ಬೆಳಗಾವಿ- ಗಡಿನಾಡ ಗುಡಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕದ ಶಕ್ತಿಯ ಕೇಂದ್ರ ಸುವರ್ಣ ವಿಧಾನಸೌಧ ಬೆಳಗಾವಿಯಲ್ಲಿ ನಿರ್ಮಾಣ ಆದಾಗಿನಿಂದ ನಾಡದ್ರೋಹಿ ಎಂಈಎಸ್ ಗೆ ಹೊಟ್ಟೆ ಕಿಚ್ಚು ಅಸೂಹೆ ಹೀಗಾಗಿ ಕನ್ನಡಿಗರು ಸಂಬ್ರಮ ಪಡುವ ದಿನ ಎಂಈಎಸ್ ನಾಯಕರು ಮಂಗನಾಟ ಆಡುವದು ಇವರ ಫ್ಯಾಶನ್ ಆಗಿ ಬಿಟ್ಟಿದೆ
ನವ್ಹೆಂಬರ್ 13 ರಿಂದ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುವ ದಿನ ಎಂಈಎಸ್ ಬೆಳಗಾವಿಯಲ್ಲಿ ಮರಾಠಿ ಮಹಾ ಮೇಳಾವ್ ಆಯೋಜಿಸಿ ಈ ಮೇಳಾವ್ ಗೆ ಮಹಾರಾಷ್ಟ್ರದ ನಾಯಕರನ್ನು ಬೆಳಗಾವಿಗೆ ಬುಲಾವ್ ಮಾಡಿಸಿ ಅವರ ಬಾಯಿಂದಲೇ ಭಾಷಾ ವೈಷಮ್ಯದ ಬೆಂಕಿ ಉಗುಳಿಸಲು ಎಂಈಎಸ್ ಪ್ಲ್ಯಾನ್ ಮಾಡಿದೆ
ಈ ಬಾರಿ ಮೇಳಾವ್ ಗೆ ಮಹಾರಾಷ್ಟ್ರದ ಕಂದಾಯ ಮಂತ್ರಿ ಚಂದ್ರಕಾಂತ ದಾದಾ ಪಾಟೀಲ ಮುಖ್ಯ ಅತಿಥಿಯಾಗಿ ಬರುತ್ತಿದ್ದಾರೆ ಚಂದ್ರಕಾಂತ ದಾದಾ ಪಾಟೀಲ ಮಹಾರಾಷ್ಟ್ರದ ಕಂದಾಯ ಮಂತ್ರಿಯ ಜೊತೆಗೆ ಮಹಾರಾಷ್ಟ್ರದ ಗಡಿ ಉಸ್ತುವಾರಿ ಮಂತ್ರಿಯೂ ಆಗಿದ್ದಾರೆ ಇವರ ಜೊತೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಧನಂಜಯ ಮುಂಡೆ ಕೂಡ ಬೆಳಗಾವಿಯ ಮರಾಠಿ ಮಹಾ ಮೇಳಾವ್ ದಲ್ಲಿ ಭಾಗವಹಿಸಲಿದ್ದಾರೆ
ಕಳೆದ ವರ್ಷ ಬೆಳಗಾವಿ ಜಿಲ್ಲಾಧಿಕಾರಿ ಎನ್ ಜಯರಾಂ ಅವರು ಮರಾಠಿ ಮೇಳಾವ್ ದಲ್ಲಿ ಮಹಾರಾಷ್ಟ್ರದ ನಾಯಕರು ಮಂತ್ರಿಗಳು ಭಾಗವಹಿಸದಂತೆ ನಿಷೇಧ ಹೇರಿ ದಿಗ್ಭಂಧನದ ಆದೇಶ ಹೊರಡಿಸಿದ್ದರು ಕರ್ನಾಟಕದ ಪೋಲೀಸರು ಮಹಾರಾಷ್ಟ್ರದ ನಾಯಕರನ್ನು ಕಾಗಲ್ ಗ್ರಾಮದಲ್ಲಿ ತಡೆ ಹಿಡಿದು ಮಹಾರಾಷ್ಟ್ರಕ್ಕೆ ವಾಪಸ್ ಕಳುಹಿಸಿದ್ದರು
ಈ ಬಾರಿ ಮಹಾ ನಾಯಕರಿಗೆ ಯಾವುದೇ ರೀತಿಯ ನಿಷೇಧ ಇಲ್ಲವಾದರಿಂದ ಬೆಳಗಾವಿಯ ಕಂಗಾಲ್ ಕಂಪನಿ ಹೆಂಡ ಕುಡಿದ ಮಂಗನಂತೆ ಚೆಲ್ಲಾಟ ಶುರು ಮಾಡಿದೆ ಮೇಳಾವ್ ಗೆ ಮೇಯರ್ ಮತ್ತು ಎಂಈಎಸ್ ನ ನಗರ ಸೇವಕರು ಕಡ್ಡಾಯವಾಗಿ ಪಾಲ್ಗೊಳ್ಳಲೇ ಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ
ಕರಾಳ ದಿನಾಚರನೆಯಲ್ಲಿ ಭಾಗವಹಿಸಿ ಪುಂಡಾಟಿಕೆ ಪ್ರದರ್ಶಿಸಿದ ಮೇಯರ್ ಸಂಜೋತಾ ಮೇಳಾವ್ ದಲ್ಲಿ ಭಾಗವಹಿಸುವ ಸಮಝೋತಾ ಮಾಡಿಕೊಂಡಿದ್ದಾರೆ
ನವ್ಹೆಂಬರ್ 13 ರಂದು ಕರ್ನಾಟಕ ಸರ್ಕಾರ ಗಂಟೆ ಮೂಟೆ ಕಟ್ಟಿಕೊಂಡು ಬೆಳಗಾವಿಗೆ ಬರುತ್ತಿದೆ ಅದೇ ದಿನ ಕಂಗಾಲ್ ಕಂಪನಿ ಎಂಈಎಸ್ ನ ಮಹಾ ನಾಟಕವೂ ಬೆಳಗಾವಿಯಲ್ಲಿ ನಡೆಯುತ್ತಿದೆ ಈ ನಾಟಕದಲ್ಲಿ ಮಹಾ ನಾಯಕರು ಕಲಾವಿದರಾಗಿ ಭಾಗವಹಿಸುತ್ತಿದ್ದು ಎಂಈಎಸ್ ನಾಯಕರು ಈಗಿನಿಂದಲೇ ಮುಖಕ್ಕೆ ಬಣ್ಣ ಹಚ್ವಿಕೊಳ್ಳುತ್ತಿದ್ದಾರೆ
ಕರ್ನಾಟಕ ಸರ್ಕಾರ ಈ ಕಂಗಾಲ್ ಕಂಪನಿಗೆ ಬೀಗ ಜಡಿಯೋದು ಯಾವಾಗ ಅನ್ನೋದನ್ನ ಗಡಿನಾಡ ಕನ್ನಡಿಗರು ಕಾಯುತ್ತಿದ್ದಾರೆ