ಚಿಕ್ಕೋಡಿ: ಪಾಕಿಸ್ತಾನ ದೇಶದ ಕರೆನ್ಸಿ ಸಿಕ್ಕಿದರಿಂದ ಕರೋಶಿ ಗ್ರಾಮದಲ್ಲಿ ಸಂಚಲನ ಮೂಡಿಸಿದೆ. ಈ ಕುರಿತು ಚಿಕ್ಕೋಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮವು 12ರಿಂದ 14 ಸಾವಿರ ಜನಸಂಖ್ಯೆ ಹೊಂದಿದ ಗ್ರಾಮ, ಇದು ಎಲ್ಲಾ ಜಾತಿ, ಧರ್ಮದ ಜನರು ವಾಸಿಸುವ ಗ್ರಾಮವಾಗಿದೆ. ಇಲ್ಲಿನ ಧಾರ್ಮಿಕ ಕೇಂದ್ರಗಳಿಗೆ ದೇಶದ ನಾನಾ ಭಾಗದಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಒಂದಲ್ಲ ಒಂದು ಕಾರಣದಿಂದ ಸುದ್ದಿಯಲಿ ಕರೋಶಿ ಗ್ರಾಮವು ಇರುತ್ತೆ ಇವಾಗ ಪಾಕಿಸ್ತಾನದ ಕರೆನ್ಸಿ ಸಿಕ್ಕಿದೆ ಗ್ರಾಮದಲಿ ಸಂಚಲನ ಮೂಡಸಿದೆ.
ಈ ಕುರಿತು ಹೆಚ್ಚಿನ ಮಾಹಿತಿ ಏನೆಂದರೆ ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಕರೋಶಿ ಬಸ್ ನಿಲ್ದಾಣದ ರಸ್ತೆಯಲ್ಲಿ ಯುವಕನಿಗೆ ನೋಟು ಬಿದ್ದಿರುವುದು ಕಂಡು ಬಂದಿದೆ. ಸದರಿ ನೋಟು ಪಾಕಿಸ್ತಾನಿ ದೇಶದ ಇದು, ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಭಾವಚಿತ್ರವನ್ನು ಹೊಂದಿದೆ. ಅದೇ ರೀತಿ ನೋಟಿನಮೇಲೆ ಆಂಗ್ಲ್ ಭಾಷೆಯಲ್ಲಿ ಸ್ಟೇಟ ಬ್ಯಾಂಕ್ ಆಫ ಇಂಡಿಯಾ ಹಾಗೂ ಉರ್ದು ಭಾಷೆಯಲ್ಲಿ ಅನ್ಯ ಮಾಹಿತಿ ಮುದ್ರಿಸಲಾಗಿದೆ. ಈ ನೋಟು 10 ರೂಪಾಯದ ಇದು, ಇದನ್ನು ನೋಡಿದ ಯುವಕನಿಗೆ ಪಾಕಿಸ್ತಾನವೇ ದೇಶದ ಕರೆನ್ಸಿ ಎಂದು ಅರಿವಾಯಿತು.
ಇದರಿಂದ ಯುವಕವು ಇಂದು ಚಿಕ್ಕೋಡಿ ಠಾಣೆಗೆ ಆಗಮಿಸಿ ಪಿಎಸ್ ಐ ಯಮನಪ್ಪ ಮಾಂಗ ಅವರಿಗೆ ಮಾಹಿತಿ ನೀಡಿದ್ದಾರೆ.
ಚಿಕ್ಕೋಡಿ ಪೊಲೀಸರು ಮತ್ತು ಗುಪ್ತಚರ ಇಲಾಖೆ ಈ ಬಗ್ಗೆ ತನಿಖೆ ಆರಂಭಿಸಿದೆ. ಕರೋಶಿ ಗ್ರಾಮಕ್ಕೆ ಪಾಕಿಸ್ತಾನದಿಂದ ಯಾರಾದರೂ ಬಂದಿದ್ದಾರೆಯೇ? ನೋಟು ಎಲ್ಲಿಂದ ಬಂತು? ಯಾರೋ ತಂದರು. ಇದರ ಹಿಂದೆ ದೊಡ್ಡ ಜಾಲವೇ ಇದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಕರೋಶಿ ಗ್ರಾಮದಲ್ಲಿ ಪಾಕಿಸ್ತಾನಿ ನೋಟುಗಳು ಸಿಕ್ಕಿದು ಪೊಲೀಸ ಇಲಾಖೆ ಹಾಗೂ ನಾಗರಿಕರಲಿ ಸಂಚಲನ ಮೂಡಿಸಿದೆ.