ಬೆಳಗಾವಿ-ತಾಯಿ, ಎರಡು ವರ್ಷದ ಪುತ್ರನ ಜೊತೆಗೆ ನದಿಗೆ ಹಾರಿದ ಘಟನೆ,ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ.
ರುದ್ರವ್ವ ಬಸವರಾಜ್ ಬನ್ನೂರು (30) ಶಿವಲಿಂಗಪ್ಪ ಬನ್ನೂರ (2) ನದಿಗೆ ಹಾರಿದ ದುರ್ದೈವಿಗಳಾಗಿದ್ದಾರೆ.ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಪಕ್ಕದ ಮಲಪ್ರಭಾ ನದಿಗೆ ತಾಯಿ-ಮಗು ಹಾರಿದ್ದಾರೆ,ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ನದಿ ಪಕ್ಕ ಧರಿಸಿದ ಚಪ್ಪಳಿ ಬಿಟ್ಟು ಮಲಪ್ರಭಾ ನದಿಗೆ ಹಾರಿದ ತಾಯಿ-ಮಗು ಶೋಧ ಕಾರ್ಯಾಚರಣೆ ನಡೆದಿದೆ.
ತಾಯಿ-ಮಗು ನದಿಗೆ ಹಾರಿರುವುದನ್ನು ನೋಡಿದ ಪ್ರತ್ಯಕ್ಷ ದರ್ಶಿಯಿಂದ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ.ನದಿಯ ಪಕ್ಕದಲ್ಲಿರುವ ಚಪ್ಪಲಿ ನನ್ನ ಪತ್ನಿಯದ್ದು ಎಂದು ಗಂಡ ಬಸವರಾಜ್ ಖಚಿತಪಡಿಸಿದ್ದಾನೆ.
ಸ್ಥಳಕ್ಕೆ ರಾಮದುರ್ಗ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದಾರೆ.ತಾಯಿ-ಮಗುವಿಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ.ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪುತ್ರನ ಜೊತೆಗೆ ಇಡಗುಂಡಿಯ ತವರು ಮನೆಯಲ್ಲಿ ವಾಸವಿದ್ದ ರುದ್ರವ್ವ ಳನ್ಬು ಮನವೊಲಿಸಿ ರಾಮದುರ್ಗಗೆ ಕರೆತರಲಾಗಿತ್ತು.ಆಟೋ ಬಾಡಿಗೆ ಕೊಡಲು ಚಿಲ್ಲರೆ ತರಲು ಹೋದಾಗ ರುದ್ರವ್ವ ಪುತ್ರನ ಜೊತೆಗೆ ನದಿಗೆ ಹಾರಿದ್ದಾಳೆ ಎಂದು ತಿಳಿದು ಬಂದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ