ಬೆಳಗಾವಿಯಲ್ಲಿ, ಮೌಂಸ ಸಾಗಿಸುತ್ತಿದ್ದ ಟಾಟಾ ಎಸ್ ಗೆ ಬೆಂಕಿ

ಬೆಳಗಾವಿ- ಬೆಳಗಾವಿಯಿಂದ ಕಣಬರ್ಗಿ ಕಡೆಗೆ ಮೌಂಸ ಸಾಗಿಸುತ್ತಿದ್ದ ಟಾಟಾ ಎಸ್ ವಾಹನಕ್ಕೆ ಕೆಲವು ಕಿಡಗೇಡಿಗಳು ಬೆಂಕಿ ಹಚ್ವಿದ ಘಟನೆ ಬೆಳಗಾವಿಯ ಅಟೋನಗರದ ಬಳಿ ನಡೆದಿದೆ

ಬೆಳಗಾವಿಯದ ಕಣಬರ್ಗಿಯ ಕಡೆಗೆ ಹೊರಟಿದ್ದ ಟಾಟಾ ಎಸ್ ವಾಹನ ಅಟೋನಗರದ ಬಳಿ ಹೊತ್ತಿ ಉರಿದಾಗ ಅದನ್ನು ಆರಿಸಲು ಕೆಲವರು ಪ್ರಯತ್ನಿಸಿದ್ದಾರೆ ಆದರೆ ವಾಹನದಲ್ಲಿ ಮೌಂಸ ಇರುವದನ್ನು ನೋಡಿ ದೂರ ಸರಿದಿದ್ದಾರೆ

ಮೌಂಸದಿಂದ ತುಂಬಿಕೊಂಡಿದ್ದ ಟಾಟಾ ಎಸ್ ವಾಹನದ ಮುಂಬಾಗ ಸುಟ್ಟಿದೆ ಮೌಂಸವೂ ಬೆಂಕಿಗಾಹುತಿಯಾಗಿದೆ ವಾಹನದಲ್ಲಿದ್ದ ಚಾಲಕ ಮತ್ತು ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದೆ ಮಾಳ ಮಾರುತಿ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಈ ವಾಹನಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿದೆಯೋ ಅಥವಾ ಕಿಡಗೇಡಿಗಳು ಬೆಂಕಿ ಹಚ್ಚಿದ್ದಾರೆಯೋ ಎಂಬುವದನ್ನು ಪರಶೀಲನೆ ಮಾಡುತ್ತಿದ್ದು ತನಿಖೆ ಮುಂದುವರೆದಿದೆ

Check Also

ಬೆಳಗಾವಿಯಲ್ಲಿ ಆಕಸ್ಮಿಕ ಕರೆಂಟ್ ಪವರ್ ಮ್ಯಾನ್ ಸಾವು.

ಬೆಳಗಾವಿ -ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸಾವನ್ಬೊಪ್ಪಿದ್ದಾನೆ.ರಾಹುಲ್ ಪಾಟೀಲ್(30) ಮೃತ ಪವರ್ ಮ್ಯಾನ್ ಎಂದು ಗುರುತಿಸಲಾಗಿದೆ.ಬೆಳಗಾವಿಯ ಯಳ್ಳೂರು ಗ್ರಾಮದ …

Leave a Reply

Your email address will not be published. Required fields are marked *