ಬೆಳಗಾವಿ- ಸುರೇಶ್ ಅಂಗಡಿ ಅವರ ಅಗಲಿಕೆಯ ಬಳಿಕ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ರಾಜಕೀಯ ಚಟುವಟಿಕೆಗಳು,ಚರ್ಚೆಗಳು, ಜೊತೆಗೆ ರಾಜಕೀಯ ತಂತ್ರಗಾರಿಕೆ ಶುರುವಾಗಿದೆ
ಬೆಳಗಾವಿಯ ಬಿಜೆಪಿ ಮತ್ತು ಕಾಂಗ್ರೆಸ್,ಎರಡೂ ಪಕ್ಷಗಳಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ.ಬೆಳಗಾವಿ ಲೋಕಸಭಾ ಚುನಾವಣೆಗೆ ಆಖಾಡಾ ರೆಡಿ ಮಾಡಲು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ನಾಯಕರು ಕಸರತ್ತು ನಡೆಸಿರುವದು ಸತ್ಯ
ಬೆಳಗಾವಿಯ ಕೆಲವು ಬಿಜೆಪಿ ನಾಯಕರು ಸುರೇಶ್ ಅಂಗಡಿ ಅವರ ಹಿರಿಯ ಪುತ್ರಿಗೋ, ಅಥವಾ ಅವರ ಪತ್ನಿಗೋ ಟಿಕೆಟ್ ಕೊಡಿ ಎನ್ನುವ ಒತ್ತಾಯ ಮಾಡಿದ್ದಾರೆ,ಇವರಿಗೆ ಟಿಕೆಟ್ ಕೊಡದಿದ್ದರೆ ಟಿಕೆಟ್ ನಮಗೆ ಕೊಡಿ ಎನ್ನುವ ಬೇಡಿಕೆಯನ್ನು ಹಲವಾರು ಜನ ಬಿಜೆಪಿ ನಾಯಕರು ಮಂಡಿಸಿದ್ದಾರೆ.
ಇವೆಲ್ಲ ಬೆಳವಣಿಗೆಗಳ ಮದ್ಯೆ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಶಿಕ್ರವಾರ ಬೆಳಗಾವಿಯಲ್ಲಿ ನೀಡಿದ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ,ಕಾಂಗ್ರೆಸ್ ಪಕ್ಷ ಅಂಗಡಿ ಕುಟುಂಬದವರಿಗೆ ಗಾಳ ಹಾಕಲು ತಂತ್ರ ರೂಪಿಸಿದೆ ಎನ್ನುವದು ಸ್ಪಷ್ಟವಾಗುತ್ತದೆ.
ಬೆಂಗಳೂರಿನಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಅವರ ಪತ್ನಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಕೊಟ್ಟಿಲ್ಲ,ಬೆಳಗಾವಿಯಲ್ಲೂ ಸುರೇಶ್ ಅಂಗಡಿ ಅವರ ಕುಟುಂಬದವರಿಗೆ ಬಿಜೆಪಿ ಟಿಕೆಟ್ ಕೊಡುವದಿಲ್ಲ ಎನ್ನುವದು ಕೆಲವು ಬಿಜೆಪಿ ನಾಯಕರ ವಾದವಾಗಿ.ಸುರೇಶ್ ಅಂಗಡಿ ಕುಟುಂಬದವರಗೆ ಬಿಜೆಪಿ ಟಿಕೆಟ್ ಕೊಡದಿದ್ದರೆ,ಅಂಗಡಿ ಕುಟುಂಬದವರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಬಿಜೆಪಿಗೆ ಮುಜುಗರ ವನ್ನುಂಟು ಮಾಡಲು ಕಾಂಗ್ರೆಸ್ ತಂತ್ರ ರೂಪಿಸಿದೆ ಎಂದು ಹೇಳಲಾಗುತ್ತಿದೆ.
ಶುಕ್ರವಾರ ಬೆಳಗಾವಿಯಲ್ಲಿ ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್ ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಲ್ಯಾಂಡಿಂಗ್ ಆಗುತ್ತಿದ್ದಂತೆಯೇ ಸುರೇಶ್ ಅಂಗಡಿ ಕುಟುಂಬದವರ ಪರವಾಗಿ ಬ್ಯಾಟಿಂಗ್ ಮಾಡಿದ್ರು,ಸುರೇಶ್ ಅಂಗಡಿ ಅವರ ಪಾರ್ಥಿವ ಶರೀರವನ್ನು,ಬೆಳಗಾವಿಗೆ ತರಬಹುದಾಗಿತ್ತು,ಕೇಂದ್ರ ಸರ್ಕಾರ ಅಂಗಡಿ ಕುಟುಂಬಕ್ಕೆ ಅವರ ಅಭಿಮಾನಿಗಳಿಗೆ ಅನ್ಯಾಯ ಮಾಡಿತು.ಎಂದು ಶಿವಕುಮಾರ್ ಹೇಳಿದ್ದನ್ನು ಗಮನಿಸಿದ್ರೆ ಕಾಂಗ್ರೆಸ್ ಅಂಗಡಿ ಕುಟುಂಬದವರಿಗೆ ಮನವೊಲಿಸಲು ಮುಂದಾಗಿದೆ ಅನ್ನೋದು ಸ್ಪಷ್ಟವಾಗುತ್ತದೆ.
ಡಿ ಕೆ ಶಿವಕುಮಾರ್ ನಿನ್ನೆ ಶುಕ್ರವಾರ ಬೆಳಗಾವಿಯ ಸದಾಶಿವ ನಗರದಲ್ಲಿ ಇರುವ ಸುರೇಶ್ ಅಂಗಡಿ ಅವರ ಮನೆಗೆ ಭೇಟಿ ನೀಡಿ ಸುರೇಶ್ ಅಂಗಡಿ ಅವರ ತಾಯಿಯ ಕಾಲಿಗೆ ನಮಸ್ಕರಿಸಿ,ಸಾಂತ್ವನ ಹೇಳಿ,ಸುರೇಶ್ ಅಂಗಡಿ ಅವರ ಸೇವೆಯನ್ನು ಸ್ಮರಿಸಿದರು.