ಬೆಳಗಾವಿ-ಈ ದಿನ ಬೆಳಗಾವಿ ಮಾತೃ ಭಾರತಿ ಸಂಸ್ಕೃತಿ ಸಮ್ಮೇಳನ. ಬೆಳಗಾವಿ ನಗರದ ಸಂತ ಮೀರಾ ಶಾಲೆಯಲ್ಲಿ ಜರುಗಿತು.ಒಟ್ಟು ೫ ಶಾಲೆಗಳಿಂದ ೧೩೦ ಮಾತೆಯರು ಭಾಗವಹಿಸಿದ್ದರು.
ಮುಖ್ಯ ವಕ್ತಾರರಾಗಿ ಶ್ರೀಮತಿ ತೃಪ್ತಿ ಹಿರೇಮಠ ಅವರು “ಮನೆಯೇ j toಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು” ಈ ವಿಷಯ ಡಾ . ಸೋನಾಲಿ ಸರ್ನೋಬತ ಅವರು “ಸಹಜವಾಗಿ ವ್ಯಕ್ತಿತ್ವ ವಿಕಸನ,ಆಹಾರ,ಸಮಯದ ಸದುಪಯೋಗ ” ಈ ವಿಷಯ ಕುರಿತು ಮಾತನಾಡಿದರು.
ಸಮ್ಮೇಳನದ ಅಧ್ಯಕ್ಷರಾಗಿ ಶ್ರೀಮತಿ ಪ್ರಿಯಾ ಪುರಾಣಿಕ್ ಮಾತನಾಡಿದರು
ವಿದ್ಯಾ ಭಾರತಿ ಪ್ರಾಂತ ಅಧ್ಯಕ್ಷರಾದ ಶ್ರೀ. ಪರಮೇಶ್ವರ ಹೆಗಡೆ, ಜಿಲ್ಲಾ ಅಧ್ಯಕ್ಷರಾದ ಶ್ರೀ ಮಾಧವ ಪುಣೇಕರ,ಜಿಲ್ಲಾ ಉಪಾಧ್ಯಕ್ಷ ರಾದ ಶ್ರೀ ರಾಮನಾಥ್ ನಾಯಕ ಪ್ರಾಂತ ಸಹ ಕಾರ್ಯದರ್ಶಿ ಶ್ರೀಮತಿ ಸುಜಾತಾ ದಪ್ತರದಾರ, ಶಾಲಾ ಆಡಳಿತ ಅಧಿಕಾರಿ ಶ್ರೀ ರಾಘವೇಂದ್ರ ಕುಲಕರ್ಣಿ ಉಪಸ್ಥಿತರಿದ್ದರು.
ನವೆಂಬರ್ ನಲ್ಲಿ ನಡೆಯುವ ಮಾತೃ ಭಾರತಿ ಪ್ರಾಂತ ಸಮ್ಮೇಳನದ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದ ನಿರೂಪಣೆ ಶ್ರೀಮತಿ ಸರೋಜಾ ಕಟಗೇರಿ, ಪ್ರಾರ್ಥನೆ ಶ್ರೀಮತಿ ಅಮೃತಾ ಪೇಟಕರ ಶ್ರೀಮತಿ ರೀಟಾ ದೊಂಗಡಿ, ಅತಿಥಿಗಳ ಪರಿಚಯ ಮತ್ತು ಸ್ವಾಗತ ಶ್ರೀಮತಿ ಅರುಣಾ ಪುರೋಹಿತ ವಂದನಾರ್ಪಣೆ ಮಾತೃ ಭಾರತಿ ಸದಸ್ಯೆ ಶ್ರೀಮತಿ ಭಾಗ್ಯಶ್ರೀ ಶಾಬಾದಿ.
ಜಿಲ್ಲಾ ಮಾತೃ ಭಾರತಿ ಪ್ರಮುಖರಾದ ಶ್ರೀಮತಿ ತಿಲೋತ್ತಮಾ ಗುಮಾಸ್ತೆಸಹ ಪ್ರಮುಖರಾದ ಶ್ರೀಮತಿ ವೀಣಾ ಜೋಶಿ ಹಾಗೂ ಶ್ರೀಮತಿ ಸವಿತಾ ಪಾಟಣಕರ , ಶ್ರೀಮತಿ ಸೀಮಾ ಕಾಮತ ಇವರೆಲ್ಲರ ಸಹಕಾರದಿಂದ,
ಶಾಂತಿ ಮಂತ್ರ ದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು