ಬೆಳಗಾವಿ- ಅತೀ ಹೆಚ್ಚು ಮರಾಠಾ ಸಮುದಾಯದ ಮತದಾರರನ್ನು ಹೊಂದಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಮೇಲೆ ಜಿಡಿಎಸ್ ಮುಖಂಡ ಪಿ ಜಿ ಆರ್ ಸಿಂದ್ಯಾ ಅವರ ಕಣ್ಣು ಬಿದ್ದಿದೆ
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡರೆ ಪಿ ಜಿ ಆರ್ ಸಿಂಧ್ಯಾ ಅವರಿಗಾಗಿ ಜೆ ಡಿ ಎಸ್ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಬಿಟ್ಟು ಕೊಡುವಂತೆ ಪಟ್ಟು ಹಿಡಿಯಲಿದೆ ಎನ್ನುವ ಸುದ್ಧಿ ಈಗ ಜಿಲ್ಲೆಯಲ್ಲಿ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತಗಳು ಹೆಚ್ಚಿವೆ ಎರಡನೇಯ ಸ್ಥಾನದಲ್ಲಿ ಮರಾಠಾ ಸಮುದಾಯದ ಮತಗಳಿವೆ ಹಲವಾರು ವರ್ಷಗಳಿಂದ ಮರಾಠಾ ಸಮುದಾಯದ ಸಂಘಟನೆಯಲ್ಲಿ ಸಕ್ರೀಯವಾಗಿರುವ ಪಿಜಿಆರ್ ಸಿಂಧ್ಯಾ ಬೆಳಗಾವಿಯ ಮರಾಠಾ ಸಮುದಾಯದ ನಾಯಕರ ಜೊತೆ ನಿಕಟ,ಸಂಪರ್ಕ ಹೊಂದಿದ್ದಾರೆ
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ದೆ ಮಾಡುವಂತೆ ಬೆಳಗಾವಿಯ ಮರಾಠಾ ಸಮುದಾಯದ ನಾಯಕರೇ ಪಿಜಿಆರ್ ಸಿಂದ್ಯಾ ಅವರನ್ನು ಅಹ್ವಾನ ನೀಡಿದ್ದಾರೆ ಎಂದು ತಿಳಿದು ಬಂದಿದೆ
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರವಾಗಿ ಪಿಜಿಆರ್ ಸಿಂಧ್ಯಾ ಈಗಾಗಲೇ ಎರಡು ಮೂರು ಬಾರಿ ಬೆಳಗಾವಿಗೆ ಭೇಟಿ ನೀಡಿ ಸ್ಥಳೀಯ ನಾಯಕರ ಜೊತೆ ಸಮಾಲೋಚನೆ ನಡೆಸಿದ್ದಾರೆ ಎನ್ನುವ ಮಾಹಿತಿ ಇದೆ .
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ದೋಸ್ತಿ ಮತ್ತು ಮೈತ್ರಿ ಮುಂದುವರೆದರೆ ಹೊಂದಾಣಿಕೆ ಸಫಲವಾದಲ್ಲಿ ಜೆಡಿಎಸ್ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಡುವ. ಬೇಡುಕೆ ಇಡೋದು ಗ್ಯಾರಂಟಿ
ಕಾಂಗ್ರೆಸ್ ಪಕ್ಷದಲ್ಲಿ ಶಿವಕಾಂತ,ಸಿಧ್ನಾಳ ಚನ್ನರಾಜ ಹಟ್ಟಿಹೊಳಿ,ಬೈಲಹೊಂಗಲದ ಸಾಧುನವರ ಮತ್ತು ಮಾಜಿ ಶಾಸಕ ರಮೇಶ ಕುಡಚಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ