ಬೆಳಗಾವಿ- ಹೈಕೋರ್ಟ್ ಆದೇಶವನ್ನು ವಿರೋಧಿಸಿ ಅನಧಿಕೃತವಾಗಿ ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಹಾರಾಡಿಸಲಾಗಿದೆ. ಧ್ವಜವನ್ನು ತೆರವುಗೊಳಿಸಬೇಕು ಎಂದು ಎಂಇಎಸ್ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದೆ.
ಪ್ರಚಾರಕ್ಕಾಗಿ ಕನ್ನಡ ಸಂಘಗಳು ಪಾಲಿಕೆ ಮುಂಭಾಗದಲ್ಲಿ ಧ್ವಜ ಹಾರಾಡುತ್ತಿದೆ. ಕಾನೂನು ಸುವ್ಯವಸ್ಥೆ ದಕ್ಕೆಯಾಗುತ್ತಿದೆ. ಧ್ವಜ ತೆರವುಗೊಳಿಸಬೇಕು. ಇಲ್ಲವೇ ಭಾಗವಾ ಧ್ವಜ ಹಾಕೋದಾಗಿ ಹೇಳಿತ್ತು. ಆದರೇ ಜಿಲ್ಲಾಢಳಿತ ಸೂಚನೆ ಮೇರೆಗೆ ಸುಮ್ಮನೆ ಇದ್ದೇವೆ ಎಂದು ಎಂಇಎಸ್ ಮುಖಂಡರು ಹೇಳಿದ್ದಾರೆ.
ಎಂಇಎಸ್ ಮುಖಂಡರು ಒನ್ ನೇಷನ್ ಒನ್ ಪ್ಲ್ಯಾಗ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ದೇಶ ಒಂದೇ ಅಂದ ಮೇಲೆ ಮಹಾರಾಷ್ಟ್ರ ಹೋಗೊ ಬೇಡಿಕೆ ಯಾಕೆ ಪದೇ ಪದೇ ಇಡುತ್ತಿದೆ. ಗಡಿ ವಿಚಾರ ಸುಪ್ರೀಂ ಕೋರ್ಟ್ ನಲ್ಲಿ ಇರೋವಾಗ ಯಾಕೆ ಬಹಿರಂಗ ಚರ್ಚೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ ವೇಳೆಬಶುಭಂ ಸುಲಾಕೆ, ಶ್ರೀಕಾಂತ್ ಕದಂ, ಧನಂಜಯ ಪಾಟೀಲ್ ಸೇರಿ ಅನೇಕ ಎಂಇಎಸ್ ಮುಖಂಡರು ಪಾಲ್ಗೊಂಡಿದ್ದರು.