Breaking News

ಬೆಳಗಾವಿ:ಮತದಾನಕ್ಕೆ ಬಂದಿದ್ದ ಮಹಿಳೆ ಸಾವು.

ಹಾಸನ/ಬೆಳಗಾವಿ :ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮತದಾನ ಮಾಡಿ ಪೋಲಿಂಗ್ ಬೂತ್‌ನಿಂದ ಹೊರಗೆ ಬಂದ ವ್ಯಕ್ತಿಯೊಬ್ಬ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಜಯಣ್ಣ (49) ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ಘಟನೆ ನಡೆದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾಜಕೀಯ ಪಕ್ಷಗಳ ಕಾರ್ಯಕರ್ತರೊಂದಿಗೆ ಒಡನಾಟ ಹೊಂದಿದ್ದ ಜಯಣ್ಣ, ಬೆಳಗ್ಗೆ ಖುಷಿಯಿಂದಲೇ ಮತಗಟ್ಟೆಗೆ ಹೋಗಿ ಮತದಾನ ಮಾಡಿ ಹೊರಬಂದಿದ್ದಾರೆ. ಹೊರ ಬಂದ ನಂತರ ಪೋಲಿಂಗ್‌ ಬೂತ್‌ನ ಹೊರಗಡೆ ಸುಸ್ತಾಗುತ್ತಿದೆ ಎಂದು ಎದೆ ಹಿಡಿದು ಕುಳಿತು ಕೊಂಡವರು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಜಯಣ್ಣನಿಗೆ ಹೃದಯಾಘಾತ ಆಗಿದ್ದರಿಂದಲೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ, ಮತದಾನ 100 ಮೀಟರ್‌ ವ್ಯಾಪ್ತಿಯೊಳಗೆ ಸಾವು ಸಂಭವಿಸಿದ್ದರಿಂದ ಕೆಲ ಹೊತ್ತು ಮತದಾನ ಪ್ರಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗಿತ್ತು. ಕೂಡಲೇ ಆಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಬದುಕಿ ಉಳಿಯಲಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಚಿಕ್ಕೋಲೆ ಗ್ರಾಮದಲ್ಲಿ ಹಕ್ಕು ಚಲಾಯಿಸಿ ಹೊರಗೆ ಬಂದ ವೇಳೆ ಹೃದಯಾಘಾತ ಆಗಿದ್ದರಿಂದ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿತ್ತು.

ಮತ ಚಲಾವಣೆಗೆ ಬಂದಿದ್ದ ಮಹಿಳೆ ಸಾವು:
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯರಝರವಿ ಗ್ರಾಮದಲ್ಲಿ ಮತ ಚಲಾಯಿಸಲು ಬಂದಿದ್ದ ಮಹಿಳೆಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು ಪಾರವ್ವ ಈಶ್ವರ ಸಿದ್ನಾಳ (ಪನದಿ) (68) ಎಂದು ಗುರುತಿಸಲಾಗಿದೆ.

ಪಾರವ್ವ ತಮ್ಮ‌ ಮತದಾನದ ಹಕ್ಕು ಚಲಾಯಿಸಲು ಬಂದಿದ್ದರು. ಆದರೆ, ಮತದಾನಕ್ಕೂ ಮುನ್ನ, ಮತಗಟ್ಟೆ ಆವರಣದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮತಗಟ್ಟೆಯ ಬಳಿಯೇ ಮಹಿಳೆ ಮೃತಪಟ್ಟಿದ್ದರಿಂದ ಕೆಲ ಹೊತ್ತು ಮತದಾನ ಪ್ರಕ್ರಿಯೆಯಲ್ಲಿ ಗೊಂದಲ ಸೃಷ್ಟಿಯಾಗಿತ್ತು.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *