ಬೆಳಗಾವಿ-ಸಿಎಂ ಸಿದ್ದರಾಮಯ್ಯ ಬೆಳಗಾವಿ ಪ್ರವಾಸ ವೇಳೆಯೇ ಜಿಲ್ಲಾ ಕಾಂಗ್ರೆಸ್ ನಾಯಕರ ವೈಮನಸ್ಸು ಇದೆ ಅನ್ನೋ ವಿಚಾರ ಬಹಿರಂಗವಾಗಿದೆ.ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲೂ ಶುರುವಾಗಿದೆಯಾ ಜಾರಕಿಹೊಳಿ ವರ್ಸಸ್ ಅದರ್ಸ್? ಎನ್ನುವ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.
ಅಥಣಿಯಲ್ಲೇ ಇದ್ದರೂ ಸಹ ಸಿಎಂ ಸಿದ್ದರಾಮಯ್ಯ ಸ್ವಾಗತಕ್ಕೆ ಸಚಿವ ಸತೀಶ್ ಜಾರಕಿಹೊಳಿ ಹೋಗಲಿಲ್ಲ.ಅಥಣಿ ಪ್ರವಾಸ ಮಂದಿರದಲ್ಲಿದ್ದರೂ ಹೆಲಿಪ್ಯಾಡ್‌ಗೆ ಗೋಕಾಕ್ ಸಾಹುಕಾರ ಸಚಿವ ಸತೀಶ್ ಜಾರಕಿಹೊಳಿ ಹೋಗಲೇ ಇಲ್ಲ.
ಮುಖ್ಯಮಂತ್ರಿ ಸಿದ್ರಾಮಯ್ಯ,ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಅವರು ಅಥಣಿಗೆ ಬಂದ ತಕ್ಷಣ,ಅಥಣಿ ಶಾಸಕ ಲಕ್ಷ್ಮಣ್ ಸವದಿ ನಿವಾಸಕ್ಕೂ ಹೋಗಬಹುದು ಎನ್ನುವ ಮುಂದಾಲೋಚನೆ ಸಚಿವ ಸತೀಶ್ ಜಾರಕಿಹೊಳಿ ಅವರಿಗಿತ್ತು ಹೀಗಾಗಿ ಅವರು ಪ್ರವಾಸಿ ಮಂದಿರದಲ್ಲೇ ಇದ್ದರು.
ಲಕ್ಷ್ಮಣ್ ಸವದಿ ನಿವಾಸಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಜಿಲ್ಲೆಯ ಬಹುತೇಕ ಕೈ ಶಾಸಕರೂ ಅಗಮಿಸದರೂ ಸಚಿವ ಸತೀಶ್ ಜಾರಕಿಹೊಳಿ ಮಾತ್ರ ದೂರ ಉಳಿದರು.
ಸಚಿವ ಸತೀಶ್ ಜಾರಕಿಹೊಳಿ ಅವರು ಸೈದ್ಧಾಂತಿಕ,ವೈಚಾರಿಕ ಚರಿತ್ರೆ ಇರುವ ನಾಯಕ,ಸಣ್ಣಪುಟ್ಟ ವಿಚಾರಗಳಿಗೆ ಯಾವತ್ತೂ ತಲೆ ಕೆಡಿಸಿಕೊಂಡವರಲ್ಲ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಸತೀಶ್ ಜಾರಕಿಹೊಳಿ ಅವರಿಗೆ ತಮ್ಮ ನಿವಾಸಕ್ಕೆ ಬರುವಂತೆ ಬಹುಶ ಆಮಂತ್ರಣ ನೀಡಿರಲಿಲ್ಲವೋ,?ಅಥವಾ ಸತೀಶ್ ಜಾರಕಿಹೊಳಿ ಅವರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲವೋ ? ಸಿಎಂ ಡಿಸಿಎಂ ಅವರು ಲಕ್ಷ್ಮಣ ಸವದಿ ಅವರ ಮನೆಗೆ ಹೋಗುವ ಕಾರ್ಯಕ್ರಮ ಮೊದಲೇ ನಿಗದಿ ಆಗಿರಲಿಲ್ಲವೋ ಎನ್ನುವ ಅನೇಕ ವಿಚಾರಗಳ ಬಗ್ಗೆ ಚರ್ಚೆ ಶುರುವಾಗಿದೆ.