ಬೆಳಗಾವಿ – ಚುನಾವಣೆ ಸಮೀಪಿಸುತ್ತಿದ್ದಂತೆ ನಾಡದ್ರೋಹಿ ಎಂಈಎಸ್ ಮತ್ತೆ ಕಾಲು ಕೆದರಿ ಜಗಳಕ್ಕೆ ಮುಂದಾಗಿದೆ ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದರೂ ಅದು ತಿಪ್ಪೆ ಸವರುವದನ್ನು ಬಿಡೋದಿಲ್ಲ ಎನ್ನುವ ಹಾಗೆ ಚಬೆಳಗಾವಿಯಲ್ಲಿ ಮರಾಠಾ ಯುವ ಮಂಚ್ ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಹಾರಿಸಲಾಗಿರುವ ಕನ್ನಡದ ಧ್ವಜವನ್ನು ತೆಗೆಯಬೇಕು ಎಂದು ಈ ಕಂಗಾಲ್ ಕಂಪನಿ ಕ್ಯಾತೆ ತೆಗೆದಿದೆ
ಕನ್ನಡಧ್ವಜ ತೆರವುಗೊಳಿಸಲು ಆಗ್ರಹಿಸಿ ಮರಾಠಾ ಯುವ ಮಂಚ್ ನಗರದ ಸಂಬಾಜಿ ವೃತ್ತದಲ್ಲಿ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟಿಸುವ ಮೂಲಕ ಬೆಳಗಾವಿ ಪ್ರಾದೇಶಿಕ ಕಚೇರಿ ಮುಂದೆ ಹಾರಾಡುತ್ತುರಿವ ಕನ್ನಡಧ್ವಜ ತೆಗೆಯಬೇಕು ಅಂತ ಈ ಅಂಧರು ಒತ್ತಾಯಿಸಿದ್ದಾರೆ
ಕರ್ನಾಟಕ ಸರ್ಕಾರ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗೆ ದೃತರಾಷ್ಟನಿಗೆ ಹೋಲಿಸಿದ ನಾಡದ್ರೋಹಿಗಳು ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತಿದಲ್ಲಿ ನಾಡದ್ರೋಹಿಗಳು ಅಟ್ಟಹಾಸ್ ಮೆರೆದಿದ್ದಾರೆ
ಕಣ್ಣಿಗರ ಕಪ್ಪು ಪಟ್ಟಿಕಟ್ಟಿಕೊಂಡು ಉದ್ಧಟತನ ಪ್ರದರ್ಶಿಸಿದ
ಮರಾಠಾ ಯುವ ಮಂಚ ಕಾರ್ಯಕರ್ತ ಸೂರಜ್ ಕಣಬರಕರನ ರಾಜ್ಯಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾನೆ
ನಿನ್ನೆ ರಾಷ್ಟ್ರೀಯ ಧ್ವಜ ದಿನಾಚರಣೆ ಅಂಗವಾಗಿ ಉದ್ಧಟತನ ನಡೆದಿದೆ ಕರ್ನಾಟಕದಲ್ಲಿ ಸರ್ಕಾರಿ ಕಚೇರಿ ಎದುರು ಕನ್ನಡಧ್ವಜ ಹಾರಿಸಬಾರದಂತೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗುತ್ತಿದೆ ಎಂದು ಪುಂಡರು ಕಣ್ಣಮುಚ್ಚಿ ಕುಳಿತ ಬೆಳಗಾವಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯೆಕ್ತಪಡಿಸಿದ್ದಾರೆ
ನಾಡದ್ರೋಹಿ ಎಂಈಎಸ್ ಪರಿಸ್ಥಿತಿ ಹೆಗಾಗಿದೆ ಅಂದ್ರೆ ಅಧಿಕಾರ ಇದ್ದಾಗ ಇಮಾಮಸಾಬ ಚುನಾವಣೆ ಬಂದಾಗ ಫಕೀರಸಾಬ ಎನ್ನುಂತಾಗಿದೆ ಕಾಲು ಕೆದರಿ ಜಗಳ ಮಾಡುವ ಈ ದುಷ್ಠರನ್ನು ಪೋಲೀಸರು ಜೈಲಿಗಟ್ಟಿ ಕನ್ನಡದ ನೆಲದ ಮೇಲೆ ನಿಂತು ಕನ್ನಡದ ವಿರುದ್ಧ ಮಾತನಾಡುವ ಬಾಯಿಗೆ ಬೀಗ ಜಡಿಯಬೇಕಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ