ಬೆಳಗಾವಿ- ಬೆಳಗಾವಿಯಲ್ಲಿ ಅದ್ಧೂರಿ ಮೊಹರಂ ಹಬ್ಬ ನಡೆಯಿತು ಮೊಹರಂ ಹಬ್ಬದ ಹತ್ತನೇಯ ದಿನವಾದ ಇಂದು ಬೆಳಗಾವಿಯ ದರ್ಬಾರ್ ಗಲ್ಲಿಯಲ್ಲಿ ಮೊಹರಂ ಪಂಜಾ ಗಳ ಸಮ್ಮಿಲನವಾಯಿತು ಇದನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಹಿಂದು ಮುಸ್ಲಿಂ ಬಾಂಧವರು ಸೇರುವದರ ಮೂಲಕ ಭಾವೈಕ್ಯತೆ ಮರೆದರು
ಬೆಳಗಾವಿ ನಗರದ ವಿವಿಧ ಭಾಗಗಳಲ್ಲಿ ಪ್ರತಿಷ್ಠಾಪಿಸಲಾದ ಪಂಜಾ ಗಳು ಇಂದು ಬೆಳಿಗ್ಗೆ ದರ್ಬಾರ್ ಗಲ್ಲಿಯಲ್ಲಿ ಸೇರಿದವು ಬೆಳಗಾವಿ ನಗರ ಹಾಗು ಸುತ್ತಮುತ್ತಲಿನ ಗ್ರಾಮಗಳಾದ ಪೀರನವಾಡಿ,ಮಚ್ಚೆ,ಕಾಕತಿಉಚಗಾಂವ ಸೇರಿದಂತೆ ಸುಮಾರು ಐವತ್ತಕ್ಕೂ ಹೆಚ್ವು ಪಂಜಾಗಳ ಮಿಲನ ದರ್ಬಾರ್ ಗಲ್ಲಿಯಲ್ಲಿ ನಡೆಯಿತು
ಹಬ್ಬದ ಕೊನೆಯ ದಿನವಾದ ಇಂದು ಹತ್ತನೇಯ ದಿನ ಮೊಹರಂ ಹಬ್ಬದ ದಸವಿ ಯ ದಿನವಾಗಿದ್ದು ಪ್ರತಿ ವರ್ಷ ಈ ದಿನ ನಗರ ಹಾಗು ಸುತ್ತ ಮುತ್ತಲಿನ ಪಂಜಾಗಳ ಮಿಲನ ಬೆಳಿಗ್ಗೆ ಏಳು ಗಂಟೆಗೆ ನಡೆಯುತ್ತದೆ ಈ ದೃಶ್ಯ ನೋಡಿ ಹರಕೆ ಹೊತ್ತು ,ಹರಕೆ ತೀರಿಸುವದು ಸಂಪ್ರದಾಯ
ಇಂದು ಬೆಳಗಿನ ಜಾವ ದರ್ಬಾರ್ ಗಲ್ಲಿಯಲ್ಲಿ ಹದಿನೈದು ಸಾವಿರಕ್ಜೂ ಹೆಚ್ಚು ಭಕ್ತರು ಸೇರಿದ್ದರು ಪಂಜಾಗಳ ಮಿಲನ ಆಗುತ್ತಿದ್ದಂತೆಯೇ ಹಸನ್ ಹುಸ್ಸೇನ್ ಕೀ ದೋಸ್ತರಾರ್ಧೀನ್ ಎಂದು ಜಯಘೋಷ ಕೂಗುವ ಮೂಲಕ ಭಕ್ತಿಯ ಮಹಾಪೂರವನ್ನೇ ಹರಿಸಿದರು
ಇಂಂದು ರಾತ್ರಿ 8 ಘಂಟೆಗೆ ನಗರದಲ್ಲಿ ಪ್ರತಿಷ್ಟಾಪನೆ ಮಾಡಲಾಗಿರುವ ತಾಬೂತು (ದೇವರು) ಗಳ ವಿಸರ್ಜನೆ ಕಾರ್ಯಕ್ರಮ ಪೀಪಲ್ ಕಟ್ಟಾ ವೃತ್ತದಿಂದ ಆರಂಭವಾಗುತ್ತದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ