ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಜೀವನಾಡಿಯಾಗಿರುವ ಕಿಣಿಯೇ ಡ್ಯಾಂ ಕಾಮಗಾರಿ ನಡೆಯುತ್ತಿದೆ ಸಂಸದ ಸುರೇಶ ಅಂಗಇ ಅವರು ಗುರುವಾರ ಕಿಣಿಯೇ ಡ್ಯಾಂ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಶಿಲಿಸಿದರು
ಬೆಳಗಾವಿ ಜಿಲ್ಲೆ ಭೂಸ್ವಾಧೀನ ಅಧಿಕಾರಿ ಪ್ರೀತಂ ನರಸಲಾಪುರೆ,ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು ಕಿಣಿಯೇ ಡ್ಯಾಂ ನಲ್ಲಿ ಜಮೀನು ಕಳೆದುಕೊಂಡ ಕೆಲವು ರೈತರಿಗೆ ಪರಿಹಾರ ಸಿಕ್ಕಿಲ್ಲ ಎರಡು ತಿಂಗಳಲ್ಲಿ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ಕೊಡುವಂತೆ ಅಧಿಕಾರಿಗಳಿಗೆ ಸಂಸದ ಸುರೇಶ ಅಂಗಡಿ ತಿಳಿಸಿದರು
ಡ್ಯಾಂ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಿ ಮಳೆಗಾಲದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕು ಕಿಣಿಯೇ ಸೇರಿದಂತೆ ಸುತ್ತಮುತ್ತಲಿನ ಗ್ರಮಗಳ ರೈತರಿಗೆ ನೀರು ಸಿಗಬೇಕು ಈ ವಿಷಯದಲ್ಲಿ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಸಂಸದ ಅಂಗಡಿ ಅಧಿಕಾರಿಗಳಿಗೆ ತಾಕೀತು ನಾಡಿದರು
ಕಿಣಿಯೇ ಗ್ರಾಮದ ರೈತರು ಹಾಗು ಹಿರಿಯರು ಸಂಸದ ಅಂಗಡಿ ಅವರನ್ನು ಭೇಟಿಯಾಗಿ ಹಲವಾರು ಸಮಸ್ಯೆಗಳನ್ನು ಅವರ ಗಮನಕ್ಕೆ ತಂದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ