ಬೆಳಗಾವಿ -ಬೆಳಗಾವಿಯಲ್ಲಿ ಎಂಇಎಸ ಆಯೋಜಿಸಿದ ಮರಾಠಿ ಮೇಳಾವ್ ದಲ್ಲಿ ಬೆಳಗಾವಿ ಜಿಲ್ಲಾಧಿಕಾರಿಗಳ ಕಟ್ಟಪ್ಪಣೆ ಉಲ್ಲಂಘಿಸಿ ಮಹಾರಾಷ್ಟ್ರದ ಇಬ್ಬರು ಶಾಸಕರು ಭಾಗವಹಿಸುವ ಮೂಲಕ ಪುಂಡಾಟಿಕೆ ಪ್ರದರ್ಶಿಸಿದ್ದಾರೆ
ಬೆಳಗಾವಿಯ ವ್ಯಾಕ್ಸೀನ್ ಡಿಪೋ ರಸ್ತೆಯಲ್ಲಿ ನಡೆದ ಮೇಳಾವದಲ್ಲಿ ಮಹಾರಾಷ್ಟ್ರ ಇಬ್ಬರು ಶಾಸಕರು ಭಾಗಿಯಾಗುವ ಮೂಲಕ ಜಿಲ್ಲಾಧಿಕಾರಿ ಜಿಯಾವುಲ್ಲಾ ಹೊರಡಿಸಿದ ಬೆಳಗಾವಿ ಗಡಿ ಪ್ರವೇಶ ನಿಷೇಧದ ಆದೇಶವನ್ನು ಉಲಗಲಂಘಿಸಿದ್ದಾರೆ
ಬೆಳಗಾವಿ ಜಿಲ್ಲಾಡಳಿತ ಮತ್ತು ಪೊಲೀಸ ಇಲಾಖೆ ಹಾಗೂ ರಾಜ್ಯ ಗುಪ್ತಚರ ಇಲಾಖೆ ಮಹಾರಾಷ್ಟ್ರದ ಶಾಸಕರನ್ನು ಗಡಿಪ್ರವೇಶ ಮಾಡದಂತೆ ತಡೆಯುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ
ಮಹಾರಾಷ್ಟ್ರ ನಾಯಕರನ್ನ ಬೆಳಗಾವಿ ಜಿಲ್ಲೆ ಪ್ರವೇಶಿಸದಂತೆ ನಿನ್ನೆ ಮದ್ಯರಾತ್ರಿ ನಿರ್ಬಂಧ ವಿಧಿಸಿ ಡಿಸಿ ಜಿಯಾವುಲ್ಲಾ ಆದೇಶ ಹೊರಡಿಸಿದ್ದರು
ಕೊಲ್ಲಾಪುರ ಜಿಲ್ಲೆ ಚಂದಗಡ ಶಾಸಕಿ ಸಂದ್ಯಾದೇವಿ ಕುಪ್ಪೇಕರ ಹಾಗೂ ಬುದ್ಧರಗಡ ಶಾಸಕ ಕೆ.ಪಿ.ಪಾಟೀಲ ಭಾಗಿಯಾಗಿ ಪುಂಡಾಟಿಕೆ ಪ್ರದರ್ಶಿಸಿದರು
ಸ್ಥಳಿಯ ದಕ್ಷಿಣ ಶಾಸಕ ಸಾಂಭಾಜಿ ಪಾಟೀಲ್ ಮತ್ತು ಖಾನಾಪುರ ಶಾಸಕ ಅರವಿಂದ್ ಪಾಟೀಲ್ ಸಹ ಅಧಿವೇಶನದಲ್ಲಿ ಝಾಲಾಚ್ ಪಾಯಿಜೆ ಘೋಷಣೆ ಕೂಗಿ ಕಲಾಪಗಳನ್ನು ಬಹಿಷ್ಕರಿಸಿ ನೇರವಾಗಿ ಮೇಳಾವ್ ವೇಧಿಕೆಯಲ್ಲಿ ಬಾಗಿಯಾದರು
ಮಹಾ ಶಾಸಕರನ್ನ ತಡೆಯುವಲ್ಲಿ ಬೆಳಗಾವಿ ಪೊಲೀಸರ ಸಂಪೂರ್ಣವಾಗಿ ವಿಫಲರಾದರು
ಬೆಳಗಾವಿಯಲ್ಲಿ ಎಂಇಎಸ ಮೇಳಾ ಉದ್ಘಾಸಿದ ಮಹಾರಾಷ್ಟ್ರ ನಾಯಕರು ಶಿವಾಜಿ ಮೂರ್ತಿಗೆ ಪೂಜೆ ಸಲ್ಲಿಸಿ ಮೇಳಾವಾ ಉದ್ಘಾಟನೆ ಮಾಡಿದರು
ಮಹಾರಾಷ್ಟ್ರ ಕೋಲ್ಲಾಪು ಸಂಸದ ಧನಂಜಯ ಮಾಡಿಕ, ಚಂದಗಡ ಶಾಸಕಿ ಸಂದ್ಯಾದೇವಿ ಕುಪ್ಪೇಕರ, ಬುದ್ದರಗಡ ಶಾಸಕ ಕೆ.ಪಿ.ಪಾಟೀಲ ಹಾಗೂ ಬೆಳಗಾವಿ ದಕ್ಷಿಣ ಎಂಇಎಸ ಶಾಸಕ ಸಂಭಾಜಿ ಪಾಟೀಲ, ಖಾನಾಪುರ ಶಾಸಕ ಅರವಿಂದ ಪಾಟೀಲ ಭಾಗಿಯಾಗುವ ಮೂಲಕ ಜಿಲಗಲಾಡಳಿತದ ಕಟ್ಟಪ್ಪಣೆ ಆದೇಶವನ್ನು ಉಲ್ಲಂಘಿಸಿದ್ದಾರೆ
ಬಾಲ ಬಿಚ್ಚಿದ ಎಂಇಎಸ್ ಶಾಸಕರು ಕರ್ನಾಟಕದ ಸೌಲಭ್ಯ ಪಡೆದು ರಾಜ್ಯ ವಿರೋಧಿ ಹೇಳಿಕೆ ಕೊಟ್ಟ ಎಂಇಎಸ್ ಶಾಸಕರು . ಇದ್ದರೆ ಮಹಾರಾಷ್ಟ್ರದಲ್ಲಿ ಇಲ್ಲವಾದಲ್ಲಿ ಜೈಲಲ್ಲಿ ಜೈ ಮಹಾರಾಷ್ಟ್ರ ಎಂದು ಹೇಳಿದ ಖಾನಾಪೂರ ಶಾಸಕ ಅರವಿಂದ ಪಾಟೀಲ್ ಹೇಳಿದ್ರೆ ಮಹಾರಾಷ್ಟ್ರಕ್ಕೆ ಬೆಳಗಾವಿ ಸೇರುವದು ನಿಶ್ಚಿತ ಎಂದ ದಕ್ಷಿಣ ಕ್ಷೇತ್ರದ ಶಾಸಕ ಸಂಭಾಜಿ ಪಾಟೀಲ್ ಹೇಳುವ ಮೂಲಕ ನಾಡವಿರೋಧಿ ಕೃತ್ಯ ನಡೆಸಿದ್ದಾರೆ