ಬೆಳಗಾವಿ- ಬೆಳಗಾವಿ ಪ್ರತಿಷ್ಠಿತ ಲೇಕ್ ವ್ಯೂ ಆಸ್ಪತ್ರೆಯ ವೈದ್ಯ ಗಿರೀಶ ಸೋನವಾಲಕರ ಇವರು ಇಂದು ನವದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆದಂತಹ ಶ್ರೀ B. L. ಸಂತೋಷಜಿ ಅವರನ್ನು ಬೇಟಿಯಾಗಿರುವ ವಿಷಯ ಈಗ ಬಿಜೆಪಿ ಪಾಳೆಯದಲ್ಲಿ ಅತ್ಯಂತ ಕುತೂಹಲ ಕೆರಳಿಸಿದೆ.
ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬೈ ಇಲೆಕ್ಷನ್ ಇನ್ನೂ ಘೋಷಣೆ ಆಗಿಲ್ಲ ಆದ್ರೆ ಬಿಜೆಪಿ ಪಾಳೆಯದಲ್ಲಿ ಬಿ ಫಾರ್ಮ್ ಗಾಗಿ ಮುಸುಕಿನ ಗುದ್ದಾಟ ಜೋರಾಗಿಯೇ ನಡೆದಿದೆ.
ಚುನಾವಣೆಯ ದಿನಾಂಕ ಫೆಬ್ರುವರಿ 3 ಅಥವಾ 4 ರಂದು ಘೋಷಣೆಯಾಗುವ ಸಾಧ್ಯತೆ ಇದ್ದು ಆಕಾಂಕ್ಷಿಗಳು ಜಬರದಸ್ತ್ ಲಾಭಿ ನಡೆಸಿದ್ದಾರೆ.ಬಿಜೆಪಿ ಟಿಕೆಟ್ ಗಾಗಿ ಡಾ.ಸೋನವಾಲ್ಕರ್ ಮತ್ತು ಡಾ. ರವಿ ಪಾಟೀಲ ನಡುವೆ ತೀವ್ರ ಪೈಪೋಟಿ ನಡೆದಿದ್ದು ಡಾ. ಸೋನವಾಲ್ಕರ್ ಅವರು ಗೋವಾ ಮುಖ್ಯಮಂತ್ರಿ ಸಾವಂತ ಮುಖೇನ ನೇರವಾಗಿ ದೆಹಲಿಗೆ ಹಾರಿದ್ದು,ದೆಹಲಿಯಲ್ಲಿ ಸಂತೋಷ್ ಜೀ ಅವರನ್ನು ಭೇಟಿಯಾಗಿರುವ ವಿಷಯ ಅತ್ಯಂತ ಕುತೂಹಲ ಕೆರಳಿಸಿದೆ.
ಡಾ.ಗಿರೀಶ್ ಸೋನವಾಲ್ಕರ್ ಈಗ ದೆಹಲಿಯಲ್ಲಿ ಬೀಡಾರ ಹೂಡಿದ್ದು ಬಿಜೆಪಿ ಟಿಕೆಟ್ ಗಾಗಿ ತೀವ್ರ ಕಸರತ್ತು ನಡೆಸಿದ್ದಾರೆ.ಜೊತೆಗೆ ಡಾ. ರವಿ ಪಾಟೀಲ ಎರಡು ದಿನದ ಹಿಂದಷ್ಟೇ ದೆಹಲಿಯಲ್ಲಿ ಲಾಬಿ ಮಾಡಿ ಬೆಳಗಾವಿಗೆ ವಾಪಸ್ ಬಂದಿದ್ದಾರೆ.
ಬೆಳಗಾವಿ ಲೋಕಸಭಾ ಉಪ ಚುನಾವಣೆಯ ವಿಚಾರದಲ್ಲಿ ಈಗ ಗೋವಾ ಮುಖ್ಯಮಂತ್ರಿ ಸಾವಂತ ಅವರು ಮದ್ಯಪ್ರವೇಶ ಮಾಡಿದ್ದು ಅವರು ಡಾ.ಗಿರೀಶ್ ಸೋನವಾಲ್ಕರ್ ಅವರ ಪರವಾಗಿ ಬ್ಯಾಟೀಂಗ್ ಮಾಡಿದ್ದಾರೆ.
ಬೆಳಗಾವಿ ಬಿಜೆಪಿ ಗ್ರಾಮಾಂತರ ಜಿಲ್ಲೆಯ ಅದ್ಯಕ್ಷ ಮಾಜಿ ಶಾಸಕ ಸಂಜಯ ಪಾಟೀಲ ಅವರು ಮಾಜಿ ಮಂತ್ರಿ ಸಿಟಿ ರವಿ ಅವರ ಮುಖೇನ ಲಾಭಿ ನಡೆಸಿದ್ದು,ಮರಾಠಾ ಸಮಾಜದ ಬಿಜೆಪಿ ಮುಖಂಡ ಕಿರಣ ಜಾಧವ ಅವರು ಕೂಡಾ ಸದ್ದಿಲ್ಲದೇ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನ ಮುಂದುವರೆಸಿದ್ದಾರೆ.