ಬೆಳಗಾವಿ- ಇಂದು ಭಾನುವಾರ ಬೆಳಗಾವಿ ಜಿಲ್ಲೆಯ ಜನ ಸಂಡೇ ಮೂಡ್ ನಲ್ಲಿರುವಾಗಲೇ ರಾಜ್ಯದ ಹೆಲ್ತ ಬುಲಿಟೀನ್ ದೊಡ್ಡ ಆಘಾತವೇ ನೀಡಿದೆ .ಇಂದು ಬಿಡುಗಡೆಯಾದ ಮಿಡ್ ಡೇ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಅಜ್ಮೇರದಿಂದ ಬೆಳಗಾವಿಗೆ ಮರಳಿಬಂದ 22 ಜನರಿಗೆ ಕೊರೋನಾ ಸೊಂಕು ಇರುವದು ದೃಡವಾಗಿದೆ
ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ನೂರರ ಗಡಿ ದಾಟಿ 107 ಕ್ಕೇ ಏರಿದೆ ಕೊರೋನಾ ವೈರಸ್ ಇಂದು ಬೆಳಗಾವಿ ಜಿಲ್ಲೆಯಲ್ಲಿ ಮಹಾ ದಾಳಿ ನಡೆಸಿದ್ದು ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ .
ಇಂದಿನ ಹೆಲ್ತ್ ಬುಲಿಟೀನ್ ನಲ್ಲಿ 22 ಸೊಂಕಿತರು ಪತ್ತೆಯಾಗಿದ್ದು ಇವರೆಲ್ಲರೂ ಹುಕ್ಕೇರಿ,ನಿಪ್ಪಾಣಿ,ಚಿಕ್ಕೋಡಿ ಭಾಗದವರು ಎಂದು ತಿಳಿದು ಬಂದಿದೆ
ತಬ್ಲೀಗ್ ಜಮಾತಿನ ನಂಟಿನ ಬಳಿಕ ಈಗ ಬೆಳಗಾವಿ ಜಿಲ್ಲೆಗೆ ಅಜ್ಮೇರ್ ರಿಟರ್ನ್ ನಂಟು ಶುರುವಾಗಿದೆ ಅಜ್ಮೇರ್ ದರ್ಗಾ ದರ್ಶನಕ್ಕೆ ಹೋಗಿದ್ದ ಬೆಳಗಾವಿ ಜಿಲ್ಲೆಯ ಜನರಿಗೆ ಕೊರೋನಾ ಸೊಂಕು ಇರುವದು ದೃಡವಾಗಿದೆ. ಕೆಲ ದಿನಗಳ ಹಿಂದೆ ಅಜ್ಮೇರದಿಂದ ಬೆಳಗಾವಿ ಗಡಿ ಪ್ರವೇಶ ಮಾಡಿದ ಇವರನ್ನು ತವನಿಧಿ ಘಾಟ್ ನಲ್ಲಿರುವ ಮುರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಅಜ್ಮೇರ್ ನಲ್ಲಿ ಇವರನ್ನು 40 ದಿನಗಳ ಕಾಲ ಇವರನ್ನು ಕ್ವಾರಂಟೈನ್ ಮಾಡಲಾಗಿತ್ತು ಬೆಳಗಾವಿ ಗಡಿ ಪ್ರವೇಶ ಮಾಡಿದ ತಕ್ಷಣ ಸ್ವತಹ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರು ಖುದ್ದಾಗಿ ನಿಪ್ಪಾಣಿ ಚೆಕ್ಕ್ ಪೋಸ್ಟ್ ಗೆ ತೆರಳಿ ಇವರನ್ನು ಕ್ವಾರಂಟೈನ್ ಮಾಡಿದ್ದರಿಂದ ಇವರು ಯಾರ ಸಂಪರ್ಕಕ್ಕೂ ಬಂದಿಲ್ಲ ಜಿಲ್ಲಾಧಿಕಾರಿಗಳ ವಿಶೇಷ ಕಾಳಜಿಯಿಂದಾಗಿ ಅನಾಹುತ ತಪ್ಪಿದೆ