ಮುಂಬಯಿ ಮಂತ್ರಾಲಯದ ಮುಂದೆ ಎಂಈಎಸ್ ನಾಯಕರು ಧರಣಿ ಮಾಡ್ತಾರಂತೆ
ಬೆಳಗಾವಿ- ವಿಧಾನಸಭೆ ಚುನಾವಣೆ ಸಮೀಪ ಬಂದಂತೆ ಬೆಳಗಾವಿಯ ಎಂಈಎಸ್ ನಾಯಕರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಹಾರಾಷ್ಟ್ರ ರಾಜ್ಯಕ್ಕೆ ಪಲಾಯನ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ ಮಳೆಗಾಲದ ಅಧಿವೇಶನದ ಸಂಧರ್ಛದಲ್ಲಿ ಮುಂಬಯಿಯಲ್ಲಿರುವ ಮಂತ್ರಾಲಯದ ಮುಂದೆ ಛತ್ರಿ ಹಿಡಿದು ಧರಣಿ ಮಾಡಲು ನಿರ್ಧರಿಸಿದ್ದಾರೆ
ಬೆಳಗಾವಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಮುತವರ್ಜಿ ವಹಿಸಬೇಕು ಈ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಗಡಿ ವಿವಾದವನ್ನು ಬಗೆಹರಿಸುವಂತೆ ಒತ್ತಯಿಸಿ ಜುಲೈ ತಿಂಗಳಲ್ಲಿ ನಡೆಯುವ ಮಳೆಗಾಲದ ಅಧಿಶನ ನಡೆಯುವ ಸಂಧರ್ಭದಲ್ಲಿ ಎಂಈಎಸ್ ನಾಯಕರು ಮಂತ್ರಾಲಯದ ಎದುರು ಧರಣಿ ಮಾಡ್ತಾರಂತೆ
ಚುನಾವಣೆ ಬಂದಾಗ ಮಹಾರಾಷ್ಟ್ರಕ್ಕೆ ಪಲಾಯನ ಮಾಡುವ ಎಂಈಎಸ್ ನಾಯಕರು ಅಯ್ಯೋ ನಮಗೆ ಕರ್ನಾಟಕ ಅನ್ಯಾಯ ಮಾಡಿದೆ ಎಂದು ಮುಂಬಯಿ ಮಂತ್ರಾಲಯದ ಎದುರು ಹೋರಾಟ ಮಾಡುವ ಮೂಲಕ ಮುಂದಿನ ಚುನಾವಣೆಯಲ್ಲಿ ಸಹಾಯ ಮಾಡುವಂತೆ ಪರೋಕ್ಷವಾಗಿ ಮಹಾರಾಷ್ಟ್ರ ಸರ್ಕಾರದ ಕಣ್ಣಿಗೆ ಮಣ್ಣೆರಚಲು ತಂತ್ರ ರೂಪಿಸಿದ್ದಾರೆ
ಎಂಈಎಸ್ ಶಾಸಕರಾದ ಸಂಬಾಜಿ ಪಾಟೀಲ,ಅರವಿಂದ ಪಾಟೀಲ ದೀಪಕ ದಳವಿನೋಹರ ಕಿಣೇಕರ ಸೇರಿದಂತೆ ಹಲವಾರು ಜನ ಎಂಈಎಸ್ ನಾಯಕರು ಮಹಾರಾಷ್ಟ್ರ ದ ಮಂತ್ರಾಲಯದ ಎದುರು ನಡೆಯಲಿರುವ ಹೋರಾಟ ಮತ್ತು ಚೀರಾಟದ ನೇತ್ರತ್ವ ವಹಿಸಲಿದ್ದಾರೆ
ಚುನಾವಣೆ ಬಂದಾಗ ಸೋಗು ಹಾಕುವ ಈ ಸೋಗಲಾಡಿಗಳು ರಾಜಕೀಯ ಲಾಭಕ್ಕಾಗಿ ಮಹಾರಾಷ್ಟ್ರದಲ್ಲಿಯೂ ಬಾಷಾ ವೈಷಮ್ಯದ ವಿಷ ಬೀಜ ಬಿತ್ತುವ ದುಸ್ಸಹಾಸಕ್ಕೆ ಕೈಹಾಕಿದ್ದಾರೆ