ನಾಯಿಗಳ ದಾಳಿಯಿಂದ ಗಾಯಗೊಂಡಿರುವ ಬಾಲಕ ಅರ್ಕಾನ್
ಬೆಳಗಾವಿ- ಬೆಳಗಾವಿ ನಗರದ ಗಲ್ಲಿ ಗಲ್ಲಿ ಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ, ಮಕ್ಕಳು ಆಟವಾಡಲು ಮನೆಯ ಅಂಗಳಕ್ಕೆ ಕಾಲಿಟ್ಟರೆ ಸಾಕು ಬೀದಿನಾಯಿಗಳ ಬೊವ್ ಬೊವ್ ಶುರುವಾಗುತ್ತದೆ ಈ ದೃಶ್ಯ ಬೆಳಗಾವಿ ನಗರದಲ್ಲಿ ಸಾಮಾನ್ಯವಾಗಿದೆ.
ಇಂದು ಭಾನುವಾರ ಬೆಳಗಾವಿ ನಗರದ ಆಝಂ ನಗರ ಸರ್ಕಲ್ ನಲ್ಲಿ ಎಂಟು ವರ್ಷದ ಬಾಲಕನ ಮೇಲೆ ನಾಯಿಗಳ ಹಿಂಡು ಅಟ್ಯಾಕ್ ಮಾಡಿ ಬಾಲಕನ ದೇಹದ ತುಂಬೆಲ್ಲಾ ಕಚ್ಚಿವೆ.ನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಬಾಲಕ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ನಾಯಿಗಳ ದಂಡು ಎಂಟು ವರ್ಷದ ಬಾಲಕ,ಅರ್ಕಾನ್ ರಿಯಾಜ್ ಅತ್ತಾರ್ ಎಂಬಾತನ ಮೇಲೆ ಬೆಳಗಾವಿಯ ಆಝಂ ನಗರ ಸರ್ಕಲ್ ಬಳಿ ಅಟ್ಯಾಕ್ ಮಾಡಿವೆ,ಸುಮಾರು ಎಂಟರಿಂದ ಹತ್ತು ನಾಯಿಗಳು ಬಾಲಕನ ಮೈತುಂಬ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ.
ಬೀದಿ ನಾಯಿಗಳ ಹಾವಳಿ ಬೆಳಗಾವಿ ನಗರದ ತುಂಬೆಲ್ಲಾ ಹೆಚ್ಚಾಗಿದ್ದು ಈ ಬಗ್ಗೆ ಬೆಳಗಾವಿಯ ಪಾಲಿಕೆ ಅಧಿಕಾರಿಗಳು ತುರ್ತಾಗಿ ಕಾರ್ಯಾಚರಣೆ ನಡೆಸಿ ಬೀದಿ ನಾಯಿಗಳ ಉಪಟಳವನ್ನು ತಪ್ಪಿಸುವುದು ಅಗತ್ಯವಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
