Belagavi : ಸವದತ್ತಿ ಯಲ್ಲಮ್ಮನ. ದೇಗುಲದಲ್ಲಿ‌ ಧನಲಕ್ಷ್ಮೀಯ ಅವತಾರ…!!

ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ಶಕ್ತಿ ಯೋಜನೆ ಜಾರಿಯಿಂದ ಸರಕಾರ‌‌ ಹಾಗೂ ಮಹಿಳೆಯರಿಗೆ ಎಷ್ಟು ಪ್ರಯೋಜನ ಆಗಿದೆಯೋ ಗೊತ್ತಿಲ್ಲ. ಆದರೆ, ರಾಜ್ಯದ ದೇಗುಲಗಳಿಗೆ ಮಾತ್ರ ಶುಕ್ರದೆಸೆ ಆರಂಭವಾಗಿರುವುದಂತೂ ಸುಳ್ಳಲ್ಲ.

ಹೌದು, ಶಕ್ತಿ ಯೋಜನೆ ಜಾರಿಯ ಪರಿಣಾಮ ಮಹಿಳಾ ಪ್ರಯಾಣಿಕರ ಸಂಖ್ಯೆ ತೀವ್ರ ಹೆಚ್ಚಳಗೊಂಡಿದೆ. ರಾಜ್ಯದ ಪ್ರಸಿದ್ಧ ದೇವಸ್ಥಾನಗಳಿಗೆ ಭಕ್ತರು ಮುಗಿಬೀಳುತ್ತಿದ್ದಾರೆ. ಇದರಿಂದ ದೇವಸ್ಥಾನಗಳ ಆದಾಯ ತೀವ್ರಗತಿಯಲ್ಲಿ ಏರಿಕೆಯಾಗಿದೆ.

ಉತ್ತರ ಕರ್ನಾಟಕ ಭಾಗದ ಪ್ರಮುಖ ಅದರಲ್ಲೂ ಮಹಿಳೆಯರ ನೆಚ್ಚಿನ ದೇವಸ್ಥಾನ ಆಗಿರುವ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಮಹಿಳೆಯರ ದಂಡೇ ಹರಿದು ಬರುತ್ತಿದೆ. ಇದರ ಪರಿಣಾಮ ದೇಗುಲದ ಹುಂಡಿಗೆ ಎರಡು ‌ಪಟ್ಟು ಕಾಣಿಕೆ‌ ಸಂಗ್ರಹ ಏರಿಕೆಯಾಗಿದೆ.
ಮೇ17 ರಿಂದ ಜೂನ್ 30 ರ ಅವಧಿಯ 45 ದಿನಗಳಲ್ಲಿ 1,30,42,472 ರೂಪಾಯಿ ಹುಂಡಿಯ ಹಣ ಸಂಗ್ರಹವಾಗಿದೆ.

4.44 ಲಕ್ಷದ ಚಿನ್ನಾಭರಣ,2.29 ಲಕ್ಷ ಮೌಲ್ಯದ ಬೆಳ್ಳಿ ಆಭರಣ‌ ಸೇರಿ 1.37 ಕೋಟಿ ದೇಣಿಗೆ ಹರಿದುಬಂದಿದೆ.ಶ ಕ್ತಿ ಯೋಜನೆಯ ಎಫೆಕ್ಟ್ ನಿಂದ ಮಹಿಳಾ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಕೇವಲ 45 ದಿನಗಳಲ್ಲಿಯೇ ದೇಣಿಗೆ ಸಂಗ್ರಹದಲ್ಲಿ ಭಾರೀ ಪ್ರಮಾಣದಲ್ಲಿ ‌ಏರಿಕೆಯಾಗಿದೆ.

ಈ‌ ಮೊದಲು ಜೂನ್ ‌ತಿಂಗಳಲ್ಲಿ ಅಂದಾಜು 70 ಲಕ್ಷ ರೂ ಕಾಣಿಕೆ ಸಂಗ್ರವಾಗುತ್ತಿತ್ತು. ಶಕ್ತಿ ಯೋಜನೆ‌ ಪರಿಣಾಮ 45 ದಿನಗಳ ಅವಧಿಯಲ್ಲಿ ಭಕ್ತರ ಸಂಖ್ಯೆ ಎರಡುಪಟ್ಟು ಹೆಚ್ಚಳಗೊಂಡಿದೆ.

Check Also

ವಕ್ಫ್ ವಿವಾದ,ಇಂದು ಬೆಳಗಾವಿಯಲ್ಲಿ ಒಂದೇ ದಿನ ಪರ,ವಿರೋಧ ಧರಣಿ

ಬೆಳಗಾವಿ- ವಕ್ಫ್ ಬೋರ್ಡ್ ನಿಂದ ರೈತರಿಗೆ ಜಾರಿಯಾಗಿರುವ ನೋಟೀಸ್ ಗಳ ಕುರಿತು ರಾಜ್ಯಾದ್ಯಂತ ವಿವಾದ ಸೃಷ್ಠಿಯಾಗಿದ್ದು ಈ ಕುರಿತು ಇವತ್ತು …

Leave a Reply

Your email address will not be published. Required fields are marked *