ಬೆಳಗಾವಿ -ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಹಿನ್ನಲೆಯಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಕಾಂಗ್ರೆಸ್ ಪಕಗಷದ ನೂತನ ಶಾಸಕರು ತೆರಳಿದ್ದಾರೆ.
ಲಕ್ಷ್ಮಣ ಸವದಿ, ಲಕ್ಷ್ಮಿ ಹೆಬ್ಬಾಳ್ಕರ್, ಆಸೀಫ್ ಸೇಠ್, ರಾಜು ಕಾಗೆ, ಮಹೇಂದ್ರ ತಮ್ಮಣ್ಣವರ ಇಂದು ಬೆಳಗ್ಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ ಕೈ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ನಿನ್ನೆಯೇ ಬೆಂಗಳೂರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರಯಾಣ ಬೆಳೆಸಿದ್ದರು.
ಇಂದು ಇನ್ನುಳಿದ ಕೈ ಶಾಸಕರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 11 ರಲ್ಲಿ ಕಾಂಗ್ರೆಸ್ ಗೆದ್ದಿರುವುದು ವಿಶೇಷ.
ರಮೇಶ್ ಜಾರಕಿಹೊಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಟಕ್ಕರ್
ಬೆಳಗಾವಿ ಗ್ರಾಮೀಣ ಕ್ಷೇತ್ರ ಸೋತ್ರೆ ನಮಗೆ ಅಪಮಾನ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಪ್ರತಿಕ್ರಿಯೆ ನೀಡಿದ್ದಾರೆ.
ನನಗೆ ನನ್ನ ಜನ ಸನ್ಮಾನ ಮಾಡಿದ್ದಾರೆ.ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಟಕ್ಕರ್ ಕೊಟ್ಟಿದ್ದಾರೆ.ಹೈಕಮಾಂಡ್ ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸಿಎಲ್ ಪಿ ನಾಯಕ ಸಿದ್ದರಾಮಯ್ಯರಿಗೆ ಭಾಷೆ ಕೊಟ್ಟಿದ್ವಿ ,ಎಂದುಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ನಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಜಿಲ್ಲೆಯ ಎಲ್ಲ ನಾಯಕರು ಸಾಮೂಹಿಕ ನಾಯಕತ್ವದಲ್ಲಿ ಸತೀಶ್ ಜಾರಕಿಹೊಳಿ ನಾಯಕತ್ವದಲ್ಲಿ 12 ಕ್ಷೇತ್ರಗಳಲ್ಲಿ ಗೆಲ್ಲೋದಾಗಿ ಹೇಳಿದ್ವಿಬೆಳಗಾವಿ ಜಿಲ್ಲೆಯ 11 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದೇವೆ.ಬೆಳಗಾವಿ ಜಿಲ್ಲಾ ರಾಜಕಾರಣ ಇತಿಹಾಸದಲ್ಲಿ ಇಷ್ಟೊಂದು ಸೀಟ್ ಬಂದಿರಲಿಲ್ಲ.ಬಹಳ ಧೈರ್ಯದಿಂದ ಸಿಎಲ್ ಪಿ ಸಭೆಯಲ್ಲಿ ಮುಖ ಎತ್ತಿ ಮಾತನಾಡುವ ಧೈರ್ಯ ಇಟ್ಟು ಹೋಗುತ್ತಿದ್ದೇವೆ.135ರಲ್ಲಿ ಬೆಳಗಾವಿ ಜಿಲ್ಲೆಯೊಂದರಿಂದಲೇ 11 ಜನ ಹೋಗುತ್ತಿರೋದು ಸ್ವಾಭಿಮಾನ ಪ್ರತೀಕ ಎಂದಿದ್ದಾರೆ.
ಖುಷಿಯಿಂದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹೋಗುತ್ತಿದ್ದೇನೆಕಾಂಗ್ರೆಸ್ ಪಕ್ಷದ ಒಗ್ಗಟ್ಟು, ಜಿಲ್ಲೆಯ ನೇತೃತ್ವ ಗೆಲುವಿಗೆ ಪ್ರಮುಖ ಕಾರಣ.ನಿನ್ನೆ ಸತೀಶ್ ಜಾರಕಿಹೊಳಿ ಹೋಗಿದ್ದಾರೆ ಇಂದು ಐದಾರು ಶಾಸಕರು ಹೋಗುತ್ತಿದ್ದೇವೆ.ಸಿಎಂ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ.ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಸಚಿವ ಸ್ಥಾನ ಸಿಗುತ್ತಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,ಬೆಳಗಾವಿ ದೊಡ್ಡ ಜಿಲ್ಲೆ ಎರಡನೇ ರಾಜಧಾನಿ ಹೇಳ್ತೀವಿ.ಬೆಳಗಾವಿ ಯಾವತ್ತಿದ್ದರೂ ಪವರ್ ಸೆಂಟರ್ ಇದೆ,ಖಂಡಿತವಾಗಿ ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಸ್ಥಾನ ಸಿಗುತ್ತೆ ಎಂದು ಲಕ್ಷ್ಮೀ ಹೆಬ್ಬಾಳಕರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲಕ್ಷ್ಮೀ ಅಕ್ಕಾ ಮಂತ್ರಿ ಪಕ್ಕಾ ಎಂದು ಅಭಿಮಾನಿಗಳ ಅಭಿಯಾನ ವಿಚಾರ,ನನ್ನ ಅಭಿಮಾನಿಗಳಿಗೆ ದೊಡ್ಡ ಅಭಿಮಾನ ಅವರಿಗೆ ಧನ್ಯವಾದ ಹೇಳುವೆ.ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತೋ ಕೊಟ್ಟ ಜವಾಬ್ದಾರಿ ನಿಭಾಯಿಸುತ್ತೇನೆ.ನಾನು ಅದರ ಬಗ್ಗೆ ಏನು ಮಾತನಾಡಲ್ಲ.
135 ಜನ ಗೆದ್ದಿದ್ದೇವೆ ಕರ್ನಾಟಕದ ಮಹಾಜನತೆ ಆಶೀರ್ವಾದ ಮಾಡಿದ್ದಾರೆ.ಅಧಿಕಾರದ ಆಸೆಗೆ ನೋ ಬಾರ್ಗೇನಿಂಗ್,ಎಂದ ಹೆಬ್ಬಾಳಕರ,ರಾಜ್ಯದ ಜನರಿಗೆ ಕೊಟ್ಟ ಐದು ಭರವಸೆ ಈಡೇರಿಸುವುದು ನಮ್ಮೆಲ್ಲರ ಲಕ್ಷ್ಯ ಹೊರತಾಗಿ ಅಧಿಕಾರದ ಆಸೆ ಇಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ- ಲಕ್ಷ್ಮಣ ಸವದಿ.
ಬಿಜೆಪಿ ಭದ್ರಕೋಟೆ ಬೆಳಗಾವಿಯಲ್ಲಿ ಕಾಂಗ್ರೆಸ್ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.ಇಡೀ ರಾಜ್ಯದಲ್ಲಿ ಜನ ಕಾಂಗ್ರೆಸ್ ಪರ ಆಶೀರ್ವಾದ ಮಾಡಿದ್ದಾರೆ ಎಂದು,ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ನಲ್ಲಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಸ್ವಂತ ಬಲದ ಮೇಲೆ ಸರ್ಕಾರ ರಚನೆ ಆಗುತ್ತಿದೆ.
ಮುಂದಿನ ಐದು ವರ್ಷ ಒಳ್ಳೆಯ ಕೆಲಸ ಮಾಡುವ ಹಂಬಲದಿಂದ ಅನೇಕ ಶಾಸಕರು ಆಯ್ಕೆಯಾಗಿದ್ದಾರೆ.
ಜನರ ಪ್ರೀತಿ ಗಳಿಸಿ ಅವರ ವಿಶ್ವಾಸ ಉಳಿಸುವ ಕೆಲಸ ಮಾಡ್ತೀವಿ.ಎಲ್ಲಾ ಜಿಲ್ಲೆಗಳಲ್ಲೂ ಕಾಂಗ್ರೆಸ್ ಶಾಸಕರು ಆರಿಸಿ ಬಂದಿದ್ದಾರೆ.ಸರ್ಕಾರ ರಚನೆಗೆ ಎಲ್ಲರದ್ದೂ ಪಾಲು ಇರುತ್ತೆ, ಬೆಳಗಾವಿಯದ್ದು ಏನು ವಿಶೇಷ ಇರಲ್ಲ.ಬೆಳಗಾವಿ ಜಿಲ್ಲೆಯಲ್ಲಿ ಹಿಂದಿನಿಗಿಂತ ಹೆಚ್ಚಿನ ಆಶೀರ್ವಾದ ಮಾಡಿದ್ದಾರೆ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.
ಕುಡಚಿ, ಕಾಗವಾಡದಲ್ಲಿ ಕಾಂಗ್ರೆಸ್ ಗೆಲುವು ವಿಚಾರ,
ಚುನಾವಣಾ ಸಂದರ್ಭದಲ್ಲಿ ಜನರಿಗೆ ವಿಶ್ವಾಸ ಬರುವ ಮಾತು ಹೇಳಬೇಕು,ಆ ಮಾತಿನಿಂದ ಜನ ಆಶೀರ್ವಾದ ಮಾಡಿದ್ದಾರೆ ಅವರಿಬ್ಬರನ್ನು ಗೆಲ್ಲಿಸುವ ಕೆಲಸ ಮಾಡಿದ್ದಾರೆ.
ಯಾರು ಸಿಎಂ ಆಗ್ತಾರೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,ರಾಷ್ಟ್ರೀಯ ಪಕ್ಷದಲ್ಲಿ ಶಾಸಕಾಂಗ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ ತೀರ್ಮಾನ ಮಾಡುತ್ತೆ.ಅದು ಒಬ್ಬಿಬ್ಬರ ಅಭಿಪ್ರಾಯ ಅಲ್ಲ, 135 ಜನರ ಅಭಿಪ್ರಾಯ ಸಂಗ್ರಹ ಮಾಡ್ತಾರೆ.ವರದಿ ಒಪ್ಪಿಸಿದ ಮೇಲೆ ಹೈಕಮಾಂಡ್ ತೀರ್ಮಾನ ಮಾಡುತ್ತೆ.ಎಂದು ಸವದಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಮಂತ್ರಿ ಸ್ಥಾನ ಸಿಗುತ್ತಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸವದಿ,ಶಾಸಕರಾದ ಮೇಲೆ ಮಂತ್ರಿ ಆಗಬೇಕು, ಡಿಸಿಎಂ ಆಗಬೇಕು, ಸಿಎಂ ಆಗಬೇಕು ಅಂತಾ ಇರುತ್ತೆ,ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ.ಪಕ್ಷ ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿರುತ್ತೆವೆ.
ನಾನೇನು ಬ್ರಹ್ಮನೂ ಅಲ್ಲ, ಬೇರೆಯವರ ರೀತಿ ನಾನು ದೊಡ್ಡ ನಾಯಕನೂ ಅಲ್ಲ.ಪ್ರಚಾರ ವೇಳೆ ಲಕ್ಷ್ಮಣ್ ಸವದಿಗೆ ಕಬ್ಬು ಹೇರಲು ಕಲಿಸೋಣ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರ,ಆಧುನಿಕ ಯುಗದಲ್ಲಿ ಕಬ್ಬು ಕಡಿಯುವ ಜನರು ಕಡಿಮೆ ಆಗಿದ್ದು ಮಷಿನ್ ಬಂದಿದೆ.
ನಿನ್ನೆ ಅಭಿನಂದನೆ ಸಮಾರಂಭದಲ್ಲಿ ಕಬ್ಬು ಕಡಿಯುವ ಮಷಿನ್ ತಂದು ಪೂಜೆ ಮಾಡಿಸಿದ್ರು.
ಅದರ ಬಗ್ಗೆ ಚರ್ಚೆ ಮಾಡೋದು ಅನವಶ್ಯಕ ಎಂದಕು ಲಕ್ಷ್ಮಣ್ ಸವದಿ ಹೇಳಿದ್ದಾರೆಸವದಿಯನ್ನ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದಿಂದ ಕೆಳಗಿಳಿಸುತ್ತೇವೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರ,
ಅವರಿಗೆ ಬೇಕಾದ್ದನ್ನ ಅವರು ಮಾಡಲಿ, ನಮಗೆ ಸರಿ ಅನ್ನಿಸಿದ್ದನ್ನು ನಾವು ಮಾಡ್ತೀವಿ.ಎಂದು ಸವದಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಸೋಲು ವಿಚಾರ,
ಬಿಜೆಪಿಯವರು ಸಂಘಟಿತರಾಗಿ ಕೆಲಸ ಮಾಡಿದ್ದು ಒಂದಿರಬಹುದು,ಅದರ ಜೊತೆ ಬಹಳ ದುಡ್ಡಿನ ಪ್ರಭಾವ ಅಲ್ಲಿ ಬೀರಿತು.ಅಲ್ಲಿ ದುಡ್ಡಿನ ಹೊಳೆ ಹರಿಸಿದ್ದರಿಂದ ಸೋಲಾಗಿದೆ, ನಮಗೆ ಖೇದ ಆಗಿದೆ.
ಹಿರಿಯ ರಾಜಕಾರಣಿ ಆರಿಸಿ ಬರಬೇಕು ಎಂಬ ಆಸೆ ಇತ್ತು ನಮಗೂ ನೋವು ಇದೆ.ಲಿಂಗಾಯತ ಸಮುದಾಯ ಕಾಂಗ್ರೆಸ್ ಪರ ವಾಲಿದ್ದಾರಾ ಎಂದು ಮಾಧ್ಯಮಗಳ ಪ್ರಶ್ನೆ,
ಬಿಜೆಪಿ ನಡವಳಿಕೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಈ ಕಡೆ ವಾಲಿದ್ದು ಮೇಲ್ನೋಟಕ್ಕೆ ಕಾಣುತ್ತೆ ಎಂದು ಸವದಿ ಹೇಳಿದ್ದಾರೆ.