಿ ನಗರ ಪೋಲೀಸ್ ಆಯುಕ್ತ ಕೃಷ್ಣಭಟ್ ಅವರು ಕರಾಳ ದಿನಾಚರಣೆಯ ವಿಡಿಯೋ ಚಿತ್ರಿಕರಣವನ್ನು ಬೆಂಗಳೂರಿಗೆ ರವಾನಿಸಿದ್ದಾರೆ ಜೊತೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದೂರವಾಣಿ ಮೂಲಕ ಬೆಳಗಾವಿ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಎಂಈಎಸ್ ನಾಯಕರ ಪುಂಡಾಟಿಕೆಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ

ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡವರನ್ನು ಅಮಾನತು ಮಾಡಬೇಕೋ ಅಥವಾ ಬೆಳಗಾವಿ ಪಾಲಿಕೆಯನ್ನೇ ಸೂಪರ್ ಸೀಡ್ ಮಾಡಬೇಕೆ ಎನ್ನುವ ಚಿಂತನೆ ಸರ್ಕಾರದ ಮುಂದಿದೆ ಎಂದು ಹೇಳಲಾಗುತ್ತಿದೆ

ಆದರೆ ಕನ್ನಡ ನಗರಸೇವಕರು ಪಾಲಿಕೆಯನ್ನು ಸೂಪರ್ ಸೀಡ್ ಮಾಡುವದು ಬೇಡ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡವರ ವಿರುದ್ಧ ಕ್ರಮ ಕೈಗೊಂಡರೆ ಸಾಕು ಮಾಡದ ತಪ್ಪಿಗೆ ನಿರ್ದೋಷಿ ನಗರ ಸೇವಕರು ಯ್ಯಾಕೆ ಶಿಕ್ಷೆ ಅನುಭವಿಸಬೇಕು ಎನ್ನುವದು ಕೆಲವು ನಗರಸೇವಕರ ವಾದವಾಗಿದೆ

ಶಾಸಕರಾದ ಸಂಬಾಜಿ ಪಾಟೀಲ ಹಾಗು ಅರವಿಂದ ಪಾಟೀಲ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡುವಂತೆ ಬೆಳಗಾವಿ ಅಧಿವೇಶನದಲ್ಲಿ ಕನ್ನಡದ ಶಾಸಕರು ಧ್ವನಿ ಎತ್ತಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *