ಬೆಳಗಾವಿ-
ದೆಶದ ಅತಿ ಎತ್ತರದ ರಾಷ್ಟ್ರಧ್ವಜಕ್ಕೆ ಪಾಲಿಕೆ ಅಧಿಕಾರಿಗಳಿಂದಲೇ ಅವಮಾನ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಕಳೆದ ಮಾರ್ಚ12 ರಂದು ನಗರದ ಕಿಲ್ಲಾ ಕೆರೆಯ ದಂಡೆಯ ಮೇಲೆ ದೇಶದ ಅತಿ ಎತ್ತರದ ರಾಷ್ಟ್ರದ್ವಜವನ್ನು ಸುಮಾರು 1.62ಕೋಟಿ ವೆಚ್ಚದಲ್ಲಿ ಹಿಂದಿನ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಪಿರೋಜ್ ಸೇಠ್ ಅದ್ಯಕ್ಷತೆಯಲ್ಲಿ ಇದನ್ನ ನಿರ್ಮಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿ ಉದ್ಘಾಟನೆ ಮಾಡಿದ್ದರು. 109 ಮೀಟರ್ ದ್ವಜಸ್ಥಂಭ ಇದ್ರೇ 80ಅಡಿ ಅಗಲ 120ಅಡಿ ಉದ್ದದ ಧ್ವಜ ಹಾರಾಡುವ ವ್ಯವಸ್ಥೆ ಇದೆ. ಜೋರಾದ ಗಾಳಿ ಮಳೆಗೆ ಧ್ವಜ ಹಾಳಾಗುತ್ತಿದ್ದು ಇಲ್ಲಿ ವರೆಗೂ ಮೂರು ಧ್ವಜಗಳನ್ನ ಬದಲು ಮಾಡಿದ್ದಾರೆ. ಆದರೆ ಈ ರೀತಿ ಬದಲು ಮಾಡಿರುವ ಧ್ವಜಗಳಿಗೆ ಸದ್ಯ ಪಾಲಿಕೆ ಅಧಿಕಾರಿಗಳು ಅಪಮಾನ ಮಾಡಿದ್ದಾರೆ. ದ್ವಜವನ್ನ ಮಳೆಗೆ ನೆನೆಯದ ಹಾಗೆ ಭದ್ರವಾಗಿಡಬೇಕು ಆದರೆ ಪಾಲಿಕೆಯ ಅದಿಕಾರಿಗಳ ನಿರ್ಲಕ್ಷದಿಂದ ರಾಷ್ಟ್ರ ದ್ವಜವನ್ನು ನೆಲದ ಮೆಲೆಯೇ ನೀರು ಹೋಗುವ ಕಾಲುವೆಯಲ್ಲಿ ಡ್ರಮ್ ವೊಂದರಲ್ಲಿ ಇಟ್ಟಿದ್ದಾರೆ
.ದ್ವಜವನ್ನ ಎಲ್ಲಿ ಬೆಕಂದರಲ್ಲಿ ಇಟ್ಟು ಅಪಮಾನ ಮಾಡಿದ್ದಾರೆ. ಇದೆನಾ ಅದಿಕಾರಿಗಳು ರಾಷ್ಟ್ರದ್ವಜಕ್ಕೆ ಕೊಡುವ ಗೌರವ. ಹೀಗಾಗಿ ಕೂಡಲೇ ಮೇಲಾಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಸಿಬ್ಬಂದಿಗಳ ಮೆಲೆ ಕೂಡಲೇ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಜನಸಾಮಾನ್ಯರು ಆಗ್ರಹಿಸಿದ್ದಾರೆ…