ಬೆಳಗಾವಿ- ಗಡಿ ಭಾಗದಲ್ಲಿ ಅಸ್ತಿತ್ವ ಕಳೆದುಕೊಂಡಿರುವ ನಾಡವಿರೋಧಿ ಎಂಈಎಸ್ ಮತ್ತೆ ಬಾಲಬಿಚ್ಚಿಕೊಂಡಿದ್ದು ಕರ್ನಾಟಕ ರಾಜ್ಯೋತ್ಸವದ ದಿನ ಕರಾಳದಿನ ಆಚರಿಸಿ ಪುಂಡಾಟಿಕೆ ಪ್ರದರ್ಶಿಸಲು ಮಹಾರಾಷ್ಟ್ರದ ಕಿಡಗೇಡಿಗಳನ್ನು ಬೆಳಗಾವಿಗೆ ಕರೆಯಿಸಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ನಿರ್ಧರಿಸಿದೆ
ಕರಾಳ ದಿನಾಚರಣೆಗೆ ಮಹಾರಾಷ್ಟ್ರದ ಮಾಜಿ ಮಂತ್ರಿ ನಾರಾಯಣ ರಾಣೆ ಅವರ ಪುತ್ರ ನಿತೀಶ ರಾಣೆ ಬೆಳಗಾವಿಗೆ ಬಂದು ಮುಖಕ್ಕೆ ಕಪ್ಪು ಪಟ್ಟಿ ಕಟ್ಟಿಕೊಂಡು ಸೈಕಲ್ ಹತ್ತತಾರಂತೆ
ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ ನಾಡವಿರೋಧಿಗಳು ಬೆಳಗಾವಿಯಲ್ಲಿ ನವ್ಹೆಂಬರ್ 13 ರಂದು ಮರಾಠಿ ಮಹಾ ಮೇಳಾವ್ ನಡೆಸುತ್ತಿದ್ದು ಈ ಮೇಳಾವ್ ಗೆ ಗೋಪಿನಾಥ ಮುಂಡೆ ಅವರ ಸೋದರ ಸಮಂಧಿ ಧನಂಜಯ ಮುಂಡೆ,ಮಹಾರಾಷ್ಟ್ರ ಮಾಜಿ ಮಂತ್ರಿ ಜಯವಂತ ಪಾಟೀಲ ಬೆಳಗಾವಿಗೆ ಬರ್ತಾರೆಂದು ಝಾಪಾಗಳು ಬೆಳಗಾವಿ ತಾಲೂಕಿ ಹಳ್ಳಿಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ
ಕರ್ನಾಟಕ ಸರ್ಕಾರ ಪ್ರತಿ ವರ್ಷದಂತೆ ಈ ವರ್ಷವೂ ಕರಾಳ ದಿನಾಚರಣೆಗೆ ಅನುಮತಿ ನೀಡಲು ಬೆಳಗಾವಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ
ಬೆಳಗಾವಿಯಲ್ಲಿ ರಾಜ್ಯೋತ್ಸವದ ತಯಾರಿ ಜೋರು
ಬೆಳಗಾವಿ ನಗರ ಕನ್ನಡ ರಾಜ್ಯೋತ್ಸವದ ಆಚರಣೆಗೆ ಸಿದ್ಧವಾಗುತ್ತಿದೆ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರು ನಗರದ ರಸ್ತೆಗಳ ಸ್ವಚ್ಛತಾ ಕಾಮಗಾರಿಗಳನ್ನು ಆರಂಭಿಸಿದ್ದಾರೆ
ಬೆಳಗಾವಿಯ ರಾಯಣ್ಣ ಸರ್ಕಲ್ ದಿಂದ ಚನ್ನಮ್ಮ ಸರ್ಕಲ್ ವರೆಗಿನ ರಸ್ತೆಯನ್ನು ಸ್ವಚ್ಛ ಮಾಡಿ ರಸ್ತೆ ವಿಭಾಜಕಗಳಿಗೆ ಬಣ್ಣ ಹಚ್ಚಲಾಗುತ್ತಿದೆ ರಾಜ್ಯೋತ್ಸವ ಮೆರವಣಿಗೆ ಸಾಗುವ ಮಾರ್ಗವನ್ನು ಸುಂದರೀಕರಣ ಗೊಳಿಸುವ ಕೆಲಸ ಭರದಿಂದ ಸಾಗಿದೆ
ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಾಗು ಚನ್ನಮ್ಮ ವೃತ್ತದಲ್ಲಿ ದೊಡ್ಡ ದೊಡ್ಡ ಸ್ವಾಗತ ಕಮಾನುಗಳನ್ನು ಹಾಕಲಾಗುತ್ತಿದೆ ಕಮಾನುಗಳಿಗೆ ಜಿಲ್ಲಾಡಳಿತ ಈ ಬಾರಿಯೂ ಹೂವಿನ ಅಲಂಕಾರ ಮಾಡುತ್ತಿದೆ