ಚಿಕ್ಕೋಡಿ-ಚಾಕುವಿನಿಂದ ಬಾವನ ಕತ್ತು ಸೀಳಿ ಬಾಮೈದನೇ ಕೊಲೆ ಮಾಡಿದ ಘಟನೆ,ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ವಿದ್ಯಾನಗರದಲ್ಲಿ ನಡೆದಿದೆ.
ಕತ್ತು ಸೀಳಿ ನಿವೃತ್ತ ಯೋಧ ಈರಗೌಡ ಟೋಪಗೋಳ(45) ಹತ್ಯೆ ಮಾಡಲಾಗಿದೆ.ಕೊಲೆಯಾದ ಈರಗೌಡ ಪತ್ನಿಯ ಸಹೋದರ ಸಂಜಯ್ ಭಾಕರೆಯಿಂದ ಕೃತ್ಯ ನಡೆದಿದೆ.ಸೇನೆಯಿಂದ ವಾಪಸ್ ಆದ ಬಳಿಕ ಸ್ಟೋನ್ ಕ್ರಷರ್ ಘಟಕ ನಡೆಸುತ್ತಿದ್ದ ಈರಗೌಡ,ಮೂಲತಃ ಜೈನಾಪುರ ಗ್ರಾಮದ ನಿವಾಸಿಯಾಗಿದ್ದ.
ಇಂದು ಸಂಜೆ ಬಾವ ಈರಗೌಡ ಭೇಟಿಗೆ ಆಗಮಿಸಿದ್ದ ಸಂಜಯ್,ಈ ವೇಳೆ ಪತ್ನಿ ಮನೆಯೊಳಗೆ ಇದ್ದಾಗ ಚಾಕುವಿನಿಂದ ಈರಗೌಡ ಕತ್ತು ಸೀಳಿದ ಸಂಜಯ್ ಬಾವನ ಕೊಲೆ ಮಾಡಿದ್ದಾನೆ.
ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಸಂಜಯ್ ಟೋಪಗೋಳ ಮೃತಪಟ್ಟಿದ್ದಾನೆ.ಕೌಟುಂಬಿಕ ಕಲಹ ಹಿನ್ನೆಲೆ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಮೃತದೇಹ ಶಿಫ್ಟ್ ಮಾಡಲಾಗಿದೆ. ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ