ಬೆಳಗಾವಿ-ಕರ್ನಾಟಕ-ಮಹಾರಾಷ್ಟ್ರ ಗಡಿಗೆ ಭೇಟಿ ನೀಡಿದ ADGP ಅಲೋಕ್ ಕುಮಾರ,ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಚೆಕ್ ಪೋಸ್ಟ್ ನಲ್ಲಿ ಮಹಾರಾಷ್ಟ್ರದ ಬಸ್ ಚಾಲಕರಿಗೆ,ಮತ್ತು ಪ್ರಯಾಣಿಕರಿಗೆ ಗುಲಾಬಿ ನೀಡಿ ಸ್ವಾಗತಿಸಿದರು.
ನಾಳೆ ಸುಪ್ರೀಂ ಕೋರ್ಟ್ ನಲ್ಲಿ ಗಡಿ ಕುರಿತು ವಿಚಾರಣೆ ಹಿನ್ನಲೆ ಗಡಿಗೆ ಭೇಟಿ ನೀಡಿದ ಅವರು,ಮಹಾರಾಷ್ಟ್ರ ಸಾರಿಗೆ ಇಲಾಖೆ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಗುಲಾಬಿ ನೀಡಿದ್ರು,ಗುಲಾಬಿ ಹೂ ನೀಡಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಮಧ್ಯೆ ಬಾಂಧವ್ಯ ಇರಬೇಕು ಅಂದ್ರು.
ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಪ್ರಯಾಣಿಕರ ಗುಲಾಬಿ ಹೂ ನೀಡಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ ಮಾಡಿದ,ಅಲೋಕ್ ಕುಮಾರಗೆ ಬೆಳಗಾವಿ IG, SP ಹಾಗೂ ಸ್ಥಳೀಯ ಪೊಲೀಸರು ಸಾಥ ನೀಡಿದ್ರು.
ಬೆಳಗಾವಿ ಗಡಿಯಲ್ಲಿ ಮಹತ್ವದ ಸಭೆ
ಗಡಿ ವಿಚಾರವಾಗಿ ಉನ್ನತ ಮಟ್ಟದ ಪೊಲೀಸ ಅಧಿಕಾರಿಗಳ ಸಭೆ,ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಸರ್ಕ್ಯೂಟ್ ಹೌಸ್ ನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ನಡೆಯಿತು.
ಸಭೆ ಬಳಿಕ ಎಡಿಜಿಪಿ ಅಲೋಕ್ ಕುಮಾರ್ ಸುದ್ಧಿಗೋಷ್ಠಿ,ನಡೆಸಿದ್ರು,ಕಳೆದ ವಾರ ಕರ್ನಾಟಕದ ಬಸ್ ಗಳ ಮೇಲೆ ಕಲ್ಲು ತೂರಿ ಮಸಿ ಬಳದಿದ್ರೂ, ಮೂರು ಪ್ರಕರಣ ಮಹಾರಾಷ್ಟ್ರದಲ್ಲಿ ಆಗಿತ್ತು,ಮುಂದೆ ಈ ರೀತಿ ಆಗಬಾರದು ಮತ್ತು ನಾಳೆ ಗಡಿ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ಬರಲಿದ್ದು ಈ ಕಾರಣಕ್ಕೆ ಸಭೆ ನಡೆಸಿದ್ದೆವೆ,ನಾಳೆ ತೀರ್ಪು ಬಂದ್ರೇ ಮತ್ತೆ ಎನೂ ಗಲಾಟೆ ಆಗಬಾರದು ಅನ್ನೋ ಕಾರಣಕ್ಕೆ ಸಭೆ ಮಾಡಿದ್ದೇವೆ ಎಂದು ಅಲೋಕ ಕುಮಾರ್ ಹೇಳಿದ್ರು.
ಮೂರು ಕಡೆಗಳಲ್ಲಿ ಮಹಾರಾಷ್ಟ್ರ, ಕರ್ನಾಟಕ ಜಂಟಿ ಚೆಕ್ ಪೋಸ್ಟ್ ಮಾಡಿದ್ದೇವೆ,ಬೆಳಗಾವಿ ಗಡಿಯಲ್ಲಿ ಒಟ್ಟು 21 ಚೆಕ್ ಪೋಸ್ಟ್ ಗಳ ನಿರ್ಮಾಣ ಮಾಡಿ ಭದ್ರತೆ ಕೊಟ್ಟಿದ್ದೇವೆ.
ನಾಲ್ಕನೂರಕ್ಕೂ ಅಧಿಕ ಕರ್ನಾಟಕ ಬಸ್‌ಗಳು, ಮಹಾರಾಷ್ಟ್ರದಿಂದ 176ಬಸ್ ಗಳು ರಾಜ್ಯಕ್ಕೆ ಬರ್ತವೆ,ಅಲ್ಲಿ ನಮ್ಮ ವಾಹನಗಳಿಗೆ, ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಚರ್ಚೆ ಮಾಡಿದ್ದೇವೆ.ಅಧಿವೇಶನ ಸೂಸುತ್ರವಾಗಿ ನಡೆಯಬೇಕು, ಚುನಾವಣೆ ವರ್ಷ ಇದೆ ಕಿಡಗೇಡಿಗಳನ್ನ ಕೆಲವರು ದುರಪಯೋಗ ತೆಗೆದುಕೊಳ್ಳಬಾರದು,ಎಂದು ಅಲೋಕ ಕುಮಾರ್ ಹೇಳಿದ್ರು.
*ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಆಗಮಿಸುತ್ತಿರುವ ವಿಚಾರ,ಯಾವ ಚಟುವಟಿಕೆಯಿಂದ ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಅದಕ್ಕೆ ಅವಕಾಶ ಕೊಡುವುದಿಲ್ಲ,ಖಾಸಗಿ ಕಾರ್ಯಕ್ರಮಗಳಿಗೆ ಬಂದ್ರೇ ನಮ್ಮ ಅಭ್ಯಂತ್ರ ಇಲ್ಲ,21 ಚೆಕ್ ಪೋಸ್ಟ್ ಬೆಳಗಾವಿಯಲ್ಲಿ ಇದೆ, ಗಡಿ ಭಾಗದ ಎಲ್ಲ ಎಸ್‌ಪಿಗಳಿಗೆ ನಿರ್ದೇಶನ ನೀಡಿದ್ದೇವೆ,ನಮ್ಮ ಭಾಗದಲ್ಲಿ ಇಂದು ಸಂಜೆಯಿಂದ ಗಸ್ತು ನಡೆಯಲಿದೆ,ಸುಪ್ರೀಂ ತೀರ್ಪಿನ ಬಳಿಕ ಅವಶ್ಯಕತೆ ಬಿದ್ದರೆ ಹೆಚ್ಚಿನ ಪೋಲೀಸರನ್ನ ನಿಯೋಜನೆ ಮಾಡಲಾಗುವುದು.ಎಂದುನಿಪ್ಪಾಣಿಯಲ್ಲಿ ಅಲೋಕ್ ಕುಮಾರ ಹೇಳಿದರು.