ಬೆಳಗಾವಿ- ಕೆಲವು ತಿಂಗಳ ಹಿಂದೆ ಪಾರ್ಶವಾಯು ಹೊಡತದಿಂದ ಬಳಲುತ್ತಿದ್ದ ಯುವಕನೊಬ್ಬ ನೋವು ತಾಳಲಾರದೆ ತನ್ನ ಕಾಲನ್ನು ತಾನೇ ಕಟ್ ಮಾಡಿಕೊಂಡ ಘಟನೆ ಬೈಲಹೊಂಗಲ ತಾಲ್ಲೂಕಿನ ನಾವಲಗಟ್ಟಿ ಗ್ರಾಮದಲ್ಲಿ ನಡೆದಿದೆ.
ನಾವಲಗಟ್ಟಿ ಗ್ರಾಮದ ರಾಜು ಫಕೀರಪ್ಪ ಯರಗುದ್ದಿ (24) ಎಂಬಾತ ಮನೆಯಲ್ಲಿ ಯಾರು ಇಲ್ಲದಿರುವಾಗ,ಕಬ್ಬು ಕಡೆಯುವ ಕೊಯಿತಾ ದಿಂದ ತನ್ನ ಕಾಲನ್ನು ಕಟ್ ಮಾಡಿಕೊಂಡಿದ್ದಾನೆ.ಕಾಲಿನ ಪಾದ ಕಾಲಿನಿಂದ ಬೇರ್ಪಟ್ಟಿದ್ದು,ಗ್ರಾಮಸ್ಥರು ಗಾಯಾಳು ವ್ಯಕ್ತಿಯನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ .
ರಾಜು ಫಕೀರಪ್ಪ ಯರಗುದ್ದಿ ಎಂಬಾತ ಹಲವಾರು ತಿಂಗಳುಗಳಿಂದ ಪಾರ್ಶವಾಯುವಿನಿಂದ ಬಳಲುತ್ತಿದ್ದ ಒಂದು ಕಾಲು ನಿಷ್ಕ್ರಿಯವಾಗಿತ್ತು, ಆ ಕಾಲಿನಲ್ಲಿ ನೋವು ಇತ್ತು ನೋವು ತಾಳಲಾರದೆ ಇಂದು ಬೆಳಗ್ಗೆ ತನ್ನ ಮನೆಯಲ್ಲಿ ಕಾಲು ಕಟ್ ಮಾಡಿಕೊಂಡಿದ್ದಾನೆ. ಈ ವಿಷಯ ಗೊತ್ತಾಗುತ್ತಿದ್ದಂತೆಯೇ ಗ್ರಾಮಸ್ಥರು ಸೇರಿ ಆತನನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಬೆಳಗಾವಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಕಟ್ ಆಗಿರುವ ಪಾದವನ್ನು ಜೋಡಿಸುವ ಪ್ರಯತ್ನ ನಡೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ