ಬೆಳಗಾವಿ- ಬರ್ಮಾ ದೇಶದಲ್ಲಿ ಮುಸ್ಲಿಂ ಸಮುದಾಯದ ಮೇಲಿನ ಹತ್ಯಾಕಾಂಡವನ್ನು ಖಂಡಿಸಿ ಬೆಳಗಾವಿಯ ಮುಸ್ಲಿಂ ಬಾಂಧವರಿಂದ ಬೃಹತ್ ಪ್ರತಿಭಟನೆ ನಡೆಯಿತು
ನಗರದ ಫೋರ್ಟ್ ರಸ್ತೆಯಲ್ಲಿರುವ ಪೀಪಲಕಟ್ಟಾ ಬಳಿ ಸೇರಿದ ಸಾವಿರಾರು ಜನ ಮುಸ್ಲೀಂ ಬಾಂಧವರು ಬರ್ಮಾ ದೇಶದಲ್ಲಿ ಮುಸ್ಲೀಂ ಸಮುದಾಯದ ನರಮೇಧ ನಡೆಯುತ್ತಿದೆ ಅಲ್ಲಿಯ ಜನ ಹಾದಿ ಬೀದಿಯಲ್ಲಿ ಮುಸ್ಲೀಂ ಸಮುದಾಯದ ಮಕ್ಕಳನ್ನು ವೃದ್ಧರನ್ನು ಅಮಾನವೀಯ ವಾಗಿ ಕೊಲ್ಲ ಲಾಗುತ್ತಿದೆ ವಿಶ್ವಸಂಸ್ಥೆ ಕೂಡಲೇ ಭರ್ಮಾ ದೇಶದ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮುಸ್ಲೀಂ ಸಮುದಾಯದ ಮುಖಂಡರು ಒತ್ತಾಯಿಸಿದರು
ಪೀಪಲಕಟ್ಟಾ ಬಳಿ ಸಮಾವೇಶಗೊಂಡ ಸಾವಿರಾರು ಜನ ಮುಸ್ಲೀಂ ಬಾಂಧವರು ಮೌನ ಮೆರವಣಿಗೆ ನಡೆಸಿದರು ಈ ಮೆರವಣಿಗೆ ಫೋರ್ಟ್ ರಸ್ತೆ,ಕೇಂದ್ರ ಬಸ್ ನಿಲ್ಧಾಣ, ರಾಯಣ್ಣ ವೃತ್ತದ ಮೂಲಕ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು
ಜಿಲ್ಲಾಧಿಕಾರಿ ಕಚೇರಿಯ ಮುಂದೆ ಸಾವಿರಾರು ಮುಸ್ಲಿಂ ಭಾಂದವರಿಂದ ಪ್ರತಿಭಟನೆ ನಡೆಯಿತು ಜಿಲ್ಲಾಧಿಕಾರಿಗಳ ಕಚೇರಿ ಒಳಗೆ ಪ್ರವೇಶ ನೀಡುವಂತೆ ಪ್ರತಿಭಟನಾ ಕಾರರ ಪಟ್ಟುಹಿಡಿದಾಗ ಈ ಸಂಧರ್ಭದಲ್ಲಿ
ನೂಕು ನುಗ್ಗಲು ಉಂಟಾಯಿತು ಪರಿಸ್ಥಿತಿ
ಶಾಂತಗೊಳಿಸಲು ಪೊಲಿಸರು ಹರ ಸಾಹಸ ಪಟ್ಟರು
ಮುಸ್ಲೀಂ ಸಮಾಜದ ಮೌಲ್ವಿಗಳು ಮತ್ತು ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು
ಧರ್ಮಗುರು ಇನಾಮದಾರ ಮುಫ್ತೀ ಮಂಜೂರ ಆಲಂ, ಅಜೀಂ ಪಟವೇಗಾರ, ಮತೀನ ಅಲಿ ಶೇಖ ಬಾಬಾಜಾನ ಮತವಾಲೆ ಮುಜಮ್ಮಿಲ್ ಡೋಣಿ ಸೇರಿದಂತೆ ಸಾವಿರಾರು ಜನ ಮುಸ್ಲೀಂ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು