Breaking News

ಬೆಳಗಾವಿ ದಕ್ಷಿಣಕ್ಕೆ ಸರೀತಾ..ಗ್ರಾಮೀಣಕ್ಕೆ ಸರಸ್ವತಿ..ಉತ್ತರದಲ್ಲಿ ದುರ್ಗತಿ…!!!!

ಬೆಳಗಾವಿ- ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಜಿಲ್ಲೆಯಲ್ಲಿ ಬಿರುಸಿನ ರಾಜಕೀಯ ವಿದ್ಯಮಾನಗಳು ನಡೆದಿವೆ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಜೆಡಿಎಸ್ ತಯಾರಿ ಮಾಡಿದಂತೆ ಬೆಳಗಾವಿಯ ಕಂಗಾಲ್ ಕಂಪನಿ ಎಂಈಎಸ್ ಕೂಡಾ ಸಿದ್ಧತೆ ಮಾಡಿಕೊಳ್ಳುತ್ತಿದೆ

ಬೆಳಗಾವಿ ದಕ್ಷಿಣ ಕ್ಷೇತ್ರದ ಎಂಈಎಸ್ ಅಭ್ಯರ್ಥಿಯಾಗಲು ಇಬ್ಬರು ಮಾಜಿ ಮಹಾಪೌರಗಳಾದ ಸರೀತಾ ಪಾಟೀಲ ಮತ್ತು ಕಿರಣ ಸೈನಾಯಕ ನಡುವೆ ಪೈಪೋಟಿ ನಡೆದಿದ್ದು ಸೀಟು ಉಳಿಸಿಕೊಂಡು ಮೊತ್ತೊಮ್ಮೆ ಸ್ಪರ್ದೆ ಮಾಡಲು ಹಾಲಿ ಶಾಸಕ ಸಂಬಾಜಿ ಪಾಟೀಲ ಕಸರತ್ತು ನಡೆಸಿದ್ದಾರೆ

ಬೆಳಗಾವಿ ದಕ್ಷಿಣದಲ್ಲಿ ಬಿಜೆಪಿ ಗೆ ಟಕ್ಕರ್ ಕೊಡಲು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಎಂಈಎಸ್ ನಾಯಕರು ತಾಲೀಮು ನಡೆಸಿದ್ದು ದಕ್ಷಣಕ್ಕೆ ಸರೀತಾ ಪಾಟೀಲರೇ ಅಭ್ಯರ್ಥಿ ಆಗುವದು ಬಹುತೇಕ ಖಚಿತವಾಗಿದೆ

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಈ ಕ್ಷೇತ್ರದ ಎಂಈಎಸ್ ಬಂಡಾಯ ನಾಯಕ ಶಿವಾಜಿ ಸುಂಠಕರ ಬಿಜೆಪಿ ಸೇರಿದ ಬಳಿಕ ಅವರ ಸ್ಥಾನ ತುಂಬಲು ಎಂಈಎಸ್ ಜಿಲ್ಲಾ ಪಂಚಾಯತ್ ಸದಸ್ಯೆ ಸರಸ್ವತಿ ಪಾಟೀಲ ಈಗಿನಿಂದಲೇ ಎಂಈಎಸ್ ನಾಯಕರ ದುಂಬಾಲು ಬಿದ್ದಿದ್ದಾರೆ ಮಾಜಿ ಶಾಸಕ ಮನೋಹರ ಕಿಣೇಕರ ವಿರುದ್ಧ ಸರಸ್ವತಿ ಪಾಟೀಲ ಎಂಈಎಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವದು ನೂರಕ್ಕೆ ನೂರು ಖಚಿತ ಎಂದು ಮಾ..ಮಾ ಹಿಂಬಾಲಕರು ಗ್ರಾಮೀಣ ಕ್ಷೇತ್ರದಲ್ಲಿ ಸಂದೇಶ ರವಾನೆ ಮಾಡಿದ್ದಾರೆ

ಬೆಳಗಾವಿ ಉತ್ತರದಲ್ಲಿ ಎಂಈಎಸ್ ಗೆ ಹೇಳಿಕೊಳ್ಳುವಂತಹ ಕ್ಯಾಂಡಿಡೇಟ್ ಸಿಗುತ್ತಿಲ್ಲ ದಕ್ಷಿಣದಿಂದ ಸರೀತಾ ಪಾಟೀಲಗೆ ಅವಕಾಶ ದೊರೆತರೆ ಉತ್ತರಕ್ಕೆ ಸಂಬಾಜಿ ಪಾಟೀಲರೇ ಗತಿ ಎನ್ನುವ ಸುದ್ಧಿ ಕೇಳಿ ಬರುತ್ತಿದ್ದು ಈ ಬಾರಿ ಉತ್ತರದಲ್ಲಿ ಎಂಈಎಸ್ ಡಮ್ಮಿ ಕ್ಯಾಂಡಿಡೇಟ್ ಹಾಕಿ ಹಿಂದುತ್ವ ಸಿದ್ಧಾಂತಕ್ಕೆ ಪರೋಕ್ಷ ಬೆಂಬಲ ಕೊಡಲು ನಿರ್ಧರಿಸಿದೆ ಎನ್ನುವ ಸುದ್ಧಿ ಈಗ ಗುಟ್ಟಾಗಿ ಉಳಿದಿಲ್ಲ

ಎಂಈಎಸ್ ತೊರೆದು ಬಿಜೆಪಿ ಸೇರಿದ ಶಿವಾಜಿ ಸುಂಠಕರ ಅವರಿಗೆ ಬಿಜೆಪಿ ಎಲ್ಲಿ ಅವಕಾಶ ಕೊಡುತ್ತದೆ ಎನ್ನುವ ವಿಷಯ ಈಗ ಚರ್ಚೆಗೆ ಗ್ರಾಸವಾಗಿದೆ ಶಿವಾಜಿ ಸುಂಠಕರ ಅವರಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟು ಶಾಸಕ ಸಂಜಯ್ ಪಾಟೀಲ ಬೆಳಗಾವಿ ಉತ್ತರದಿಂದ ನಿಲ್ಲಬಹುದು ಎಂದು ಬಿಜೆಪಿಯ ಕೆಲವು ನಾಯಕರು ಹೇಳುತ್ತಿದ್ದು ಇನ್ನು ಕೆಲವು ನಾಯಕರು ಶಿವಾಜಿ ಸುಂಠಕರ ಬೆಳಗಾವಿ ಉತ್ತರದ ಬಿಜೆಪಿ ಅಭ್ಯರ್ಥಿ ಆಗ್ತಾರೆ ಗ್ರಾಮೀಣದಲ್ಲಿ ಸಂಜಯ್ ಪಾಟೀಲ್ ಅವರಿಗೆ ಗ್ರಾಮೀಣದಲ್ಲಿ ಸಪೋರ್ಟ್ ಮಾಡ್ತಾರೆ ಎಂದು ಹೇಳಲಾಗುತ್ತದೆ

ಒಟ್ಟಾರೆ ನಾಡ ವಿರೋಧಿ ಎಂಈಎಸ್ ಕೂಡಾ ಇಲೆಕ್ಷನ್ ಗೆ ಕ್ಯಾಂಡಿಡೇಡ್ ಸೆಲೆಕ್ಷನ್ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ್ದು ಬೆಳಗಾವಿ ಉತ್ತರದಲ್ಲಿ ಎಂಈಎಸ್ ನಡೆ ಮಾತ್ರ ನಿಗೂಢ..

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *